Actor Shashi Kumar: ಸ್ನೇಹಿತರೆ ಚಾರ್ಮಿಂಗ್ ಫೇಸ್ ಅದ್ಭುತ ಅಭಿನಯ ಮಾತನಾಡುವ ಶೈಲಿ ಹಾಗೂ ಡ್ಯಾನ್ಸ್ ಎಲ್ಲದರಲ್ಲಿಯೂ ಕನ್ನಡಿಗರ ಹೃದಯ ಗೆದ್ದು ಆಗಿನ ಚಾಕಲೇಟ್ ಹೀರೋ ಎಂದೇ ಪ್ರಖ್ಯಾತಿ ಪಡೆದಿದ್ದಂತಹ ಶಶಿಕುಮಾರ್ (Actor Shashi Kumar) ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಕೇವಲ ಪೋಷಕ ನಟನ ಪಾತ್ರಗಳಲ್ಲಿ ಅಥವಾ ಖಳನಟನಾಗಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು.
ಆದರೆ ಇವರೊಳಗಿದ್ದಂತಹ ಆ ಒಂದು ಕಲೆಯ ಮೂಲಕ ಸುಪ್ರೀಂ ಹೀರೋ ಆಗಿ ಕನ್ನಡ ಸಿನಿಮಾ (Kannada Cinema) ರಂಗದ ಬಹು ಬೇಡಿಕೆಯ ನಾಯಕ ನಟನಾಗಿ ಸ್ಯಾಂಡಲ್ವುಡ್ ನಲ್ಲಿ ಕಮಾಲ್ ಮಾಡಿದವರು ಎಂದರೆ ತಪ್ಪಾಗಲಾರದು.
50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?
ಜೀವನದಲ್ಲಿ ಬಂದಂತಹ ಕಷ್ಟಗಳನ್ನೆಲ್ಲ ಎದುರಿಸಿ ಮತ್ತೆ ತಮ್ಮ ಹಳೆಯ ಜೀವನಕ್ಕೆ ಮರುಳಬೇಕು ಎಂಬ ಛಲ ಬಿಡದಂತೆ ಸಾಕಷ್ಟು ಏಳು ಬೀಳುಗಳಿದ್ದರು ಬಹು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವಂತಹ ಅದ್ಭುತವಾದ ನಟ ಶಶಿಕುಮಾರ್.
ಅವರು ಕನ್ನಡ ತೆಲುಗು ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಬರೋಬ್ಬರಿ 135ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ವಿಧವಿಧವಾದ ಪಾತ್ರಗಳಿಗೆ ಜೀವ ತುಂಬುತ್ತಾ ಮಹಾಲಕ್ಷ್ಮಿ ಮಾಲಶ್ರೀಯಂತಹ ಸುಂದರ ನಟಿಯರೊಂದಿಗೆ ತೆರೆ ಹಂಚಿಕೊಂಡು ಅದೆಷ್ಟೋ ಯುವತಿಯರ ಮನಸ್ಸನ್ನು ಗೆದ್ದಿದಂತಹ ಶಶಿಕುಮಾರ್ ಅವರು ಚಿರಂಜೀವಿ ಸುಧಾಕರ ಸಿನಿಮಾದ ಮುಖಾಂತರ ಚಂದನವನಕ್ಕೆ ಪಾದಾರ್ಪಣೆ ಮಾಡಿದರು.
ರಾಕಿಂಗ್ ಸ್ಟಾರ್ ಯಶ್ ಮೊದಲ ಪೇಮೆಂಟ್ ಎಷ್ಟು ಗೊತ್ತಾ? ಧಾರಾವಾಹಿಯಲ್ಲಿ ಯಶ್ ಪಡೆಯುತ್ತಿದ್ದ ಸಂಭಾವನೆ ವೈರಲ್
ಆನಂತರ ಸಾಕಷ್ಟು ಸಿನಿಮಾಗಳಲ್ಲಿ ವಿಲ್ಲನ್ ರೋಲ್ ಗಳ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿದ್ದಂತಹ ಶಶಿಕುಮಾರ್ ಅವರು ಸಿಬಿಐ ಶಂಕರ್, ಮೃತ್ಯುಂಜಯ, ಬಾರೆ ನನ್ನ ಮುದ್ದಿನ ರಾಣಿ, ರಾಣಿ ಮಹಾರಾಣಿ ಸೇರಿದಂತೆ ಹಲವರು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದಂತಹ ಅದ್ಭುತ ಕಲಾವಿದ.
ಹೀಗೆ ಪೊಲೀಸನ್ನ ಹೆಂಡತಿ ಎಂಬ ಸಿನಿಮಾದ ಮೂಲಕ ಕೇವಲ ಪೋಷಕ ನಟನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶಶಿಕುಮಾರ್ ನಾಯಕನಟನಾಗಿ ಬಡ್ತಿ ಪಡೆದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಇವರ ಅದ್ಭುತ ನಟನೆ ಹಾಗೂ ಅಲ್ಪಾವಧಿಯಲ್ಲಿ ಇವರು ಗಿಟ್ಟಿಸಿಕೊಂಡಿದಂತಹ ಫ್ಯಾನ್ ಬೇಸ್ ಹಾಗೂ ಡ್ಯಾನ್ಸಿಂಗ್ ಎಲ್ಲದಕ್ಕೂ ಕನ್ನಡ ಚಿತ್ರರಂಗ ತಲೆಬಾಗಿ ನಿಂತಿತ್ತು.
ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!
ಈ ಕಾರಣದಿಂದ ಸತತ ಸಿನಿಮಾಗಳ ಅವಕಾಶವನ್ನು ಶಶಿಕುಮಾರ್ ಪಡೆದುಕೊಂಡರು, ಇದುವರೆಗೂ 20ಕ್ಕೂ ಹೆಚ್ಚಿನ ಶಶಿಕುಮಾರ್ ಅಭಿನಯದ ಸಿನಿಮಾಗಳು ಶತ ದಿನವನ್ನು ಪೂರೈಸಿದ ಉದಾಹರಣೆಗಳು ಇವೆ. ಹೀಗೆ ನಾಯಕ ನಟನಾದ ಮೇಲೆ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಂತಹ ಶಶಿಕುಮಾರ್ ವರ್ಷ ಒಂದರಲ್ಲಿ ಬರೋಬ್ಬರಿ ಆರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಾ ಆಗಿನ ಸಿನಿಪ್ರೇಕ್ಷಕರನ್ನು ರಂಜಿಸಿದಂತಹ ಮಹಾನ್ ಕಲಾವಿದ.
ಆದರೆ ಇವರ ಬೇಡಿಕೆ ಬಹುದಿನಗಳ ಕಾಲ ಉಳಿಯಲ್ಲ, ಹೌದು ಗೆಳೆಯರೇ ಸಿನಿಮಾ ರಂಗ ಇವರನ್ನು ಯಾವುದೇ ಕಾರಣಕ್ಕೂ ದೂರ ತಳ್ಳದೇ ಇದ್ದರೂ ಕೂಡ ವಿಧಿ ಇವರ ಬಾಳಲ್ಲಿ ವಿಕೃತಿ ಮೆರೆಯಿತು.
ಹೌದು ಆಕ್ಸಿಡೆಂಟ್ ನಿಂದಾಗಿ ಮುಖದ ಮೇಲೆ ಸಾಕಷ್ಟು ಕಲೆಗಳು ಹಾಗೂ ಗಾಯಗಳಾಗುತ್ತದೆ. ಈ ಕಾರಣದಿಂದ ಶಶಿಕುಮಾರ್ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡರು ಆನಂತರ ಇವರ ಬೇಡಿಕೆ ಕುಸಿದು ಹೋಯಿತು.
how Actor Shashi Kumar became a leading Actor, Read The Story
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.