ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?

ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿದ್ದ ನಟಿ ಸಿಲ್ಕ್ ಸ್ಮಿತಾ ಖಿನ್ನತೆಗೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂಬ ಮಾಹಿತಿಯನ್ನು ನಾವು ಕೇಳಿದ್ದೇವೆ. ಅಷ್ಟಕ್ಕೂ ಆ ದಿನ ಅಸಲಿಗೆ ಏನಾಯ್ತು ಕೇವಲ 35 ವರ್ಷಕ್ಕೆ ಯಾವ ಕಾರಣದಿಂದ ಸಿಲ್ಕ್ ಸ್ಮಿತಾ ಭಾರದ ಲೋಕಕ್ಕೆ ತೆರಳಿದರು?

ಮಡಿವಂತಿಕೆಯ ಸೆರಗನ್ನು ಹೊತ್ತಿಕೊಂಡಿದ್ದ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ಓರ್ವ ಐಟಂ ಡ್ಯಾನ್ಸರ್ ಆಗಿ ಎಂಟ್ರಿ ಕೊಟ್ಟಂತಹ ಸಿಲ್ಕ್ ಸ್ಮಿತಾ (Actress Silk Smitha) ತಮ್ಮದೇ ಆದ ವಿಶೇಷ ಬೇಡಿಕೆಯನ್ನು ಸೃಷ್ಟಿಸಿಕೊಂಡರು ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ತಮ್ಮ ಬಳುಕುವ ಮೈ ಮಾಟ, ಮಾದಕ ಸೌಂದರ್ಯ, ಅಭಿನಯ, ನೃತ್ಯ ಎಲ್ಲದರ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಹ ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದರೆ ಸಾಕು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂಬ ನಿರೀಕ್ಷೆಯನ್ನು ನಿರ್ದೇಶಕ ನಿರ್ಮಾಪಕರು ಲೆಕ್ಕ ಹಾಕುತ್ತಿದ್ದಂತಹ ಕಾಲವದು.

40 ವರ್ಷ ವಯಸ್ಸಾದರೂ ರಂಗೋಲಿ ಧಾರವಾಹಿ ನಟಿ ಸಿರಿ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತಾ? ಅದೆಂಥ ಹುಡುಗ ಬೇಕಂತೆ ಕೇಳಿದ್ರಾ!

ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು? - Kannada News

ಹೀಗೆ ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿದ್ದ ನಟಿ ಸಿಲ್ಕ್ ಸ್ಮಿತಾ ಖಿನ್ನತೆಗೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂಬ ಮಾಹಿತಿಯನ್ನು ನಾವು ಕೇಳಿದ್ದೇವೆ. ಅಷ್ಟಕ್ಕೂ ಆ ದಿನ ಅಸಲಿಗೆ ಏನಾಯ್ತು ಕೇವಲ 35 ವರ್ಷಕ್ಕೆ ಯಾವ ಕಾರಣದಿಂದ ಸಿಲ್ಕ್ ಸ್ಮಿತಾ ಭಾರದ ಲೋಕಕ್ಕೆ ತೆರಳಿದರು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಟಿ ಸಿಲ್ಕ್ ಸ್ಮಿತಾ ನೋಡಲು ಕೃಷ್ಣ ಸುಂದರಿಯಂತಿದ್ದರೂ ಕೂಡ ಇವರ ದಂತದ ಮೈಮಾಟ ಬಟ್ಟಲು ಕಣ್ಣುಗಳಿಗೆ ಮನಸೋಲದಂತಹ ಪ್ರೇಕ್ಷಕರೇ ಇರಲಿಲ್ಲ. ಕ್ಯಾಬರೆ ಡ್ಯಾನ್ಸ್ ಆದ್ರು ಸೈ, ಬಿಂಕದ ನಡುಗೆ ಆದರೂ ಸೈ ಎಂಬಂತೆ ಇದ್ದ ಇವರ ಸೌಂದರ್ಯಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದರು.

ಮತ್ತೆ ಹಾಡಿತು ಕೋಗಿಲೆ ಚಿತ್ರ ನಟಿ ರೂಪಿಣಿಗೆ ಬಲವಂತವಾಗಿ ಮದುವೆ ಮಾಡಿಸಿದ್ದು ಯಾರು? ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಇಂತಹ ನಟಿ 1960ರ ಡಿಸೆಂಬರ್ 2ನೇ ತಾರೀಖಿನಂದು ಸರಸಮ್ಮ ಮತ್ತು ರಾಮಲು ಎಂಬ ದಂಪತಿಯ ಮಗಳಾಗಿ ಜನಿಸಿದರು. ಇವರ ಮೂಲ ಹೆಸರು ವಿಜಯಲಕ್ಷ್ಮಿ ವಟ್ಲಾಪಟ್ಲಾ. ಬಡತನದಿಂದಾಗಿ ಎಸ್ ಎಸ್ ಎಲ್ ಸಿ ಯನ್ನು ಹೊರತುಪಡಿಸಿ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ.

ಈ ಕಾರಣದಿಂದ ಮನೆಯವರು 16 ವರ್ಷಕ್ಕೆ ಸಿಲ್ಕ್ ಸ್ಮಿತಾ ಅವರಿಗೆ ಮದುವೆ ಮಾಡಿ ಬಿಡುತ್ತಾರೆ. ಬಡತನದ ಜೊತೆಗೆ ಚಿಕ್ಕವಯಸ್ಸಿನಲ್ಲಿಯೇ ಬಾಲ್ಯ ವಿವಾಹಕ್ಕೆ ಒಳಗಾದ ಈ ನಟಿ ತನ್ನ ಅತ್ತೆಯ ಮನೆಯಲ್ಲಿ ಕೊಡುತ್ತಿದ್ದಂತಹ ಕಿರುಕುಳವನ್ನು ತಾಳಲಾರದೆ ಮನೆ ಬಿಟ್ಟು ಚೆನ್ನೈ ನತ್ತ ತಮ್ಮ ಪ್ರಯಾಣ ಬೆಳೆಸಿದರು.

Actress Silk Smitha Real Life Storyಹೀಗೆ ಚಿಕ್ಕಂದಿನಿಂದಲೂ ಸಿಲ್ಕ್ ಸ್ಮಿತಾ ಅವರಲ್ಲಿ ಸಿನಿಮಾ ರಂಗದ (Kannada Cinema) ಹುಚ್ಚಿದ್ದ ಕಾರಣ ತಾನು ಮೇಕಪ್ ತೊಟ್ಟು ಸ್ಟಾರ್ ಆಗಬೇಕು ಎಂಬ ಆಸೆ ಮೂಡುತ್ತದೆ. ಹೀಗೆ ಬೆಳಗ್ಗೆ ಶೂಟಿಂಗ್ ಇದ್ದಾಗಲೆಲ್ಲ ಮೇಕಪ್, ಕೆಲಸ ರಾತ್ರಿಯಾದರೆ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.

ಹೀಗೆ ಟಚಪ್ ಲೇಡಿ, ಮೇಕಪ್ ಆರ್ಟಿಸ್ಟ್ ಆಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಸಿಲ್ಕ್ ಸ್ಮಿತಾರನ್ನು ಪ್ರಸಿದ್ಧ ನಿರ್ದೇಶಕ ವಿನು ಚಕ್ರವರ್ತಿ ಸಿನಿಮಾಲೋಕಕ್ಕೆ ಕರೆತಂದರು.

ನೀನೇನು ದೊಡ್ಡ ಹೀರೋನ? ಎಂದು ರಜನಿಕಾಂತ್ ಗೆ ಅಡ್ವಾನ್ಸ್ ಕೊಡದೆ ಸೆಟ್ನಿಂದ ಹೊರ ಕಳಿಸಿದ ನಿರ್ಮಾಪಕ! ಅವಮಾನಕ್ಕೊಳಗಾದ ರಜಿನಿ ಮಾಡಿದ್ದೇನು ಗೊತ್ತಾ?

ಹೌದು ಗೆಳೆಯರೇ ಒಂಡಿ ಚಕ್ರನ್ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಲು ಶುರು ಮಾಡಿ ತಮ್ಮ ಕೊನೆಯ ಕ್ಷಣದವರೆಗೂ ಸಿನಿ ಬದುಕಿಗಾಗಿಯೇ ದುಡಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಇವರು ರಜಿನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್ ಹಾಗೂ ರವಿಚಂದ್ರನ್ ರಂತಹ ದಿಗ್ಗಜರೊಂದಿಗೆ ಅಭಿನಯಿಸಿದ್ದಾರೆ.

ಇನ್ನು ಕನ್ನಡದಲ್ಲಿ ಗೆದ್ದ ಮಗ, ಪ್ರಚಂಡ ಕುಳ್ಳ, ಹಳ್ಳಿ ಮೇಷ್ಟ್ರು, ಅಳಿಮಯ್ಯ, ಚಿನ್ನ, ಲಾಕ್ ಅಪ್ ಡೆತ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಕಾಣಿಸಿಕೊಂಡಿದ್ದಾರೆ.

ಹೀಗೆ ಯಾವ ಸ್ಟಾರ್ ನಟಿಯರಿಗೂ ಕಡಿಮೆ ಇಲ್ಲದಂತಹ ಬೇಡಿಕೆ ಗಿಟ್ಟಿಸಿಕೊಂಡಿದ್ದ ಸಿಲ್ಕ್ ಸ್ಮಿತಾ ಅವರು ಒಂದು ಸಿನಿಮಾಗೆ ಬರೋಬ್ಬರಿ 50,000 ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದರಂತೆ. ಹೀಗಿರುವಾಗ 1995ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸ್ಮಿತಾ ಅವರು ಮಧ್ಯವ್ಯಾಸನಕ್ಕೂ ತಮ್ಮನ್ನು ತಾವು ಆಹ್ವಾನಿಸಿ ಕೊಂಡು ಬಿಟ್ಟಿದ್ದರು.

ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ?

ಸ್ಮಿತಾಳ ಗೆಳತಿ ಅನುರಾಧ ಮತ್ತು ರವಿಚಂದ್ರನ್ ಅವರ ಜೊತೆ ಕೊನೆಯದಾಗಿ ಮಾತು ಮುಗಿಸಿ ಬಾರದ ಲೋಕಕ್ಕೆ ಮರಳಿ ಬಿಟ್ಟರು. ಇನ್ನು ತಮ್ಮ ಕೊನೆಯ ದಿನದಂದು ಚೆನ್ನೈನ ಅವರ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಯಿತು.

ಇದರ ನಿಗೂಢತೆಯನ್ನು ಹುಡುಕುತ್ತಾ ಹೋದ ಪೊಲೀಸರಿಗೆ ಸಿಲ್ಕ್ ಸ್ಮಿತಾ ಬರೆದಿದ್ದ ಡೆತ್ ನೋಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ತಮ್ಮ ಸಾವಿನ ರಹಸ್ಯವನ್ನು ಬಹಿರಂಗ ಪಡಿಸಿದ್ದರು.

ತನಗೆ ಸೂಪರ್ ಸ್ಟಾರ್ ಓರ್ವ ಪ್ರೀತಿಸಿ ಮೋಸ ಮಾಡಿದರು ಎಂಬುದನ್ನು ಆ ಪತ್ರದಲ್ಲಿ ಸ್ಮಿತ ಬರೆದಿದ್ದರು. ಆದರೆ ಆ ನಟ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ, ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಮರೆಯಾದ ಸಾಕಷ್ಟು ಕಲಾವಿದರಲ್ಲಿ ಸಿಲ್ಕ್ ಸ್ಮಿತಾ ಕೂಡ ಒಬ್ಬರಾದರು.

Interesting Facts About Kannada Actress Silk Smitha Real Life Story

Follow us On

FaceBook Google News

Interesting Facts About Kannada Actress Silk Smitha Real Life Story