40 ವರ್ಷ ವಯಸ್ಸಾದರೂ ರಂಗೋಲಿ ಧಾರವಾಹಿ ನಟಿ ಸಿರಿ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತಾ? ಅದೆಂಥ ಹುಡುಗ ಬೇಕಂತೆ ಕೇಳಿದ್ರಾ!
ಸ್ನೇಹಿತರೆ, ಫೆಬ್ರವರಿ 2001 ರಿಂದ ಉದಯ ಟಿವಿಯಲ್ಲಿ (Kannada Udaya TV) ಪ್ರಸಾರವಾಗತೊಡಗಿದ ರಂಗೋಲಿ ಸೀರಿಯಲ್ (Rangoli Serial) ಅನ್ನು ಎಂದಾದರೂ ಕನ್ನಡ ಕಿರುತೆರೆ (Kannada Serial) ಪ್ರೇಮಿಗಳು ಮರೆಯಲು ಸಾಧ್ಯವೇ?
ಪ್ರತಿದಿನ ಸಂಜೆ ನೋಡುಗರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಂತಹ ಈ ಸೀರಿಯಲ್ ಇಂದಿಗೂ ಅದೆಷ್ಟೋ ಮಹಿಳೆಯರ ಫೇವರೆಟ್. ಹೀಗಿರುವಾಗ ರಂಗೋಲಿ ಧಾರವಾಹಿಯ ಮೂಲಕ ತಮ್ಮ ಬಣ್ಣದ ಬದುಕಿನ ಪ್ರಯಾಣವನ್ನು ಪ್ರಾರಂಭ ಮಾಡಿದ ನಟಿ ಸಿರಿ (Actress Siri) ಈಗ ಹೇಗಿದ್ದಾರೆ?
40 ವರ್ಷ ವಯಸ್ಸಾದರೂ ಮದುವೆಯಾಗದಿರುವುದು ಏಕೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತುಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಅದೊಂದು ಕಾಲದ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯವಾಗಿದ್ದಂತಹ ಸಾಕಷ್ಟು ಧಾರಾವಾಹಿಗಳಲ್ಲಿ ರಂಗೋಲಿ ಮತ್ತು ಬದುಕು ಎರಡು ಸೀರಿಯಲ್ಗಳು ಜನರ ಮನಸ್ಸನ್ನು ಆಳವಾಗಿ ಸೆಳೆದಿದ್ದಂತು ನಿಜ.
ಇನ್ನು ಇವೆರಡು ಸೀರಿಯಲ್ನ ನಾಯಕನಟಿ ಸಿರಿಯವರು (Actress Siri) ಅದೆಷ್ಟೋ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು. ಹೀಗೆ ಕನ್ನಡ, ತಮಿಳು, ತೆಲುಗಿನಲ್ಲಿಯೂ ಸಾಕಷ್ಟು ಸೀರಿಯಲ್ಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದಂತಹ ಸಿರಿಯವರು ರಂಗೋಲಿಯಲ್ಲಿ ಪ್ರಪ್ರಥಮ ಬಾರಿಗೆ ನಟಿಸುವಾಗ ಪಿಯುಸಿ ಓದುತ್ತಿದ್ದರಂತೆ. ಬಹಳ ಚಿಕ್ಕ ವಯಸ್ಸಿಗೆ ಅಂಬಿಕಾ ಎನ್ನುವ ಪ್ರಬುದ್ಧವಾದ ಪಾತ್ರ ದೊರಕಿ ಸಿರಿಯವರ ಅದೃಷ್ಟ ಬದಲಾಯಿತು ಎಂದರೆ ತಪ್ಪಾಗಲಾರದು.
ಇನ್ನು ಪಿಯುಸಿ ಓದುತ್ತಿರುವಾಗಲೇ ಕನ್ನಡ ಸೀರಿಯಲ್ ಒಂದರ ಮೂಲಕ ಮನೆ ಮಾತಾದಂತ ಸಿರಿಯವರಿಗೆ ನಂತರ ತೆಲುಗಿನ ಸಾಕಷ್ಟು ಸೀರಿಯಲ್ ಗಳು ಕೈಬೀಸಿ ಕರೆದವು. ಅನಂತರ ತಮಿಳು, ಕನ್ನಡ ಹಾಗೂ ತೆಲುಗು ಸೀರಿಯಲ್ನ ಟಾಪ್ ನಟಿಯಾಗಿ ಹೊರಹೊಮ್ಮಿದರು.
ಹೌದು ಗೆಳೆಯರೆ ಒಂದಲ್ಲ ಎರಡಲ್ಲ ಬರೋಬ್ಬರಿ 30 ಧಾರವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದಂತಹ ಸಿರಿ ಅವರು ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದಂತಹ ಬೇಡಿಕೆಯನ್ನು ಹೊಂದಿದ್ದರು.
ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ?
ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದ ಸಿರಿ ಅವರು ಬರೋಬ್ಬರಿ 30 ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಸದಾ ಕಾಲ ಮುಗ್ಧ, ಸೌಮ್ಯ ಹೆಣ್ಣುಮಗಳ ಪಾತ್ರಕ್ಕೆ ಜೀವ ತುಂಬುತ್ತಿದ್ದಂತಹ ಸಿರಿಯವರು ‘ಮದುಮಗಳು’ ಎಂಬ ಧಾರಾವಾಹಿಯ ಮೂಲಕ ಪ್ರಪ್ರಥಮ ಬಾರಿಗೆ ಘಟವಾಣಿ ಅತ್ತೆಯ ಪಾತ್ರದಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು.
ಹೀಗೆ ಹಲವಾರು ದಶಕಗಳಿಂದ ಸಿನಿ ಬದುಕಿನಲ್ಲಿ ತೊಡಗಿಸಿಕೊಂಡಿರುವ ಸಿರಿ ಬರೋಬ್ಬರಿ 40 ವರ್ಷ ವಯಸ್ಸಾದರೂ ಮದುವೆಯಾಗದಿರುವುದು ಯಾಕೆ ಎಂಬುದು ಅಭಿಮಾನಿಗಳ ತಲೆಯಲ್ಲಿ ಕಾಡುತ್ತಿರುವಂತಹ ಪ್ರಶ್ನೆಯಾಗಿದೆ.
ಹೀಗಿರುವಾಗ ಸಂದರ್ಶನ ಒಂದರಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ನಟಿ ಸಿರಿ, ತನ್ನ ವೃತ್ತಿ ಬದುಕನ್ನು ಅರ್ಥ ಮಾಡಿಕೊಳ್ಳುವ ಹಾಗೂ ಪ್ರತಿಯೊಂದು ಹೆಜ್ಜೆಯಲ್ಲಿಯು ಸಪೋರ್ಟ್ ಮಾಡುವಂತಹ ತಕ್ಕ ವರ ಸಿಕ್ಕರೆ ಮಾತ್ರ ಮದುವೆಯಾಗುತ್ತೇನೆ ಎಂಬ ಕಂಡೀಶನ್ ಹಾಕುವ ಮೂಲಕ ಮನೆಯವರ ಒತ್ತಾಯದ ಮೇರೆಗೆ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರಂತೆ.
Interesting Facts About Kannada Rangoli Serial Fame Actress Siri