ಗುರುತಿಸದಷ್ಟು ಬದಲಾಗಿರುವ ಜಮೀನ್ದಾರು ಸಿನಿಮಾ ನಟಿ ರಾಶಿ, ಈಗ ಏನ್ಮಾಡ್ತಿದ್ದಾರೆ ಗೊತ್ತಾ? ಇವರ ಪತಿ ಕೂಡ ತುಂಬಾನೇ ಫೇಮಸ್!
ಸ್ನೇಹಿತರೆ, ನಟಿ ರಾಶಿ (Actress Raasi) ಕನ್ನಡ ಚಿತ್ರರಂಗದಲ್ಲಿ (Kannada Film Industry) ಅಭಿನಯಿಸಿದ್ದು, ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಾದರೂ ಕೂಡ ಆ ಎಲ್ಲಾ ಸಿನಿಮಾ ಬ್ಲಾಕ್ಬಸ್ಟರ್ ಪಟ್ಟಿಗೆ ಸೇರಿಕೊಂಡಿದ್ದೆ ಆಗಿದ್ದವು. ಹೀಗೆ ಅಲ್ಪಾವಧಿಯಲ್ಲಿ ಉತ್ತುಂಗ ಶಿಖರವನ್ನೇರಿದಂತಹ ನಟಿ ರಾಶಿ ಇದ್ದಕಿದ್ದ ಹಾಗೆ ಸಿನಿಮಾರಂಗದಿಂದ ಮಾಯವಾಗಿದ್ದು ಯಾಕೆ?
ಈಗ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತುಹಲವಿದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ ಸ್ನೇಹ ಸಿನಿಮಾದಲ್ಲಿ (Kannada Sneha Cinema), ರಮೇಶ್ ಅರವಿಂದ್ ಅವರ ನಿನ್ನೆ ಪ್ರೀತಿಸುವೆ ಚಿತ್ರದಲ್ಲಿ ಹಾಗೂ ವಿಷ್ಣುದಾದಾ ನೊಟ್ಟಿಗೆ ಜಮೀನ್ದಾರು ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಂತಹ ರಾಶಿಯವರಿಗೆ ಆಗಿನ ಕಾಲದಲ್ಲಿ ತೆಲುಗು ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳೆಲ್ಲವು ಅವಕಾಶಗಳ ಸುರಿಮಳೆಯನ್ನೇ ಹರಿಸಿದವು ಎಂದರೆ ತಪ್ಪಾಗಲಾರದು.
ಬರೋಬ್ಬರಿ 55 ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಈ ಸುಂದರ ನಟಿ ಮಾಡಿದಂತಹ ಎಲ್ಲಾ ಸಿನಿಮಾಗಳು ಹಿಟ್ ಪಟ್ಟಿಗೆ ಸೇರುತ್ತಿದ್ದವು.
ಹೀಗೆ ಪಂಚ ಭಾಷೆಗಳಲ್ಲಿಯೂ ಆಕ್ಟಿವ್ ಇದ್ದಂತಹ ನಟಿ ರಾಶಿಯವರಿಗೆ ದಿನ ಕಳೆದಂತೆ ಅವಕಾಶ ಗಳು ಕಡಿಮೆಯಾಗುತ್ತಾ ಹೋದವು, ಇದರ ಮಧ್ಯೆ ದಾಂಪತ್ಯ ಜೀವನಕ್ಕೂ ಕಾಲಿಟ್ಟ ರಾಶಿಯವರು ಸಿನಿಮಾ ರಂಗದಿಂದ ದೂರ ಉಳಿಯುವ ಪ್ರಯತ್ನದಲ್ಲಿ ಇರುತ್ತಾರೆ.
ತಮ್ಮ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಶ್ರೀಮುನಿ ಎಂಬುವರೊಂದಿಗೆ ನಟಿ ರಾಶಿ ಪ್ರೀತಿಯಲ್ಲಿ ಬೀಳುತ್ತಾರೆ. ಅದೇ ಸಂದರ್ಭದಲ್ಲಿ ಆಕೆಯ ತಂದೆ ಅಗಲಿದಾಗ ಶ್ರೀಮುನಿ ರಾಶಿ ಅವರಿಗೆ ಇನ್ನಷ್ಟು ಹತ್ತಿರವಾದರು.
ಆನಂತರ ಇಬ್ಬರು ಒಟ್ಟಾಗಿ ಮುಂದಿನ ಪಯಣವನ್ನು ನಡೆಸಬೇಕೆಂದು ನಿರ್ಧರಿಸಿ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟರು. ತೆಲುಗು ಸಿನಿಮಾ ಇಂಡಸ್ಟ್ರಿಯ ಪ್ರಿನ್ಸ್ ಮಹೇಶ್ ಬಾಬು ಅವರ ನಿಜಂ ಸಿನಿಮಾದ ನೆಗೆಟಿವ್ ರೋಲ್ನಲ್ಲಿ ರಾಶಿ ಕಾಣಿಸಿಕೊಂಡರು, ಆದರೆ ಈ ಸಿನಿಮಾದಿಂದಾಗಿ ಇವರ ಇಮೇಜ್ ಸಂಪೂರ್ಣ ಡ್ಯಾಮೇಜ್ ಆಗುತ್ತದೆ, ನೆಗೆಟಿವ್ ರೋಲ್ನಲ್ಲಿ ನಟಿಸಿದ್ದಕ್ಕಾಗಿ ಇದ್ದಂತಹ ಅವಕಾಶಗಳನ್ನು ಕಳೆದುಕೊಂಡರು.
ಸೀರಿಯಲ್ಗಳಲ್ಲಿ ನಟಿಸಲು ಪ್ರಯತ್ನಿಸಿದರು ಅವಕಾಶಗಳು ಸಿಗಲಿಲ್ಲ ಹೀಗಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದು ಯುವ ಪ್ರತಿಭೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಪ್ರೋತ್ಸಾಹಿಸುತ್ತಿರುತ್ತಾರೆ.
ಹೀಗೆ ಟಾಲಿವುಡ್ನಲ್ಲಿ ಕೆಲ ದಿನಗಳಿಂದ ರಾಶಿ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಅವಕಾಶಗಳಿಲ್ಲದೆ ಕೆಲಸವಿಲ್ಲದೆ, ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗಿದೆ ಎಂಬೆಲ್ಲ ಸುದ್ದಿಗಳು ಹರಿದಾಡಿದ್ದವು.
ಈ ಕುರಿತು ಸ್ಪಷ್ಟನೆ ನೀಡಲು ಮಾಧ್ಯಮದ ಮುಂದೆ ಬಂದಂತಹ ರಾಶಿಯವರು ಖಾಸಗಿ ಯೂಟ್ಯೂಬ್ ಚಾನೆಲ್ (YouTube Channel) ಒಂದರಲ್ಲಿ ಮಾತನಾಡುವಾಗ ನಾನು ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿಲ್ಲ ಸುಖವಾಗಿದ್ದೇನೆ. ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದಿದ್ದರು.
ಆದರೆ ಇಂದಿಗೂ ಕೂಡ ಕೆಲ ತೆಲುಗು ಮಾಧ್ಯಮಗಳು (Media) ನಟಿ ರಾಶಿ ಸಂಕಷ್ಟದ ಸೆರೆ ಮಾಲೆಯಲ್ಲಿ ಸಿಲುಕಿಕೊಂಡಿದ್ದಾರೆ ಆದರೆ ಅದನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಅಷ್ಟೇ ಎಂಬ ವಿಚಾರವನ್ನು ಚರ್ಚೆ ಮಾಡುತ್ತಿದ್ದಾರೆ.
Unknown Facts of Sneha Kannada Movie Actress Raasi Real Life Story