ವಿಜಯ್ ದೇವರಕೊಂಡ ಖುಷಿ ಸಿನಿಮಾಗೆ ಸೆಡ್ಡು ಹೊಡೆದ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Actor Rakshit Shetty) ರುಕ್ಮಿಣಿ ವಸಂತ್ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

Sapta Sagaradaache Ello Collections : ಸೆಪ್ಟೆಂಬರ್ ಮೊದಲನೇ ದಿನ ಸಿನಿಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ದೊರಕಿದೆ, ಒಂದೆಡೆ ವಿಜಯ್ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ಅಭಿನಯದ ‘ಖುಷಿ’ ಸಿನಿಮಾ ತೆರೆಗಪ್ಪಳಿಸಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Actor Rakshit Shetty) ರುಕ್ಮಿಣಿ ವಸಂತ್ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಶ್ರೀಲೀಲಾ, ರಶ್ಮಿಕಾಗೆ ಶುರುವಾಯಿತು ಡವ-ಡವ! ತೆಲುಗಿಗೆ ಕಾಂತಾರ ಬೆಡಗಿ ಸಪ್ತಮಿ ಗೌಡ ಎಂಟ್ರಿ

ಹೌದು ಸ್ನೇಹಿತರೆ ಹೇಮಂತ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವಂತಹ ಈ ಸಿನಿಮಾವು (Kannada Cinema) ಇಬ್ಬರು ವ್ಯಕ್ತಿಗಳ ನಡುವೆ ಇರುವಂತಹ ಗಾಡವಾದ ಪ್ರೀತಿ ಬಾಂಧವ್ಯದ ಪ್ರೇಮ ಕಥಾ ಹತ್ತಿರವನ್ನು ಹೊಂದಿದ್ದು, ಪ್ರೇಮಿಗಳು ದೂರ ಇದ್ದು ವೇದನೆ, ರೋಧನೆ, ಜೈಲು ಶಿಕ್ಷೆ, ಭಾವಕತೆ ಎಲ್ಲವನ್ನು ಅನುಭವಿಸಿದರು ಎಂದಿಗೂ ದೂರವಾಗದಂತಹ ಪ್ರೀತಿ ನಮ್ಮದು ಎಂಬ ಆಗರವಾದ ಬಾಂಧವ್ಯವನ್ನು ಸಾರುವ ಮನು ಹಾಗೂ ಪ್ರಿಯ ಎಂಬ ಪಾತ್ರದಲ್ಲಿ ರಕ್ಷಿತ್ ಮತ್ತು ರುಕ್ಮಿಣಿ ವಸಂತ ಅಭಿನಯಿಸಿದ್ದಾರೆ.

Kannada News

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರನ್ನು ತೊರೆದು ಆಸೆಗಳ ಹಿಂದೆ ಹೋದರೆ ಏನಾಗುತ್ತದೆ ಎಂಬುದನ್ನು ಜನರಿಗೆ ಮನದಟ್ಟಾಗುವಂತೆ ಮನು ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಹೇಳಾ ಹೊರಟಿದ್ದು, ಚಿತ್ರ ಈಗಿನ ಯುವ ಜನತೆಗೆ ಹೇಳಿ ಮಾಡಿಸಿದಂತಿದೆ.

ಸೋಶಿಯಲ್ ಮೀಡಿಯಾಗೆ ಕಾಲಿಟ್ಟ ನಯನತಾರಾ, ಒಂದೇ ಒಂದು ಪೋಸ್ಟಿಗೆ 1.5 ಮಿಲಿಯನ್ ಫಾಲೋವರ್ಸ್!

ಅಷ್ಟೇ ಅಲ್ಲದೆ ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ಚೈತ್ರ ಜೆ ಆಚಾರ್, ರಮೇಶ್ ಇಂದಿರಾ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಹೀಗೆ ಮುಂತಾದ ಸ್ಟಾರ್ ಕಲಾವಿದರ ಮುಖ್ಯ ಭೂಮಿಕೆಯಲ್ಲಿ ಸಿನಿಮಾ ತಯಾರಾಗಿದ್ದು, ಚಿತ್ರ ನೋಡಿದ ಪ್ರೇಕ್ಷಕರು ಅದ್ಭುತ ರೆಸ್ಪಾನ್ಸ್ ನೀಡಿದ್ದಾರೆ.

Sapta Sagaradaache Ello Kannada Movieಮೊದಲ ದಿನವೇ ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಂಡಂತಹ ಸಪ್ತ ಸಾಗರದಾಚೆ ಎಲ್ಲೋ, ಚಿತ್ರವು ಮೊದಲ ದಿನವೇ ಬರೋಬ್ಬರಿ 2.5 ರಿಂದ 3 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಂಡಿದ್ದು, ರಕ್ಷಿತ್ ಶೆಟ್ಟಿ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

ಅಲ್ಲದೆ ಪ್ರಪ್ರಥಮ ಬಾರಿಗೆ ರುಕ್ಮಿಣಿ ವಸಂತ್ ಹಾಗೂ ರಕ್ಷಿತ್ ಶೆಟ್ಟಿ ಅವರ ಕಾಂಬಿನೇಷನ್ ತೆರೆಯ ಮೇಲೆ ಅದ್ಭುತವಾಗಿ ವರ್ಕ್ ಆಗಿದ್ದು, ಸಿನಿಮಾ ವೀಕ್ಷಿಸಿದಂತಹ ಪ್ರೇಕ್ಷಕರು ‘ಇಬ್ಬರು ನಿಜ ಜೀವನದಲ್ಲೂ ಒಂದಾದರೆ ಬಹಳ ಚೆನ್ನಾಗಿರುತ್ತದೆ’, ‘ಸಿನಿಮಾ ಬಹಳ ಅದ್ಭುತವಾಗಿದೆ ಹಂಡ್ರೆಡ್ ಡೇಸ್ ಪಕ್ಕಾ’, ‘ ಚಿತ್ರ ನೋಡಲು ಬರುವವರು ತಪ್ಪದೆ ಕರ್ಚಿಫ್ ಅಥವಾ ಟಿಶ್ಯೂ ತೆಗೆದುಕೊಂಡು ಬನ್ನಿ’, ‘ ಎಲ್ಲರೂ ಕುಟುಂಬ ಸಮೇತರಾಗಿ ಬಂದು ನೋಡಬೇಕಾದ ಒಂದೊಳ್ಳೆ ಗಾಢವಾದ ಪ್ರೇಮ ಕಥೆ ಇದು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಚಾರ್ಲಿ 777 ಸಿನಿಮಾದ ನಂತರ ಅಂದರೆ ಒಂದು ವರ್ಷಗಳ ಬಳಿಕ ತನ್ನ ನೆಚ್ಚಿನ ನಟನನ್ನು ತೆರೆಯ ಮೇಲೆ ಕಂಡಂತಹ ಜನರು ಸಂತಸ ಗೊಂಡಿದ್ದು, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಭಾಗ ಈ ತಿಂಗಳು ಹಾಗೂ ಇನ್ನರ್ಧದ ಭಾಗ ಮುಂದಿನ ತಿಂಗಳು, ಅಕ್ಟೋಬರ್ ಎರಡನೇ ತಾರೀಕು ತೆರೆ ಕಾಣಲಿರುವ ಮಾಹಿತಿಯನ್ನು ರಕ್ಷಿತ್ ಶೆಟ್ಟಿ, ಹಾಗೂ ಚಿತ್ರತಂಡ ಹಂಚಿಕೊಂಡಿದ್ದಾರೆ.

Kannada Movie Sapta Sagaradaache Ello First Day Collections

Follow us On

FaceBook Google News