ನಟಿ ಪಂಡರಿಬಾಯಿ ತಮ್ಮ ಸಿನಿ ಬದುಕಿನಲ್ಲಿ ಸಂಪಾದಿಸಿದ ಒಟ್ಟು ಆಸ್ತಿ ಮೌಲ್ಯ ಎಷ್ಟು? ತಾನು ಗಳಿಸಿದ್ದೆಲ್ಲಾ ದಾನವಾಗಿ ಕೊಟ್ಟಿದ್ದು ಯಾರಿಗೆ? ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಹೇಗಿತ್ತು ಗೊತ್ತಾ?

Story Highlights

ಸಾಲು ಸಾಲು ಸಿನಿಮಾಗಳ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಪಂಡರಿಬಾಯಿಯವರು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ನಟಿಯಾದರು.

70-80ರ ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಅಮ್ಮನಾಗಿ ಪ್ರಸಿದ್ಧಿ ಪಡೆದಿದ್ದಂತಹ ನಟಿ ಪಂಡರಿಬಾಯಿಯವರು (Kannada Actress Pandari Bai) ಬಡ ಕುಟುಂಬದಿಂದ ಬಂದಂತಹ ಹೆಣ್ಣುಮಗಳು.

ಅವರ ತಂದೆ ಹೆಚ್ಚಾಗಿ ನಾಟಕ ಹರಿ ಕಥೆಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಂತಹ ಸಾಮಾನ್ಯ ವ್ಯಕ್ತಿ, ಅದರಲ್ಲೂ ಹರಿಕಥೆ ಮಾಡಿದ ಬಳಿಕ ಅದರಿಂದ ಬಂದಂತಹ ಹಣವನ್ನು 10 ಜನರಿಗೆ ಹಂಚಿ ಅದರಲ್ಲಿ ಉಳಿದಿದ್ದನ್ನು ತಮ್ಮ ಮನೆಗೆ ತೆಗೆದುಕೊಂಡು ಬರುತ್ತಿದ್ದವರು.

ಆಗಿನ ಕಾಲದಲ್ಲಿ 10 ಮಕ್ಕಳನ್ನು ಸಾಕುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಬಡತನದ ಕುಟುಂಬದಿಂದ ಬಂದಂತಹ ಪಂಡಾರಿಬಾಯಿಯವರು ತಮ್ಮ ತಂದೆಯಂತೆ ತಾವು ಕೂಡ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡರು. ಆನಂತರ ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಂತಹ ನಟಿ ಪಂಡರಿಬಾಯಿಯವರು ಮದ್ರಾಸ್ ಗೆ ಹಾರಿದರು.

ನಾಗರಹಾವು ಚಿತ್ರದಲ್ಲಿ ನಟಿ ಕಲ್ಪನಾ ಮಾಡಬೇಕಿದ್ದ ಒನಕೆ ಓಬವ್ವನ ಪಾತ್ರ ನಟಿ ಜಯಂತಿ ಪಾಲಾಗಿದ್ದು ಹೇಗೆ? ಇದಕ್ಕೆ ಪುಟ್ಟಣ್ಣ ಕಣಗಾಲ್ ಒಪ್ಪಿದ್ರಾ?

ಹೀಗೆ ತಮ್ಮ ಅತಿ ಅದ್ಭುತ ಅಭಿನಯ, ಮುಗ್ಧ ಸೌಂದರ್ಯದಿಂದ ಸಾಲು ಸಾಲು ಸಿನಿಮಾಗಳ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಪಂಡರಿಬಾಯಿಯವರು ಕನ್ನಡ (Kannada Movies), ತೆಲುಗು, ತಮಿಳು, ಹಿಂದಿ, ಮಲಯಾಳಂ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ನಟಿಯಾದರು.

ಆಗಿನ ಕಾಲದಲ್ಲಿ ಪಂಡರಿ ಬಾಯಿಯವರ ಅಭಿನಯಕ್ಕೆ ಸರಿಸಾಟಿಯನ್ನು ನೀಡುವಂತಹ ನಟಿ ಅಥವಾ ನಟ ಮತ್ತೊಬ್ಬರಿಲ್ಲ ಎನ್ನುವ ಮಟ್ಟಕ್ಕೆ ಪಂಡರಿ ಬಾಯಿ ಫೇಮಸ್ ಆಗಿದ್ದರು.

Actress Pandari Baiಚೆನ್ನೈನ ಕಲ್ಯಾಣ ನಗರದಿಂದ ಮದ್ರಾಸ್ ಗೆ ಹಾರಿದ ಪಂಡರಿಬಾಯಿಯವರು ಸಾಕಷ್ಟು ಹಣ ಸಂಪಾದನೆ ಮಾಡಿದರು. ಎರಡು ಮೂರು ಎಕರೆ ಜಮೀನಿನಲ್ಲಿ ಸಾಕಷ್ಟು ಸೈಟ್ಗಳನ್ನು ಮಾಡಿ ಅದನ್ನು ಕಷ್ಟದಲ್ಲಿರುವ ಕೋ ಆಕ್ಟರ್ಗಳಿಗೆ, ಮೇಕಪ್ ಮ್ಯಾನ್ ಹಾಗೂ ಇನ್ನಿತರೆ ಸಿನಿಮಾ ಕಲಾವಿದರಿಗೆ ದಾನ ಮಾಡಿದರು.

ಇನ್ನು ದೇವರ ಮೇಲೆ ಅತಿಯಾದ ನಂಬಿಕೆ ಹೊಂದಿದ್ದಂತಹ ಪಂಡರಿ ಬಾಯಿಯವರು ತಮ್ಮ ಮನೆಯ ಕಾಂಪೌಂಡ್ ಅಂಗಳದಲ್ಲಿ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನವನ್ನು ಕಟ್ಟಿಸಿದ್ದರು.

ಬಾರಿ ಸದ್ದು ಮಾಡಿದ್ದ ನಾಗಮಂಡಲ ಸಿನಿಮಾ ಅಂದಿನ ಕಾಲದಲ್ಲಿ ಗಳಿಸಿದ ಹಣ ಎಷ್ಟು ಕೋಟಿ? ಈ ಸಿನಿಮಾದ ಸಕ್ಸಸ್ ಎಷ್ಟರ ಮಟ್ಟಿಗಿತ್ತು ಗೊತ್ತಾ?

ಹೌದು ಗೆಳೆಯರೇ ಪಂಡರಿ ಬಾಯಿಯವರು ಪಾಂಡುರಂಗ ಸ್ವಾಮಿಯ ಆರಾಧಕಿಯಾಗಿದ್ದು ಸದಾ ಕಾಲ ಆತನನ್ನು ಪೂಜಿಸುವ ಆರಾಧಿಸುವ ಹವ್ಯಾಸವನ್ನು ಹೊಂದಿದ್ದರು. ಹೀಗಾಗಿ ತಮ್ಮ ಮನೆಯ ಆವರಣದಲ್ಲಿಯೇ ದೇವಸ್ಥಾನವನ್ನು ಕಟ್ಟಿ, ಬಿಡುವಿನ ಸಮಯದಲ್ಲೆಲ್ಲ ದೇವಸ್ಥಾನದಲ್ಲಿಯೇ ಹೆಚ್ಚಾಗಿ ಕಾಲ ಕಳೆದರು. ಹೀಗೆ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈ ನಟಿ ಅಲ್ಪಾವಧಿಯಲ್ಲಿಯೇ ೫ ಕೋಟಿ ಆಸ್ತಿಯನ್ನು ಸಂಪಾದನೆ ಮಾಡಿದ್ದರು.

ಆದರೆ ತಮ್ಮ 50ನೇ ವಯಸ್ಸಿನಲ್ಲಿ ಅದಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದಂತಹ ಪಿಎಚ್ ರಾಮರಾವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಲ್ಲವನ್ನು ಕಳೆದುಕೊಂಡರು. ಹೌದು ಗೆಳೆಯರೇ ಮೊದಲ ಹೆಂಡತಿ ಹಾಗೂ ಮಕ್ಕಳ ಜವಾಬ್ದಾರಿಯನ್ನು ತಾವೇ ಹೊತ್ತು ಅವರ ಪಾಲನೆ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದರ ನಡುವೆ ನಿರ್ಮಾಣಕ್ಕೂ ಕೈ ಹಾಕಿ ಕೈ ಸುಟ್ಟಿಕೊಂಡ ಪಂಡರಿ ಬಾಯಿ ಆಸ್ತಿಯನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ.

ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ!

ಅಲ್ಲದೆ ಆಕ್ಸಿಡೆಂಟ್ ಆಗಿ ಪಂಡರಿ ಬಾಯಿಯವರ ಎಡಗೈಗೆ ಭಾರಿ ಪೆಟ್ಟು ಬಿದ್ದು ಯಾವ ಕೆಲಸಕ್ಕೆ ಬಾರದಂತಾಗುತ್ತದೆ. ಈ ಸಂದರ್ಭದಲ್ಲಿ ಅವರ ಪೋಷಣೆ ಮಾಡಲು ಅವರೊಂದಿಗೆ ಯಾರು ಇರೋದಿಲ್ಲ, ೪-೫ ಕೋಟಿ ಆಸ್ತಿಯ ಒಡತಿ ಆದರೂ ಪಂಡರಿ ಬಾಯಿ ತಮ್ಮ ಕೊನೆ ಕ್ಷಣದಲ್ಲಿ ಅನುಭವಿಸಿದಂತಹ ಕಷ್ಟ ಅಷ್ಟಿಷ್ಟಲ್ಲ.

Kannada Actress Pandari Bai Cinema Journey and Real Life Story

Related Stories