ನಾಗರಹಾವು ಚಿತ್ರದಲ್ಲಿ ನಟಿ ಕಲ್ಪನಾ ಮಾಡಬೇಕಿದ್ದ ಒನಕೆ ಓಬವ್ವನ ಪಾತ್ರ ನಟಿ ಜಯಂತಿ ಪಾಲಾಗಿದ್ದು ಹೇಗೆ? ಇದಕ್ಕೆ ಪುಟ್ಟಣ್ಣ ಕಣಗಾಲ್ ಒಪ್ಪಿದ್ರಾ?

Story Highlights

ಹಲವಾರು ತಿಂಗಳುಗಳ ಕಾಲ ಎಲ್ಲಾ ಚಿತ್ರ ಮಂದಿರಗಳಲ್ಲಿ ರಾರಾಜಿಸಿದಂತಹ ನಾಗರಹಾವು ಸಿನಿಮಾದಲ್ಲಿ ಒನಕೆ ಓಬವ್ವನ ಪಾತ್ರ ಜನರನ್ನು ಆಕರ್ಷಿಸುವಂಥದ್ದು, ಆದರೆ ಈ ಪಾತ್ರದಲ್ಲಿ ನಟಿ ಜಯಂತಿ ಅವರಿಗೂ ಮೊದಲು ಕಲ್ಪನಾ ಅವರನ್ನು ಆಯ್ಕೆ ಮಾಡಿರುತ್ತಾರೆ.

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾಗಳ ಪಟ್ಟಿ ತೆರೆಯುತ್ತಾ ಹೋದರೆ ನಾಗರಹಾವು (Kannada Naagarahaavu Cinema) ಎಲ್ಲರನ್ನೂ ಆಕರ್ಷಿಸುವಂತಹ ಸಿನಿಮಾ.

ಹೌದು ಎಲ್ಲಾ ಹೊಸ ಕಲಾವಿದರನ್ನು ಹಾಕಿಕೊಂಡು ಪುಟ್ಟಣ್ಣ ಕಣಗಾಲ್ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಆದರೆ ಈ ಚಿತ್ರವು ನಿರೀಕ್ಷೆಗೂ ಮೀರಿದಂತ ಯಶಸ್ಸನ್ನು ಕಂಡುಕೊಳ್ಳುವ ಮೂಲಕ ಸಿನಿಮಾದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ನಟ ನಟಿಯರಿಗೂ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ದೊಡ್ಡ ಮಟ್ಟದ ಹೆಸರನ್ನು ತಂದುಕೊಡುತ್ತದೆ.

ಹಲವಾರು ತಿಂಗಳುಗಳ ಕಾಲ ಎಲ್ಲಾ ಚಿತ್ರ ಮಂದಿರಗಳಲ್ಲಿ ರಾರಾಜಿಸಿದಂತಹ ನಾಗರಹಾವು ಸಿನಿಮಾದಲ್ಲಿ ಒನಕೆ ಓಬವ್ವನ ಪಾತ್ರ ಜನರನ್ನು ಆಕರ್ಷಿಸುವಂಥದ್ದು, ಆದರೆ ಈ ಪಾತ್ರದಲ್ಲಿ ನಟಿ ಜಯಂತಿ (Actress Jayanthi) ಅವರಿಗೂ ಮೊದಲು ಕಲ್ಪನಾ (Actress Kalpana) ಅವರನ್ನು ಆಯ್ಕೆ ಮಾಡಿರುತ್ತಾರೆ.

ಬಾರಿ ಸದ್ದು ಮಾಡಿದ್ದ ನಾಗಮಂಡಲ ಸಿನಿಮಾ ಅಂದಿನ ಕಾಲದಲ್ಲಿ ಗಳಿಸಿದ ಹಣ ಎಷ್ಟು ಕೋಟಿ? ಈ ಸಿನಿಮಾದ ಸಕ್ಸಸ್ ಎಷ್ಟರ ಮಟ್ಟಿಗಿತ್ತು ಗೊತ್ತಾ?

ಆದರೆ ಆ ಅವಕಾಶ ಜಯಂತಿ ಅವರ ಪಾಲಾಗಿ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗಾದ್ರೆ ಓಬವ್ವನ ಪಾತ್ರ ಜಯಂತಿಯವರ ವಶವಾಗಿದ್ದು ಹೇಗೆ? ಇದಕ್ಕೆ ಪುಟ್ಟಣ್ಣ ಕಣಗಾಲ್ ಒಪ್ಪಿದ್ರಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಚಿತ್ರದುರ್ಗ ಕೋಟೆಯ ಪ್ರವಾಸಕ್ಕೆ ಬಂದ ಮಕ್ಕಳಿಗೆ ಓಬವ್ವನ ವೀರ ಕಥೆಯನ್ನು ಸಾರುವಂಥಹ ಪಾತ್ರ ಒಂದನ್ನು ಪುಟ್ಟಣ್ಣ ಕಣಗಾಲ್ ತಮ್ಮ ನಾಗರಹಾವು ಸಿನಿಮಾದಲ್ಲಿ ರಚಿಸಿರುತ್ತಾರೆ, ಅಲ್ಲದೆ ಈ ಪಾತ್ರವನ್ನು ಆಗಿನ ಕಾಲದ ಪೀಕ್ನಲ್ಲಿ ಇದ್ದಂತಹ ನಟಿ ಕಲ್ಪನಾ ಅವರ ಬಳಿ ಮಾಡಿಸಬೇಕೆಂಬುದು ಪುಟ್ಟಣ್ಣ ಕಣಗಾಲ್ ಅವರ ಪ್ರಬುದ್ಧ ಉದ್ದೇಶವಾಗಿರುತ್ತದೆ.

Naagarahaavu Kannada Cinema

ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ!

ಹೀಗಾಗಿ ಕಲ್ಪನಾ ಅವರ ಬಳಿ ಹೋಗಿ ತಮ್ಮ ಸಿನಿಮಾದಲ್ಲಿ ಬರುವಂತಹ ಸಣ್ಣ ಪಾತ್ರ ಒಂದರಲ್ಲಿ ಅಭಿನಯಿಸುವಿರಾ? ಎಂದು ಕೇಳಿಕೊಂಡಾಗ ಕಲ್ಪನಾ ಅವರು ಏಕ್ದಂ ಇಂತಹ ಸಣ್ಣ ಪುಟ್ಟ ಪಾತ್ರಗಳೆಲ್ಲ ನಾನು ಅಭಿನಯಿಸುವುದಿಲ್ಲ ನನಗೆ ಕಾಲಾವಕಾಶಗಳು ಇಲ್ಲ, ದಯವಿಟ್ಟು ಈ ರೀತಿಯಾದಂತಹ ಪಾತ್ರಗಳಿಗೆ ನನ್ನನು ಎಂದಿಗೂ ಆಯ್ಕೆ ಮಾಡಬೇಡಿ ಎಂದು ಬಿಟ್ಟರು.

ಹಾಗಾದ್ರೆ ಈ ಪಾತ್ರವನ್ನು ಯಾರ ಬಳಿ ಮಾಡಿಸುವುದು ಎಂದು ಯೋಚಿಸುತ್ತಿದ್ದಾಗ ಅವರ ತಲೆಗೆ ಹೊಳೆದ ಹೆಸರೇ ಅಭಿನಯ ಶಾರದೆ ಜಯಂತಿ. ಜಯಂತಿಯಮ್ಮ ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರದಲ್ಲಿ ಅಭಿನಯಿಸು, ನಿನ್ನ ಹೆಸರು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಉಳಿಯುವಂತೆ ನಾನು ಮಾಡುತ್ತೇನೆ ಎಂಬ ಭರವಸೆ ನೀಡಿದ್ರಂತೆ.

ನಟ ಸತ್ಯಜಿತ್ ಇದ್ದಾಗ ಯಾರೂ ಪ್ರೀತಿ ತೋರಿಸಲಿಲ್ಲ, ಹೋದ ಮೇಲೆ ಮಕ್ಕಳ ಆಕ್ರಂದನ! ಪಾಪ ಬದುಕಿದಷ್ಟು ದಿನ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಮಾಂತ್ರಿಕ ನಿರ್ದೇಶಕನದ ಒನಕೆ ಓಬವ್ವನ ಪಾತ್ರಕ್ಕೆ ಗಂಡೆದೆಯ ವೀರನಾರಿಯಾಗಿ ಶತ್ರುಗಳನ್ನ ಹೆಮ್ಮೆಟ್ಟಿಸಿ ನಾಡಿಗಾಗಿ ಬಲಿದಾನವಾಗುವ ಪಾತ್ರದಲ್ಲಿ ನಟಿ ಜಯಂತಿಯವರು ತಮ್ಮ ಪೂರ್ಣ ಪ್ರತಿಭೆಯನ್ನು ಸಾಬೀತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಹೀಗೆ ಪುಟ್ಟಣ್ಣ ಕಣಗಾಲ್ ಅವರು ನೀಡಿದ ಭರವಸೆಯನ್ನು ಆದರಿಸಿ ಜಯಂತಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನಾಗರಹಾವು ಸಿನಿಮಾದ ಹೈಲೈಟಾದರು.

Interesting Facts about Onake Obavva Role in Kannada Naagarahaavu Cinema

Related Stories