ಅವಕಾಶಗಳು ಸಿಕ್ಕರೂ ಡಾ.ರಾಜಕುಮಾರ್ ಅವರೊಂದಿಗೆ ರವಿಚಂದ್ರನ್ ನಟಿಸದಿರಲು ಕಾರಣವೇನು ಗೊತ್ತಾ?
ಯಾವ ಕಾರಣದಿಂದ ರವಿಚಂದ್ರನ್ ಹಾಗೂ ರಾಜ್‌ಕುಮಾರ್ ಜೋಡಿ ಒಟ್ಟಿಗೆ ಕೆಲಸ ಮಾಡಲಿಲ್ಲ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟ್ಟಿದ ಮುಖಾಂತರ ತಿಳಿಸ ಹೊರಟಿದ್ದೇವೆ.
ಸ್ನೇಹಿತರೆ, 80-90 ರ ದಶಕದಲ್ಲಿ ನಮ್ಮ ಕನ್ನಡ ಸಿನಿಮಾರಂಗಕ್ಕೆ (Kannada Film Industry) ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಎಂಟ್ರಿಕೊಟ್ಟು ಚಂದನವನವನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಮೈಲಿಗಲ್ಲನ್ನು ಹಾಕಿದರು ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಈ ಅವಧಿಯಲ್ಲಿ ಕನ್ನಡ ಸಿನಿಮಾ (Kannada Cinema) ರಂಗಕ್ಕೆ ಸಾಕಷ್ಟು ಸ್ಟಾರ್ ಕಲಾವಿದರ ಆಗಮನವಾಯಿತು. ಅದರಲ್ಲಿ ರವಿಚಂದ್ರನ್ (Actor Ravichandran) ಕೂಡ ಒಬ್ಬರು. ಹೌದು ಗೆಳೆಯರೇ ತಮ್ಮ ಅಮೋಘ ಅಭಿನಯದ ಮೂಲಕ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ನಿರ್ದೇಶಕ, ನಿರ್ಮಾಪಕ ಹಾಗೂ ನಟನಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು ರವಿಚಂದ್ರನ್.
ರವಿಚಂದ್ರನ್ ಅವರು ಆಗಿನ ಕಾಲದ ಸಾಕಷ್ಟು ಸೂಪರ್ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚಿದರು ಕೂಡ ಅವಕಾಶಗಳು ಸಿಕ್ಕರು ಅಣ್ಣಾವ್ರೊಂದಿಗೆ (Dr Rajkumar) ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಾಗಲಿಲ್ಲ.
ಅಷ್ಟಕ್ಕೂ ಯಾವ ಕಾರಣದಿಂದ ರವಿಚಂದ್ರನ್ ಹಾಗೂ ರಾಜ್‌ಕುಮಾರ್ ಜೋಡಿ ಒಟ್ಟಿಗೆ ಕೆಲಸ ಮಾಡಲಿಲ್ಲ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟ್ಟಿದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರಾಜಕುಮಾರ್ ಅವರನ್ನು ಹೊರತುಪಡಿಸಿ ರವಿಚಂದ್ರನ್ ಅವರು ಬೇರೆಯಲ್ಲ ಕಲಾವಿದರೊಂದಿಗೆ ನಟಿಸಿದ್ದಾರೆ. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಆರಂಭದ ಪ್ರೇಮಲೋಕದಿಂದ ಸಾಹುಕಾರದವರೆಗೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಸಾಹಸಸಿಂಹ ಮತ್ತು ಕನಸುಗಾರನ ಜುಗಲ್ಬಂದಿ ಏನು ಎಂಬುದನ್ನು ಅಭಿಮಾನಿಗಳಿಗೆ ತೋರಿಸಿ ತೆರೆಯ ಮೇಲೂ ಕೂಡ ತುಂಬಾನೇ ಸೊಗಸಾದ ಜೋಡಿ ಎನ್ನುವುದನ್ನು ನಿರೂಪಿಸಿದರು
ಇನ್ನು ಅಂಬರೀಶ್, ಶಂಕರನಾಗ್, ಪ್ರಭಾಕರ್, ಶ್ರೀನಾಥ್ ಹೀಗೆ ಬಹಳ ಅಧಿಕ ಜನರೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡು ತಮ್ಮೊಳಗಿನ ಕಲಾವಿದನನ್ನು ಮತ್ತು ತಮ್ಮ ಜೋಡಿಯ ಜುಗಲ್ಬಂದಿ ಏನು ಎಂದು ಅಭಿಮಾನಿಗಳಿಗೆ ತೋರಿಸಿದ್ದಾರೆ.
ರವಿಚಂದ್ರನ್ ಅವರು ಎಲ್ಲ ಬಗೆಯ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡರೂ ಅಣ್ಣಾವ್ರೊಂದಿಗೆ ನಟಿಸುವ ಸುಯೋಗ ಕೂಡಿಬರಲಿಲ್ಲ.
ಹೌದು ಗೆಳೆಯರೇ ರವಿಚಂದ್ರನ್ ಅವರು ಬಾಲ ಕಲಾವಿದನಾಗಿದ್ದಾಗ ಅಣ್ಣವರೊಂದಿಗೆ ಸಿನಿಮಾ ಒಂದರಲ್ಲಿ ಅಭಿನಯಿಸಿದರು. ಆದರೆ ಓರ್ವ ಸ್ಟಾರ್ ನಟನಾಗಿ ಬೆಳೆದ ನಂತರ ಒಟ್ಟಿಗೆ ಕೆಲಸ ಮಾಡಲು ಸಾಧ್ಯವೇ ಆಗಲಿಲ್ಲ ಎಂಬ ಬೇಸರವನ್ನು ರವಿಮಾಮ ಇಂದಿಗೂ ವ್ಯಕ್ತಪಡಿಸುತ್ತಾರೆ.
ಇದಕ್ಕೆ ಮುಖ್ಯ ಕಾರಣ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ಆರಂಭಿಕ ದಿನಗಳಲ್ಲಿ ರವಿಚಂದ್ರನ್ ಅವರು ಒಂದರ ಮೇಲೊಂದರಂತೆ ಸಿನಿಮಾಗಳನ್ನು ನೀಡುತ್ತಾ ಬಹಳ ಬ್ಯುಸಿ ಇರುತ್ತಾರೆ.
ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?
ಅದರಂತೆ ಅಣ್ಣಾವ್ರು ಕೂಡ ಆಗಿನ ಕಾಲದಲ್ಲಿ ಬಹಳ ಪೀಕ್ನಲ್ಲಿ ಇದ್ದಂತಹ ನಟ, ವರ್ಷ ಒಂದರಲ್ಲಿ ಬರೋಬ್ಬರಿ 16 ರಿಂದ 18 ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಂತಹ ಅಣ್ಣಾವ್ರಿಗೂ ರವಿಚಂದ್ರನ್ ಅವರಿಗೂ ಒಟ್ಟಾಗಿ ಕಾಣಿಸಿಕೊಳ್ಳುವಂತಹ ಸಿನಿಮಾಗಳು ಹಾಗೂ ಅವಕಾಶಗಳು ಕೂಡಿ ಬಂದರೂ ಸಮಯದ ಅಭಾವದಿಂದಾಗಿ ನಟಿಸಲು ಸಾಧ್ಯವಾಗುತ್ತಿರಲಿಲ್ಲವಂತೆ.
Do you know the reason why Ravichandran did not act with Dr Rajkumar