ಸಿನಿಮಾ ಇಂಡಸ್ಟ್ರಿಗೆ ಬರೋಕು ಮುಂಚೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಮಂತಾ ಸಂಬಳ ಎಷ್ಟಿತ್ತು ಗೊತ್ತಾ? ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?

Actress Samantha Ruth Prabhu : ಸ್ನೇಹಿತರೆ ನಟಿ ಸಮಂತಾ ರುತ್ ಪ್ರಭು ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರ ತಲೆಯಲ್ಲಿಯೂ ಪುಷ್ಪಾ ಸಿನಿಮಾದ (Pushpa Cinema) ಹೂ ಅಂಟಾವ ಮಾಮ ಉಊ ಅಂಟಾವ.. ಹಾಡು ನೆನಪಿಗೆ ಬಂದುಬಿಡುತ್ತದೆ.
ತಮ್ಮ ಮಾದಕ ಮೈಮಾಟ, ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಮನಧರಿಸಿಯಾಗಿರುವ ನಟಿ ಸಮಂತಾ ಸಿನಿಮಾ ಬದುಕಿಗೆ ಬರುವ ಮುನ್ನ ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಂತೆ. ಹಾಗಾದ್ರೆ ಸಮಂತಾ ಸಿನಿ ಬದುಕಿಗೆ (Samantha Cinema Journey) ಪಾದಾರ್ಪಣೆ ಮಾಡಿದ್ದು ಹೇಗೆ?
ಅದಕ್ಕೂ ಮುಂಚೆ ಯಾವ ಕೆಲಸ (Job) ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ 28 ಏಪ್ರಿಲ್ 1987 ರಂದು ಜೋಸೆಫ್ ಪ್ರಭು ಮತ್ತು ನೀನೆಟ್ ಪ್ರಭು ಎಂಬ ದಂಪತಿಗಳಿಗೆ ಜನಿಸಿದ ಸಮಂತಾ ಚಿಕ್ಕಂದಿನಿಂದಲೂ ಬಹಳನೇ ಚೂಟಿ ಇದ್ದಂತಹ ಹುಡುಗಿ. ಹೀಗೆ ವಿದ್ಯಾಭ್ಯಾಸ (Education) ಮುಗಿಸಿದ ನಂತರ ಹೋಟೆಲ್ ಮ್ಯಾನೇಜ್ಮೆಂಟ್ (Hotel Management) ಮೇಲೆ ಬಹಳನೇ ಆಸಕ್ತಿ ಇದ್ದ ಕಾರಣದಿಂದ ಸಮಂತಾ ಅವರು ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಅವರೇ ಸ್ವತಃ ಹೇಳಿಕೊಂಡಂತೆ ಬಹಳಾನೇ ಕಡಿಮೆ ಸಂಬಳ (Salary) ಹಾಗೂ ಹೆಚ್ಚು ಕೆಲಸ ಇದ್ದಂತಹ ಹೋಟೆಲ್ ಕೆಲಸದಲ್ಲಿ (Hotel Job) ಸಾಕಷ್ಟು ಕಷ್ಟ ಪಡುತ್ತಿದ್ದರು.
ನೋಡಲು ಬಹಳನೇ ಸುಂದರವಾಗಿದ್ದ ಈ ನಟಿ ಗೌತಮ್ ವಾಸುದೇವ ಮೆನನ್ ಅವರ ತೆಲುಗಿನ ಹೇ ಮಾಯ ಚೇಸಾವೆ ಎಂಬ ಸಿನಿಮಾದ ಮೂಲಕ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಏಕಕಾಲಕ್ಕೆ ತಮಿಳಿನ ವಿನ್ನೈ ತಾಂಡಿ ವರುವಾಯ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಒಂದೇ ವರ್ಷದಲ್ಲಿ ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಮಿಂಚಿದ ಸಮಂತಾ ತಮ್ಮ ಮೊದಲ ಸಿನಿಮಾದಲ್ಲಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ಅದೇ ವರ್ಷ ಅಕ್ಟೋಬರ್ 6 ನೇ ತಾರೀಖಿನಂದು ಗೋವಾದಲ್ಲಿ (Goa) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ಅಂದ್ರೆ 2, ಅಕ್ಟೋಬರ್ 2021ರಂದು ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಘೋಷಿಸಿಕೊಂಡರು.
ಇವರಿಬ್ಬರೂ ದೂರಾದದ್ದು ಅದೆಷ್ಟೋ ಅಭಿಮಾನಿಗಳ ಮನಸ್ಸಿಗೆ ಅಗಾಧವಾದ ನೋವನ್ನು ತಂದಿದ್ದು ಅಕ್ಷರಶಃ ಸತ್ಯ. ಇಂದಿಗೂ ಕೂಡ ಈ ಜೋಡಿಗಳು ವಿಚ್ಛೇದನ ಪಡೆದುಕೊಂಡಿದ್ದಾದರೂ ಯಾಕೆ ಎಂಬ ಅಧಿಕೃತ ಕಾರಣ ತಿಳಿದು ಬಂದಿಲ್ಲ.
ಆದರೆ ಕೆಲ ಮಾಹಿತಿಗಳ ಪ್ರಕಾರ ನಟಿ ಸಮಂತಾ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಲ್ಲಿ ಬಹಳ ಮಾದಕವಾಗಿ ಕಾಣಿಸಿಕೊಂಡಿದ್ದೆ ಈ ಎಲ್ಲ ಬೆಳವಣಿಗೆಗಳಿಗೂ ಕಾರಣವಾಗಿದೆ ಎಂಬ ಸುದ್ದಿ ಹರಿದಾಡಿದವು.
ವಿಚ್ಛೇದನದ ಬಳಿಕ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಕೆಲವರಿಗೆ ಬೇಸರ ಮೂಡಿಸಿದಂತಹ ಸಂಗತಿಯಾಗಿತ್ತು. ಹೀಗೆ ವಿಚ್ಛೇದನದ ಬಳಿಕ ಸಾಕಷ್ಟು ಸೋಲು ಹತಾಶೆಯನ್ನು ಅನುಭವಿಸುತ್ತಿರುವ ಸಮಂತಾ ತಮ್ಮ ಶಾಕುಂತಲಂ ಸಿನಿಮಾದ ಸೋಲಿನಿಂದ ಮತ್ತಷ್ಟು ಬೇಸರಕ್ಕೊಳಗಾದರು.
ಇದರ ಜೊತೆಗೆ ಅನಾರೋಗ್ಯ ಸಮಸ್ಯೆ ಇಂದಲೂ ಕುಗ್ಗಿ ಹೋಗಿರುವ ಸಮಂತಾ ಇದೆಲ್ಲದರಿಂದ ಹೊರ ಬರಬೇಕೆಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಎಂಬ ಲವ್ ಸ್ಟೋರಿ ಆಧಾರಿತ ಸಿನಿಮಾದಲ್ಲಿ ಸ್ಯಾಮ್ ನಟಿಸುತ್ತಿದ್ದು ಈ ಸಿನಿಮಾದಿಂದಾದರೂ ಸಮಂತಾ ಅವರಿಗೆ ಸಕ್ಸಸ್ ಸಿಗಲಿದ್ಯಾ ಎಂಬುದನ್ನು ಕಾದು ನೋಡಬೇಕು.
Do you know what job actress Samantha used to do before entering the film industry



