ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ನಟಿಸುವುದರ ಜೊತೆಗೆ ನಿರ್ದೇಶನವನ್ನು ಮಾಡಿರುವಂತಹ ಉಪೇಂದ್ರ ಅವರು 1993ರಲ್ಲಿ ಹಾರರ್ ಥ್ರಿಲ್ಲರ್ ಚಿತ್ರವಾದ ಶ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಒಂದು ಸಿನಿಮಾದಲ್ಲಿ ಕುಮಾರ್ ಗೋವಿಂದ್, ಕಾಶೀನಾಥ್ ಮತ್ತು ಸುರೇಶ್ ಹೆಬ್ಬಾಳ್ಕರ್ ನಟಿಸಿದರು.
ಸ್ನೇಹಿತರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ ಕೂಡ ತಮ್ಮ ಅಮೋಘ ಪ್ರತಿಭೆಯ ಅನಾವರಣ ಗೊಳಿಸಿರುವಂತಹ ಸಾಕಷ್ಟು ಕಲಾವಿದರಲ್ಲಿ ಉಪೇಂದ್ರ (Real Star Upendra) ಅವರು ಒಬ್ಬರು.
ಹೌದು ಗೆಳೆಯರೇ ಉಪೇಂದ್ರ (Actor Upendra) ನಟನೆಯಲ್ಲಿ ಹೇಗೆ ಭಿನ್ನತೆ ಕೂಡಿರುತ್ತದೋ ಅದೇ ರೀತಿ ನಿರ್ದೇಶನದಲ್ಲಿಯೂ ಒಂದು ಹೆಜ್ಜೆ ಮುಂದೆ ಹೋಗಿ ಯಾರ ಸಿನಿಮಾದಲ್ಲಿಯೂ ಕಾಣದಂತಹ ಕೆಲವು ವಿಶೇಷತೆಗಳನ್ನು ಅಳವಡಿಕೆ ಮಾಡಿರುತ್ತಾರೆ.
ಹೀಗಾಗಿ ಉಪೇಂದ್ರ ಅವರ ಸಿನಿಮಾ ತಯಾರಾಗುತ್ತಿದೆ ಎಂದರೆ ಅದು ಬಾಕ್ಸ್ ಆಫೀಸ್ ನಲ್ಲಿ (Box Office) ಧೂಳ್ ಎಬ್ಬಿಸುವುದು ಪಕ್ಕ ಎಂದು ಲೆಕ್ಕಾಚಾರ ಹಾಕುತ್ತಿದ್ದಂತಹ ಕಾಲವದು.
ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?
ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನು ಮಾಡಿರುವಂತಹ ಉಪೇಂದ್ರ ಅವರು 1993ರಲ್ಲಿ ಹಾರರ್ ಥ್ರಿಲ್ಲರ್ ಚಿತ್ರವಾದ ಶ್ ಸಿನಿಮಾಗೆ (Shhh Kannada Horror Cinema) ಆಕ್ಷನ್ ಕಟ್ ಹೇಳಿದರು. ಈ ಒಂದು ಸಿನಿಮಾದಲ್ಲಿ ಕುಮಾರ್ ಗೋವಿಂದ್, ಕಾಶೀನಾಥ್ ಮತ್ತು ಸುರೇಶ್ ಹೆಬ್ಬಾಳ್ಕರ್ ನಟಿಸಿದರು.
ಜೊತೆ ಜೊತೆಗೆ ಬೇಬಿ ರಶ್ಮಿ, ಮೇಘ ಮತ್ತು ಎನ್ ಬಿ ಜಯಪ್ರಕಾಶ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಹೀಗೆ ಬಹು ದೊಡ್ಡ ತಾರ ಬಳಗದಲ್ಲಿ ತಯಾರದಂತಹ ಈ ಒಂದು ಹಾರರ್ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತದೆ ಎಂದು ಯಾರು ಸಹ ಊಹಿಸಿರಲಿಲ್ಲ. ಹೌದು ಗೆಳೆಯರೇ ಪಾತ್ರದ ಕಥಾವಸ್ತು ಹಾಗೂ ವಿಭಿನ್ನ ನಿರ್ದೇಶನ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು.
ನಟಿ ಪವಿತ್ರ ಲೋಕೇಶ್ ತಂದೆ ನಟ ಮೈಸೂರು ಲೋಕೇಶ್ ಅವರ ಕೊನೆಯ ದಿನಗಳು ಹೇಗಿತ್ತು ಗೊತ್ತಾ? ಇಲ್ಲಿದೆ ಅವರ ಕಣ್ಣೀರ ಕಥೆ
ಇನ್ನು ಉಪೇಂದ್ರ ಅವರು ಕೂಡ ಈ ಒಂದು ಸಿನಿಮಾದಲ್ಲಿ ಡಮ್ಮಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅತಿಥಿ ಪಾತ್ರದಲ್ಲಿ ನಟಿಸಿದರೆ, ನಟ ಸಾಧುಕೋಕಿಲ ಅವರ ಪ್ರಥಮ ಚಿತ್ರ ಇದಾಗಿತ್ತು, ನಟನೆಯ ಜೊತೆಗೆ ಅವರ ಅದ್ಭುತ ಸಂಗೀತವು ಈ ಸಿನಿಮಾಗೆ ದೊರಕಿತ್ತು.
ಹೀಗೆ ಡಿಸೆಂಬರ್ ಮೂರನೇ ತಾರೀಕು 1993 ರಂದು ತೆರೆ ಕಂಡಂತಹ ಈ ಒಂದು ಸಿನಿಮಾ ಬರೋಬ್ಬರಿ ಐದು ಕೋಟಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದ ಅದ್ಭುತ ಹಾರರ್ ಚಿತ್ರ ಎಂಬ ಪಟ್ಟಿಗೂ ಸೇರಿಕೊಂಡಿತು.
ನಟ ಶಶಿಕುಮಾರ್ ಗೆ ಅಪಘಾತವಾದಾಗ ಅವರ ಪತ್ನಿ ಅನುಭವಿಸಿದಂತಹ ಸಂಕಟ ಅಷ್ಟಿಷ್ಟಲ್ಲ! ಅಷ್ಟಕ್ಕೂ ಅಂದು ಆಗಿದ್ದೇನು ಗೊತ್ತಾ?
ಹೌದು ಗೆಳೆಯರೇ ಈ ಚಿತ್ರವು ಹಿಟ್ ಪಟ್ಟಿಗೆ ಸೇರಿಕೊಂಡಿತ್ತು, ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳು ಆಗಿನ ಕಾಲದಲ್ಲಿ ಬಹಳಾನೇ ಕಮ್ಮಿ ಇದ್ದವು. ಶ್ ಸಿನಿಮಾ ಬಿಡುಗಡೆಯಾದ ನಂತರ ಇದರದ್ದೇ ವಿಶೇಷ ಟ್ರೆಂಡ್ ಕೂಡ ಸೃಷ್ಟಿ ಆಯ್ತು ಎಂದರೆ ತಪ್ಪಾಗಲಾರದು.
ಇನ್ನು ಉಪೇಂದ್ರ ಅವರನ್ನು ನಿರ್ದೇಶಕರನ್ನಾಗಿ ಸ್ಥಾಪಿಸಿದ ಈ ಒಂದು ಸಿನಿಮಾ 26 ಸಿನಿಮಾ ಮಂದಿರಗಳಲ್ಲಿ ಬರೋಬ್ಬರಿ ನೂರು ದಿನಗಳನ್ನು ಪೂರೈಸುವ ಮೂಲಕ ದಾಖಲೆಗಳ ಮೇಲೆ ದಾಖಲೆಯನ್ನು ಪಡೆದುಕೊಂಡಿತು.
ಅವಕಾಶಗಳು ಸಿಕ್ಕರೂ ಡಾ.ರಾಜಕುಮಾರ್ ಅವರೊಂದಿಗೆ ರವಿಚಂದ್ರನ್ ನಟಿಸದಿರಲು ಕಾರಣವೇನು ಗೊತ್ತಾ?
ಅಲ್ಲದೆ ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ದೊರಕಿತ್ತು. ಒಟ್ಟಾರೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ತನ್ನದೇ ಆದ ಖ್ಯಾತಿ ಪಡೆದು ತನ್ನದೇ ಆದ ವಿಶಿಷ್ಟ ಕಥಾಹಂದರ ಹೊಂದಿರುತ್ತದೆ.
Do you know the Total Collections of Kannada horror Cinema Shhh Directed By Upendra