Sandalwood News

ಮತ್ತೆ ಹಾಡಿತು ಕೋಗಿಲೆ ಚಿತ್ರ ನಟಿ ರೂಪಿಣಿಗೆ ಬಲವಂತವಾಗಿ ಮದುವೆ ಮಾಡಿಸಿದ್ದು ಯಾರು? ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಸ್ನೇಹಿತರೆ, 1980ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿಯರ ಸಾಲಿಗೆ ಸೇರುವಂತಹ ನಟಿ ರೂಪಿಣಿ ಅಭಿನಯಿಸಿದ ಚಿತ್ರಗಳು ಕನ್ನಡದ ಸೂಪರ್ ಸ್ಟಾರ್ ಗಳ (Kannada Hero’s) ಜೊತೆಯೇ, ಅದರಲ್ಲಿಯೂ ವಿಷ್ಣುವರ್ಧನ್ ಅವರಿಗೆ ಲಕ್ಕಿ ಹೀರೋಯಿನ್ ಎಂದೆ ಹೆಸರುವಾಸಿಯಾಗಿದಂತಹ ರೂಪಿಣಿಯವರು ವಿಷ್ಣುದಾದಾನೊಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ (Kannada Cinema) ಮನೆಮಗಳಾಗಿ ಹೋಗಿದ್ದರು.

ಆದರೆ ರವಿಚಂದ್ರನ್ ಜೊತೆಗಿನ ಗೋಪಿಕೃಷ್ಣ ಚಿತ್ರದಲ್ಲಿ (Gopi Krishna Kannada Movie) ಮುದ್ದುಮುದ್ದಾಗಿ ಲಾಲಿಪಾಪ್ ತಿನ್ನುತ್ತಾ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದ್ದ ರೂಪಿಣಿಯವರ ಸಿನಿ ಬದುಕಿಗೆ ಇದೇ ಕೊನೆಯ ಚಿತ್ರವಾಯಿತು. ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಮಾಯವಾದದ್ದು ಅದೆಷ್ಟೋ ಅಭಿಮಾನಿಗಳಿಗೆ ಬೇಸರವನ್ನು ತಂದಂತಹ ಸಂಗತಿಯಾಗಿತ್ತು.

Unknown Facts About Actress Rupini

ನೀನೇನು ದೊಡ್ಡ ಹೀರೋನ? ಎಂದು ರಜನಿಕಾಂತ್ ಗೆ ಅಡ್ವಾನ್ಸ್ ಕೊಡದೆ ಸೆಟ್ನಿಂದ ಹೊರ ಕಳಿಸಿದ ನಿರ್ಮಾಪಕ! ಅವಮಾನಕ್ಕೊಳಗಾದ ರಜಿನಿ ಮಾಡಿದ್ದೇನು ಗೊತ್ತಾ?

ಹೌದು ಗೆಳೆಯರೇ, ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ಆ ವ್ಯಕ್ತಿ ರೂಪಿಣಿಯವರಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಬಿಟ್ಟರು. ಇನ್ನು ಗಂಡ, ಮದುವೆ ಆದ ನಂತರ ಸಿನಿಮಾ ರಂಗದಿಂದ (Kannada Film Industry) ದೂರ ಉಳಿಯುವಂತೆ ಕಂಡಿಷನ್ ಹಾಕಿದಾಗ ಎಲ್ಲದಕ್ಕೂ ಒಪ್ಪಿ ವೈಯಕ್ತಿಕ ಬದುಕಿನ್ನತ್ತ ಗಮನಹರಿಸಿದ ರೂಪಿಣಿಯವರ ಸಂಸಾರಿಕ ಜೀವನ ಹೇಗಿದೆ? ಇವರ ಪತಿ ಯಾರು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ?

ಹೌದು ಗೆಳೆಯರೇ ನೀನು ನಕ್ಕರೆ ಹಾಲು ಸಕ್ಕರೆ, ದೇವ, ಮತ್ತೆ ಹಾಡಿತು ಕೋಗಿಲೆ, ಒಲವಿನ ಆಸರೆ, ರಾಜಾಧಿರಾಜ, ರವಿ ವರ್ಮ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ವಿಷ್ಣು ದಾದಾ ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದ ರೂಪಿಣಿಯವರ ಕುರಿತು ಸಂದರ್ಶನದಲ್ಲಿ ಸ್ವತಃ ವಿಷ್ಣುವರ್ಧನ್ ಅವರೇ ನನ್ನ ಸಿನಿ ಬಾಳಿನ ಲಕ್ಕಿ ಹೀರೋಯಿನ್ ಎಂದಿದ್ದರು.

Actress Rupiniಇನ್ನು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕವೇ ಮನೆಮಾತಾಗಿದ್ದ ರೂಪಿಣಿಯವರು ರವಿಚಂದ್ರನ್ ಅವರ ಗೋಪಿಕೃಷ್ಣ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಳ್ಳುವ ಮೂಲಕ ಸಿರಿ ರಂಗಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಒಂದು ಸಿನಿಮಾಗೆ ನಟಿ ಆರತಿ ಪಡೆಯುತ್ತಿದ್ದ ಪೇಮೆಂಟ್ ಎಷ್ಟಿತ್ತು ಗೊತ್ತಾ? ಹಿರಿಯ ನಿರ್ದೇಶಕ ಭಾರ್ಗವ ಬಹಿರಂಗಪಡಿಸಿದ ಅಸಲಿ ಸತ್ಯ!

ಹೌದು ಗೆಳೆಯರೇ ಸಿನಿಮಾಗಳ ಆಫರ್ ಇರುವಾಗಲೇ ಅವರ ತಾಯಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ ಇಷ್ಟು ಬೇಗ ಮದುವೆಯಾದರೆ ತನ್ನ ಸಿನಿ ಕರಿಯರ್ ಹಾಳಾಗುತ್ತೆ, ಅವಕಾಶಗಳು ಇಲ್ಲದಂತಾಗುತ್ತದೆ ಎಂದು ತಿರಸ್ಕರಿಸುತ್ತಾರೆ.

ಆದರೂ ಸಹ ರೂಪಿಣಿಯವರ ತಾಯಿ ತಮ್ಮ ಹಠವನ್ನು ಬಿಡದೆ ವೈದ್ಯ ಮೋಹನ್ ಕುಮಾರ್ ರಾಯ್ ಅವರೊಂದಿಗೆ 2೦೦೦ ದ ಇಸವಿಯಲ್ಲಿ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿಬಿಡುತ್ತಾರೆ.

ಮದುವೆಯಾದ ಬಳಿಕ ಸಿನಿಮಾ ರಂಗದಲ್ಲಿ ಅಭಿನಯಿಸ ಕೂಡದು ಎಂದು ಪತಿ ಕಂಡಿಷನ್ ಹಾಕಿದರು. ಈ ಕಾರಣದಿಂದ ರೂಪಿಣಿ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಲೇ ಇಲ್ಲ.

ನೆನಪಿದ್ದಾರಾ ನಟಿ ಭಾನುಪ್ರಿಯ? ಗಂಡನನ್ನು ಕಳೆದುಕೊಂಡ ಮೇಲೆ ಪಾಪ ಇವರ ಪರಿಸ್ಥಿತಿ ಏನಾಗಿದೆ ನೋಡಿ!

ಈ ದಂಪತಿಗೆ 2002ನೇ ಇಸವಿಯಲ್ಲಿ ಒಂದು ಮುದ್ದಾದ ಹೆಣ್ಣು ಮಗಳು ಜನಿಸುತ್ತದೆ. ಹೀಗೆ ಒಂದು ಮಗುವಾದ ನಂತರ ಇವರ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ, ಕೋಪ, ಮುನಿಸು ಜಗಳಗಳೆಂಬುದು ಹೆಚ್ಚಾಗುತ್ತಾ ಹೋದಹಾಗೆ ರೂಪಿಣಿ 2003ರಲ್ಲಿ ತಮ್ಮ ಪತಿ ಮೋಹನ್ ಅವರಿಂದ ವಿಚ್ಛೇದನ ಪಡೆದು ತಮ್ಮ ತಾಯಿ ಹಾಗೂ ಮಗುವಿನೊಂದಿಗೆ ಮುಂಬೈನಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇನ್ನು 26 ವರ್ಷಗಳ ಬಳಿಕ ತಮಿಳು ಧಾರವಾಹಿ ಒಂದರ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿರುವ ರೂಪಿಣಿ ಅವರಿಗೆ ಅವಕಾಶಗಳು ಸಿಗುತ್ತಾ ಎಂಬುದನ್ನು ನಿರೀಕ್ಷಿಸಬೇಕಿದೆ.

3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

Unknown Facts About Actress Rupini

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories