ನಟ ಸತ್ಯಜಿತ್ ಇದ್ದಾಗ ಯಾರೂ ಪ್ರೀತಿ ತೋರಿಸಲಿಲ್ಲ, ಹೋದ ಮೇಲೆ ಮಕ್ಕಳ ಆಕ್ರಂದನ! ಪಾಪ ಬದುಕಿದಷ್ಟು ದಿನ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ?

ಸ್ನೇಹಿತರೆ, 80-90 ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ಸಾಕಷ್ಟು ಅಪ್ರತಿ ಕಲಾವಿದರು ಎಂಟ್ರಿಕೊಟ್ಟು ತಮ್ಮ ಅಮೋಘ ಅಭಿನಯದ ಚಾಪಿನ ಮೂಲಕ ಹೆಸರುವಾಸಿಯಾದರು.
ಸ್ಟಾರ್ ನಟರಾಗಿ ಗುರುತಿಸಿಕೊಳ್ಳದೆ ಹೋದರು ಪೋಷಕ ನಟನಾಗಿ ಖಳನಟನಾಗಿ ಹಾಗೂ ಸಹನಟನ ಪಾತ್ರಗಳಿಂದಾಗಿಯೇ ಜನರ ಮನಸ್ಸಿಗೆ ಹತ್ತಿರವಾದಂತಹ ನೂರಾರು ಕಲಾವಿದರಲ್ಲಿ 600 ಸಿನಿಮಾಗಳ ಸರದಾರ ನಟ ಸತ್ಯಜಿತ್ (Actor Sathyajith) ಕೂಡ ಒಬ್ಬರು.
ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ ನಟ ಸತ್ಯಜಿತ್ ಅವರ ಬದುಕಿನ ಕರುಣಾಜನಕ ಕಥೆಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ, 1949 ಜೂನ್ ಎರಡನೇ ತಾರೀಕಿನಂದು ಹುಬ್ಬಳ್ಳಿಯಲ್ಲಿ ಜನಿಸಿದ ಸತ್ಯಜಿತ್, ಅವರಿಗೆ ಓದಿನಲ್ಲಿ ಹೆಚ್ಚಾಗಿ ಆಸಕ್ತಿ ಇಲ್ಲದ ಕಾರಣ ತಮ್ಮ ಕುಟುಂಬದ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತು ಸಣ್ಣಪುಟ್ಟ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುತ್ತಾರೆ.
ಇಂತಹ ಸಂದರ್ಭದಲ್ಲಿ ಇವರಿಗೆ ನಟನೆ ಮೇಲೆ ಅಗಾಧವಾದ ಒಲವು ಹರಿದು ಬರುತ್ತದೆ. ಹೌದು ಗೆಳೆಯರೇ, ಮುಸ್ಲಿಂ ಸಮುದಾಯದವರಾದ ಸತ್ಯಜಿತ್ ಅವರಿಗೆ ಅಂಕುಶ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕುತ್ತದೆ. ಹೀಗೆ ಸುಬ್ಲಿಯ ಎಂಬ ಪಾತ್ರದ ಮೂಲಕ 1986ರಲ್ಲಿ ಬಣ್ಣದ
ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ಅದೇ ವರ್ಷ ತೆರೆಕಂಡ ಅರುಣರಾಗ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ (Kannada Movies) ಬಂದರು.

ಹೀಗೆ ನ್ಯಾಯಕ್ಕೆ ಶಿಕ್ಷೆ, ಮಿಸ್ಟರ್ ರಾಜ, ಅಂತಿಮ ತೀರ್ಪು, ಯುದ್ಧ ಕಾಂಡ, ರಾಜ ಯುವರಾಜ, ನ್ಯಾಯಕ್ಕಾಗಿ ನಾನು, ತಾಯಿಗೊಬ್ಬ ಕರ್ಣ, ಭೂಮಿ ತಾಯಾಣೆ, ಮಹಾದಾಸೋಹಿ ಶರಣಬಸವ, ಪೋಲಿಸ್ ಲಾಕಪ್, ಮೈಸೂರು ಜಾಣ, ಚೈತ್ರದ ಪ್ರೇಮಾಂಜಲಿ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ಬಹುದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ನಟ.
ವೈಯಕ್ತಿಕ ವಿಚಾರವನ್ನು ನೋಡುವುದಾದರೆ ಸೋಫಿಯಾ ಬೇಗಂ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಅಕ್ತಾರ್ ಸ್ವಲೆಹ ಹಾಗೂ ಆಕಾಶ್ ಜಿತ್ ಎಂಬ ಮಕ್ಕಳಿದ್ದಾರೆ.
ಈ ಇಬ್ಬರು ಮಕ್ಕಳ ಬೆಳವಣಿಗೆಯತ್ತ ಸತ್ಯಜಿತ್ ತಮ್ಮ ಸಂಪೂರ್ಣ ಬದುಕನ್ನೇ ಮುಡಿಪಾಗಿಟ್ಟರು.. ಆದರೆ ಕೊನೆಗಾಲದಲ್ಲಿ ಸತ್ಯಜಿತ್ ಅವರು ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದಾಗ ಯಾರೂ ಕೂಡ ಅವರೊಂದಿಗೆ ಇದ್ದು ನೋಡಿಕೊಳ್ಳಲಿಲ್ಲ.
ಸ್ವತಃ ಸತ್ಯಜಿತ್ ಅವರ ಸಂದರ್ಶನ ಒಂದರಲ್ಲಿ ಹೇಳಿದ ಹಾಗೆ ಸತ್ಯಜಿತ್ ಅವರಿಗೆ ತಮ್ಮ ಮಗಳೆಂದರೆ ಬಹಳಷ್ಟು ಪ್ರೀತಿ, ಹೀಗಾಗಿ ಆಕೆ ಚೆನ್ನಾಗಿ ಓದಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಕಾರಣದಿಂದ ಸಾಲ ಸೂಲ ಮಾಡಿ ಮಕ್ಕಳನ್ನು ಓದಿಸಿದರು.
ಅದರಂತೆ ಮಗ ಸಿನಿ ಬದುಕಿನಲ್ಲಿ ತೊಡಗಿಸಿಕೊಂಡಿದ್ದರೆ, ಮಗಳು ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಸ್ತಿಯನ್ನೆಲ್ಲ ಅಡವಿಟ್ಟು ಓದಿಸಿದರು.. ಮದುವೆಯನ್ನು ಮಾಡಿದರು. ಆದರೆ ಸತ್ಯಜಿತ್ ಮಾನಸಿಕವಾಗಿ ದೈಹಿಕವಾಗಿ ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದಾಗ ಯಾರು ಕೂಡ ಅವರ ಜೊತೆಗಿರಲಿಲ್ಲ ಎಂಬುದು ಮನಕಲಕುವಂತಹ ವಿಚಾರ.
Unknown Facts About Kannada Actor Sathyajith Real Life Story



