ಕ್ಯಾಬರೆ ನಟಿ ಡಿಸ್ಕೋ ಶಾಂತಿ ರಿಯಲ್ ಲೈಫ್ ಹೇಗಿದೆ ಗೊತ್ತಾ? ಸಿನಿಮಾ ರಂಗದಲ್ಲಿ ಮಿಂಚಿದ ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!
ಸ್ನೇಹಿತರೆ, ಕನ್ನಡ ಸಿನಿಮಾ ರಂಗದ (Kannada Film Industry) ಆರಂಭಿಕ ಅವಧಿಗಳಲ್ಲಿ ಕೇವಲ ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳಿಗೆ ಹೆಚ್ಚಿನ ಮಹತ್ವವಿತ್ತು. ಯಾವ ನಟಿಯಾದರೂ ತೆರೆಯ ಮೇಲೆ ತುಂಡು ಬಟ್ಟೆಗಳನ್ನು ಧರಿಸಿದರೆ ಅವರನ್ನು ನೋಡುತ್ತಿದ್ದಂತಹ ನೋಟವೇ ಬೇರೆಯದ್ದಾಗಿರುತ್ತಿತ್ತು.
ಕನ್ನಡ ಸಿನಿಮಾ ರಂಗಕ್ಕೆ (Kannada Movies) ಕ್ಯಾಬರೆ, ಐಟಂ ಡ್ಯಾನ್ಸ್ ನಂತವುಗಳನ್ನು ಪರಿಚಯ ಮಾಡಿಸಿದಂತಹ ಸಾಕಷ್ಟು ನಟಿಯರ ಪೈಕಿ ಡಿಸ್ಕೋ ಶಾಂತಿ (Actress Disco Shanti) ಕೂಡ ಒಬ್ಬರು.
ಹೌದು ಗೆಳೆಯರೇ ತಮ್ಮ ಹಾಟ್ ಮೈಮಾಟ ಹಾಗೂ ಡ್ಯಾನ್ಸಿಂಗ್ ಪ್ರವೃತಿಯ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಈ ನಟಿ ಎಷ್ಟೆಲ್ಲಾ ಕಷ್ಟಕರ ದಿನಗಳನ್ನು ಎದುರಿಸಿದರು? ಈಗ ಹೇಗಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
ಆಗಿನ ಕಾಲದ ಸ್ಟಾರ್ ನಟಿಯರು ತುಂಡು ಬಟ್ಟೆ ಧರಿಸಲು ಹಿಂದೇಟಾಕುತ್ತಿದ್ದಂತಹ ಕಾಲದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ತಮ್ಮ ಬಳುಕುವ ಮೈಮಾಟದ ಮೂಲಕ ನೃತ್ಯ ದೇವತೆಯಾಗಿದ್ದ ಡಿಸ್ಕೋ ಶಾಂತಿ, ಕ್ಯಾಬರೆ ನೃತ್ಯವೆಂದರೆ ಇಷ್ಟೇನಾ ಎನ್ನುತ್ತಿದ್ದವರಿಗೆ ಕ್ಯಾಬರೆ ಡ್ಯಾನ್ಸನ್ನು ಹೀಗೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು.
ಅದೆಷ್ಟೋ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ಡಿಸ್ಕೋ ಶಾಂತಿ ಅವರು ಅಂಬರೀಶ್, ರಜನಿಕಾಂತ್, ಕಮಲ್ ಹಾಸನ್, ಅನಿಲ್ ಕಪೂರ್, ವಿಷ್ಣುವರ್ಧನ್, ಪ್ರಭಾಕರ್, ದೇವರಾಜ್ ಹಾಗು ಶಂಕರ್ ನಾಗ್ ರಂತಹ ಘಟಾನುಘಟಿ ನಟರೊಂದಿಗೆ ತೆರೆ ಹಂಚಿಕೊಂಡು ಪೀಕ್ನಲ್ಲಿ ಇದ್ದಂತಹ ನಟಿ.
ವೃತ್ತಿ ಬದುಕಿನಲ್ಲಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದ ಡಿಸ್ಕೋ ಶಾಂತಿ ದಿನ ಕಳೆದಂತೆ ಸಿನಿಮಾರಂಗದಿಂದ ದೂರವಿರಲು ಪ್ರಯತ್ನ ಪಡುತ್ತಾರೆ. ಜೊತೆಗೆ ಆ ಒಂದು ಕಾಲಘಟ್ಟದಲ್ಲಿ ಕ್ಯಾಬರೆ ನಟಿಯರಾಗಿದ್ದವರು ಯಾರು ಊಹಿಸದ ಮಟ್ಟಕ್ಕೆ ದುರಂತ ಅಂತ್ಯವನ್ನು ಕಂಡಿದ್ದರು, ಆದರೆ ಡಿಸ್ಕೋ ಶಾಂತಿ ಮಾತ್ರ ಇದಕ್ಕೆ ಆಸ್ಪದ ಮಾಡಿಕೊಡಲಿಲ್ಲ.
ಬದಲಿಗೆ ಬುದ್ಧಿವಂತರಾಗಿ ಸಿನಿಮಾ ರಂಗದಲ್ಲಿ ಹೆಚ್ಚಿನ ಅವಕಾಶವಿರುವವರೆಗೂ ಮಾತ್ರ ಸಕ್ರಿಯರಾಗಿ ಅನಂತರ ವೈಯಕ್ತಿಕ ಬದುಕಿನೆಡೆಗೆ ಗಮನಹರಿಸಿದರು. ಹೌದು ಗೆಳೆಯರೇ ತಮಿಳಿನ ಪ್ರಖ್ಯಾತ ನಟರಾದ ಶ್ರೀ ಹರಿ ಎಂಬುವರೊಂದಿಗೆ ಮದುವೆಯಾದರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬದುಕು ಮದುವೆಯಾದ ನಂತರ ಬಿರುಕು ಮೂಡುವುದನ್ನು ನಾವು ಕಂಡಿದ್ದೇವೆ ಆದರೆ ಓರ್ವ ಡ್ಯಾನ್ಸರ್ ಆದರೂ ಕೂಡ ನಟಿ ಡಿಸ್ಕೋ ಶಾಂತಿ ಇದ್ಯಾವುದಕ್ಕೂ ಆಸ್ಪದವೇ ಮಾಡಿಕೊಡಲಿಲ್ಲ.
20 ವರ್ಷಗಳ ಕಾಲ ಬಹಳ ಸುಖವಾಗಿ ಇತರರಿಗೆ ಮಾದರಿಯಾಗುವಂತೆ ಡಿಸ್ಕೋ ಶಾಂತಿ ಹಾಗೂ ಶ್ರೀ ಹರಿ ದಾಂಪತ್ಯ ಜೀವನವನ್ನು ನಡೆಸಿದರು. ಈ ಮಧ್ಯ ಅವಕಾಶಗಳ ಸುರಿಮಳೆ ಹರಿದು ಬಂದರೂ ಕೂಡ ಡಿಸ್ಕೋ ಶಾಂತಿ ತಮ್ಮ ವೈಯಕ್ತಿಕ ಬದುಕಿನ ಸಂತೋಷ ಜೀವನ ಪರ್ಯಂತ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಯಾವುದನ್ನು ಒಪ್ಪಿಕೊಳ್ಳಲಿಲ್ಲ.
ಸಂಪೂರ್ಣ ಗೃಹಿಣಿಯಾಗಿ ಮಕ್ಕಳಿಗೆ ತಾಯಿಯಾಗಿ ಗಂಡನಿಗೆ ಪ್ರೀತಿಯ ಮಡದಿಯಾಗಿ ಆನಂದ ಜೀವನವನ್ನು ನಡೆಸಿದರು. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಶಾಂತಿಯವರ ಪತಿ ಶ್ರೀಹರಿ ಹೃದಯಾಘಾತ ಸಮಸ್ಯೆಗೀಡಾದರು.. ಇದರಿಂದ ಬಹಳ ನೊಂದು ಹೋದಂತಹ ಡಿಸ್ಕೋ ಶಾಂತಿಯವರೆ ಊಟ ತಿಂಡಿಯನ್ನೆಲ್ಲ ತ್ಯಜಿಸಿ ಪತಿಯ ನೆನಪಿನಲ್ಲಿಯೇ ಉಳಿದುಬಿಟ್ಟಿದ್ದರು. ಹೀಗೆ ಸಿನಿ ಪ್ರಪಂಚದಲ್ಲಿ ಮಿಂಚು ಹುಳುವಿನಂತೆ ಮಿಂಚಿದ ಡಿಸ್ಕೋ ಶಾಂತಿ ಪತಿಯ ಅಗಲಿಕೆಯಿಂದ ಕುಗ್ಗಿ ಹೋದರು.
Interesting Facts of Kannada Actress Disco Shanti Real Life Story
Our Whatsapp Channel is Live Now 👇