ಬಿ ಸರೋಜಾ ದೇವಿ ಅವರ ಮೊದಲ ಸಿನಿಮಾ ಯಾವುದು ಮತ್ತು ಅವರು ಚಿತ್ರರಂಗಕ್ಕೆ ಬಂದಾಗ ವಯಸ್ಸು ಎಷ್ಟಿತ್ತು ಗೊತ್ತ?
B Saroja Devi : ಕನ್ನಡ ಸಿನಿಮಾದಿಂದ ಬಿ ಸರೋಜಾ ದೇವಿ ಅವರ ಪಯಣ ಇಂದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಯವರೆಗೂ ಹಬ್ಬಿದೆ.
B Saroja Devi : ತಮ್ಮ ಅಮೋಘ ಅಭಿನಯದ ಮೂಲಕ ಅದೊಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಸುರದ್ರೂಪ ನಟಿ ಬಿ ಸರೋಜಾದೇವಿ (Actress B Saroja Devi) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ?
ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಈ ನಟಿ ಯಾವ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು? ಇವರ ಮೊದಲ ಸಿನಿಮಾ ಯಾವುದು? ಎಂಬ ಕುತೂಹಲಕಾರಿ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?
ಹೌದು ಗೆಳೆಯರೇ ಮೂಲತಃ ಬೆಂಗಳೂರಿನವರೇ ಆದಂತಹ ಸರೋಜಾ ದೇವಿಯವರು 7ನೇ ತಾರೀಕು ಜನವರಿ 1938 ರಂದು ಜನಿಸಿದರು. ಹೀಗೆ ವಿದ್ಯಾಭ್ಯಾಸ ಹಾಗೂ ಸಣ್ಣಪುಟ್ಟ ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಂತಹ ಸರೋಜಾ ದೇವಿಯವರು ತಮ್ಮ 18ನೇ ವಯಸ್ಸಿನಲ್ಲಿ ಹೊನ್ನಪ್ಪ ಭಾಗವತರ್ ರವರ ಮಹಾಕವಿ ಕಾಳಿದಾಸ ಸಿನಿಮಾದ ಮೂಲಕ 1955ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ಈ ಒಂದು ಸಿನಿಮಾದಲ್ಲಿ ಬಿ ಸರೋಜಾ ದೇವಿಯವರು ಪೋಷಕ ಪಾತ್ರ ಒಂದನ್ನು ನಿರ್ವಹಿಸಿದ್ದರು. ಕನ್ನಡ ಸಿನಿಮಾದಿಂದ (Kannada Cinema Industry) ಶುರುವಾದಂತ ಇವರ ಪಯಣ ಇಂದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಯವರೆಗೂ ಹಬ್ಬಿದೆ.
ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ಅನಂತರ ಪಾಂಡುರಂಗ ಮಹಾತ್ಮೆ ಎಂಬ ತೆಲುಗು ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಬ್ರೇಕ್ ಪಡೆದಂತಹ ಸರೋಜಾ ದೇವಿಯವರಿಗೆ ಅದಾಗಲೇ ಯಶಸ್ಸೆಂಬುದು ಅರಸಿ ಬಂದಿತ್ತು.
ಹೀಗೆ ನಾಡೋಡಿ ಮನ್ನನ್ ಎಂಬ 1958 ರಲ್ಲಿ ತೆರೆಕಂಡ ತಮಿಳು ಸಿನಿಮಾ ಇವರನ್ನು ನಾಯಕ ನಟಿಯನ್ನಾಗಿ ತಮಿಳುನಾಡಿನ ಜನತೆಗೆ ಪರಿಚಯ ಮಾಡುತ್ತದೆ. ಹೀಗೆ ಇಲ್ಲಿಂದ ಮತ್ತೆಂದೂ ಹಿಂದಿರುಗಿ ನೋಡದಂತಹ ಅಭಿನಯದ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಬಿ ಸರೋಜಾ ದೇವಿಯವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮ ವೃತ್ತಿ ಬದುಕಿನ ತಾರಕಕ್ಕೆ ಏರುತ್ತಾರೆ.
ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?
ಆನಂತರ ಚಿಂತಾಮಣಿ, ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣ ಕುಮಾರಿ, ಪಾಂಡುರಂಗ ಮಹತ್ಯಂ, ಪಡಗೊಟ್ಟಿ, ತಾಳಿ ಭಾಗ್ಯಂ ಸೇರಿದಂತೆ ಸಾಲು ಸಾಲು ಸಿನಿಮಾಗಳ ಡಾಕ್ಟರ್ ರಾಜಕುಮಾರ್, ಶಿವಾಜಿ ಗಣೇಶನ್, ಎನ್ಟಿಆರ್ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವ ಭಾಗ್ಯವನ್ನು ಕಲ್ಪಿಸಿಕೊಂಡು 150ಕ್ಕು ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದರು.
ಇನ್ನು ಪತಿಯ ಅಗಲಿಕೆಯ ನಂತರ ಸ್ವಲ್ಪ ಮಟ್ಟಕ್ಕೆ ಕುಗ್ಗಿ ಹೋದಂತಹ ನಟಿ ಸರೋಜಾ ದೇವಿಯವರು ತಮ್ಮ ಮಕ್ಕಳ ಹಾಗೂ ಮನೆಯವರ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತು ಸ್ವಲ್ಪ ದಿನಗಳ ಕಾಲ ಸಿನಿಮಾ ರಂಗದಿಂದ ಬ್ರೇಕ್ ಪಡೆದು ಅನಂತರ ಮತ್ತೆ ಪೋಷಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ಮತ್ತೆ ಕಂಬ್ಯಾಕ್ ಮಾಡಿದರು.
ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವಂತಹ ಈ ನಟಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ತಾಯಿ ಹಾಗೂ ಪತಿಯ ಹೆಸರಿನಲ್ಲಿ ಅನೇಕ ದಾನ ಧರ್ಮಗಳನ್ನು ಮಾಡುತ್ತಿರುತ್ತಾರೆ.
ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?
ಅಲ್ಲದೆ ಇವರ ಹೆಸರಿನಲ್ಲಿ ಸಾಕಷ್ಟು ಚಾರಿಟೇಬಲ್ ಟ್ರಸ್ಟ್ಗಳು ದಾನ ಶಿಬಿರಗಳಿದ್ದು, ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು 2019 ರಲ್ಲಿ ತೆರೆಕಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲಿ ನಟಿ ಸರೋಜಾ ದೇವಿಯವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹೀಗೆ ಹಲವಾರು ದಶಕಗಳ ಕಾಲ ಸರೋಜಾದೇವಿ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವುದು ಹೆಮ್ಮೆಯ ವಿಚಾರವೇ ಸರಿ.
Do you know what was B Saroja Devi first movie and when she entered the film industry
Follow us On
Google News |