ಮಾಲಾಶ್ರೀ ಮತ್ತು ಶಶಿಕುಮಾರ್ ಲವ್ ಗಾಸಿಪ್ ಸೃಷ್ಟಿಯಾಗಿದ್ದು ಹೇಗೆ? ಈ ಕುರಿತು ಶಶಿಕುಮಾರ್ ಮಾಧ್ಯಮದಲ್ಲಿ ಹೇಳಿದ್ದೇನು ಗೊತ್ತಾ?

ಮಾಲಾಶ್ರೀ ಮತ್ತು ಶಶಿಕುಮಾರ್ ಅವರ ಸಂಬಂಧದ ವಿಚಾರ ಆಗಿನ ಕಾಲದಲ್ಲಿ ಬಹು ದೊಡ್ಡ ಅಲೆಯನ್ನು ಸೃಷ್ಟಿ ಮಾಡಿದ್ದು ಏಕೆ? ಇವರಿಬ್ಬರ ನಡುವೆ ಇದ್ದಂತಹ ಬಂಧವಾದರೂ ಎಂತದ್ದು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ, ಡಾಕ್ಟರ್ ರಾಜಕುಮಾರ್ ಅವರ ಕುಟುಂಬ (Dr Rajkumar Family) ಕನ್ನಡ ಸಿನಿಮಾ ರಂಗಕ್ಕೆ (Kannada Cinema) ನೀಡಿರುವಂತಹ ಕೊಡುಗೆ ಒಂದಲ್ಲ ಎರಡಲ್ಲ ಕೇವಲ ತಮ್ಮ ಕುಟುಂಬ ಹಾಗೂ ತಾವು ಮಾತ್ರ ಬೆಳೆಯಬೇಕು ಎಂಬ ಯಾವುದೇ ರೀತಿಯ ಸ್ವಾರ್ಥ ಇಲ್ಲದೆ ತಮ್ಮ ಸುತ್ತಮುತ್ತಲಿನವರು ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡು ಸಿನಿಮಾದ ಹಿರಿಮೆಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ಪಾರ್ವತಮ್ಮ ರಾಜಕುಮಾರ್ ಅವರ ಮಹಾದಾಸೆಯಾಗಿತ್ತು. ಈ ಕಾರಣದಿಂದಲೇ ಅದೆಷ್ಟೋ ಸ್ಟಾರ್ ನಟಿಯರನ್ನು ಹಾಗೂ ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಅವರಲ್ಲಿ ಮಾಲಾಶ್ರೀ (Actress Malashree) ಅವರು ಒಬ್ಬರು, ಹೌದು ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಸಿನಿಮಾದ (Nanjundi Kalyana Cinema) ಮೂಲಕ ತಮ್ಮ ಸಿನಿ ಪಯಣವನ್ನು ಪ್ರಾರಂಭ ಮಾಡಿದಂತಹ ಮಾಲಾಶ್ರೀ ಅವರು ಮತ್ತೆ ಹಿಂದಿರುಗಿ ನೋಡಿಯೇ ಇಲ್ಲ.

ವಿಷ್ಣುವರ್ಧನ್ ಅವರ ಆ ಸಿನಿಮಾ ನಾನು ಮಾಡಬೇಕಿತ್ತು ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ?

ಹೌದು ಗೆಳೆಯರೇ ಅದೆಷ್ಟೋ ಉದಾಹರಣೆಗಳಲ್ಲಿ ಸ್ವತಃ ಡಾಕ್ಟರ್ ರಾಜಕುಮಾರ್ ಅವರ ದಾಖಲೆಗಳನ್ನು ಓರ್ವ ಹೆಣ್ಣುಮಗಳಾಗಿ ಮಾಲಾಶ್ರೀ ಅವರು ಮುರಿದಿದ್ದಾರೆ. ಹೀಗೆ ಅದೊಂದು ಕಾಲದಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ಈ ನಟಿ ಅದೆಷ್ಟೋ ಬಾರಿ ಲವ್ ಗಾಸಿಪ್ ಗೆ (Love Gossip) ಒಳಗಾಗಿದ್ದಾರೆ.

ಹೀಗಿರುವಾಗ ನಾವಿವತ್ತು ಮಾಲಾಶ್ರೀ ಮತ್ತು ಶಶಿಕುಮಾರ್ (Actor Shashi Kumar) ಅವರ ಸಂಬಂಧದ ವಿಚಾರ ಆಗಿನ ಕಾಲದಲ್ಲಿ ಬಹು ದೊಡ್ಡ ಅಲೆಯನ್ನು ಸೃಷ್ಟಿ ಮಾಡಿದ್ದು ಏಕೆ? ಇವರಿಬ್ಬರ ನಡುವೆ ಇದ್ದಂತಹ ಬಂಧವಾದರೂ ಎಂತದ್ದು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಒಂದು ತಿಂಗಳಿಗೆ ರಶ್ಮಿಕಾ ಮಂದಣ್ಣ ಸಂಪಾದನೆ ಎಷ್ಟು ಕೋಟಿ ಗೊತ್ತಾ? ಕಿರಿಕ್ ಬೆಡಗಿಯ ಆಸ್ತಿ ವಿವರ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ!

ಹೌದು ಗೆಳೆಯರೇ ಮಾಲಾಶ್ರೀ ಅವರು ಉತ್ತುಂಗದ ಶಿಖರದಲ್ಲಿದ್ದಾಗ ಶಶಿಕುಮಾರ್ ಅವರು ಆಗ ತಾನೆ ಖಳ ನಟ, ಪೋಷಕ ನಟನ ಪಾತ್ರಗಳ ಮೂಲಕ ಸಿನಿ ಪಯಣವನ್ನು ಶುರು ಮಾಡಿದರು. ಅವರಿಗೆ ಚಿಕ್ಕಂದಿನಿಂದಲೂ ಒಲಿದು ಬಂದಿದ್ದಂತಹ ಕಲೆಯೆಂದರೆ ಡಾನ್ಸ್ ಯಾವುದೇ ಕೊರಿಯೋಗ್ರಾಫರ್ ಇಲ್ಲದೆ ಇದ್ದರೂ ಕೂಡ ಕನ್ನಡಿ ಮುಂದೆ ನಿಂತು ತಮಗೆ ಬೇಕಾದಂತಹ ಸ್ಟೆಪ್ಸ್ಗಳನ್ನು ಕೊರಿಯಾಗ್ರಫಿ ಮಾಡಿಕೊಂಡು ಅದ್ಭುತವಾಗಿ ಶಶಿಕುಮಾರ್ ಡ್ಯಾನ್ಸ್ ಮಾಡುತ್ತಿದ್ದರು.

Actress Malashree

ಈ ಕಾರಣದಿಂದಲೇ ಕನ್ನಡ ಸಿನಿಮಾರಂಗ ಇವರಿಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ಹೀಗೆ ಶಶಿಕುಮಾರ್ ಹಾಗೂ ಮಾಲಾಶ್ರೀ ಅವರು ಪೋಲಿಸನ ಹೆಂಡತಿ ಎಂಬ ಸಿನಿಮಾದ ಮೂಲಕ ಒಟ್ಟಿಗೆ ನಟಿಸುತ್ತಾರೆ. ಇವರಿಬ್ಬರ ಜೋಡಿ ತೆರೆಯ ಮೇಲೆ ಮಾಡಿದಂತಹ ಮೋಡಿಯನ್ನು ನೋಡಿ ಅಭಿಮಾನಿಗಳು ಪದೇ ಪದೇ ಇವರನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಡುತ್ತಿರುತ್ತಾರೆ. ಹೀಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ಮಾಲಾಶ್ರೀ ಹಾಗೂ ಶಶಿಕುಮಾರ್ ಜೋಡಿ ಅದ್ಭುತವಾದ ಚಾಪನ್ನು ಮೂಡಿಸಿದರು.

ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?

ಹೀಗೆ ಶಶಿಕುಮಾರ್ ಹಾಗೂ ಮಾಲಾಶ್ರೀ ಅವರ ಜೋಡಿ ಪ್ರತಿ ಸಿನಿಮಾದಲ್ಲಿಯೂ ತಳಕು ಹಾಕಿಕೊಳ್ಳುತ್ತಿದ್ದನ್ನು ಕಂಡಂತಹ ಕೆಲ ಪ್ರೇಕ್ಷಕರು ಇವರಿಬ್ಬರು ಪ್ರೀತಿಸುತ್ತಿದ್ದಾರೆ ನಿಜ ಜೀವನದಲ್ಲಿಯೂ ಒಂದಾಗಲಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲು ಶುರು ಮಾಡಿದರು.

ಆ ಸಂದರ್ಭದಲ್ಲಿ ಸ್ವತಃ ಶಶಿಕುಮಾರ್ ಅವರು ಮಾಧ್ಯಮದ ಮುಂದೆ ಬಂದು “ನೋಡಿ ನಾನು ಮತ್ತು ಮಾಲಾಶ್ರೀ ಅವರು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿರುವುದು ನಿಜ. ಅದು ನಮ್ಮ ಒಂದು ಕಾರ್ಯ ಬದ್ಧತೆ ಮತ್ತು ನಮ್ಮ ಜೋಡಿಯನ್ನು ಜನ ನೋಡಿ ಹರಸಿದ್ದಾರೆ, ಒಂದೇ ತಾರಾಜೋಡಿ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸುವಾಗ ಇಂತಹ ರೂಮರ್ಸ್ ಆಗುವುದು ಸಾಮಾನ್ಯ.

ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?

ಆದರೆ ಇಂತಹ ಗಾಸಿಪ್ಗಳು ನಿಜವಾಗಬೇಕಾಗಿಲ್ಲ. ನಾವು ಮದುವೆಯಾಗುತ್ತಿದ್ದೇವೆ ಎನ್ನುವುದೆಲ್ಲ ಬರಿ ಸುಳ್ಳು” ಎನ್ನುವ ಮೂಲಕ ಹರಿದಾಡುತ್ತಿದ್ದಂತಹ ಗಾಸಿಪ್ ಗಳಿಗೆ ಬ್ರೇಕ್ ಹಾಕಿದರು.

How Actress Malashree and Actor Shashi Kumar love gossip was created

Follow us On

FaceBook Google News