Nayanthara and Vignesh Shivan: ನಯನತಾರಾ ಮತ್ತು ವಿಘ್ನೇಶ್ ಶಿವನ್ ಲವ್ ಸ್ಟೋರಿ ಶುರುವಾಗಿದ್ದು ಆ ಸಿನಿಮಾದಿಂದಲೇ..!
Nayanthara and Vignesh Shivan: ಕಾಲಿವುಡ್ ಪ್ರೇಮ ಜೋಡಿ ನಯನತಾರಾ-ವಿಘ್ನೇಶ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಜೂನ್ 2022 ರಲ್ಲಿ ವಿವಾಹವಾದರು.
Nayanthara and Vignesh Shivan Love Story: ಕಾಲಿವುಡ್ ಪ್ರೇಮ ಜೋಡಿ ನಯನತಾರಾ-ವಿಘ್ನೇಶ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಜೂನ್ 2022 ರಲ್ಲಿ ವಿವಾಹವಾದರು. ಇತ್ತೀಚೆಗೆ ನಯನತಾರಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಆದರೆ ಅವರ ಪ್ರೇಮಕಥೆ ಎಲ್ಲಿಂದ ಪ್ರಾರಂಭವಾಯಿತು? ಅವರು ಯಾವಾಗ ಪ್ರೀತಿಮಾಡಲು ಶುರುಮಾಡಿದರು? ಅವರು ಮೊದಲು ಎಲ್ಲಿ ಭೇಟಿಯಾದರು? ತಿಳಿಯಬೇಕಾದರೆ ಈ ಸ್ಟೋರಿ ಓದಲೇಬೇಕು.
ಕಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮ ಏಳು ವರ್ಷಗಳ ಪಯಣದಲ್ಲಿ ಮೊದಲ ಹೆಜ್ಜೆ ಇಟ್ಟರು. ಇವರಿಬ್ಬರ ಕಾಂಬಿನೇಷನ್ ನಲ್ಲಿ 2015ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಸಿನಿಮಾ ‘ನಾನೂಂ ರೌಡಿ ಧನ್’. ಈ ಪ್ರೇಮಕಥೆ ಬಿಡುಗಡೆಯಾಗಿ ಏಳು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಇವರಿಬ್ಬರ ಪ್ರೇಮ ಪಯಣ ಹೇಗಿತ್ತು ಅನ್ನೋದನ್ನು ನೋಡೋಣ.
ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಒತ್ತಾಯ, ನಿರ್ದೇಶಕನ ವಿರುದ್ಧ ಪ್ರಕರಣ
ಮೊದಲ ಆಯ್ಕೆ ನಯನ ಅಲ್ಲ: ನಾನು ರೌಡಿ ಧಾನ್ ಚಿತ್ರೀಕರಣದ ಸಮಯದಲ್ಲಿ ನಯನತಾರಾ ಮೊದಲ ಬಾರಿಗೆ ವಿಘ್ನೇಶ್ ಶಿವನ್ ಅವರನ್ನು ಭೇಟಿಯಾದರು. ಅಂದಿನಿಂದ ಅವರ ಪ್ರೇಮಕಥೆ ಶುರುವಾಯಿತು. ಆದರೆ ಈ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ಮೊದಲ ಆಯ್ಕೆಯಾಗಿರಲಿಲ್ಲ. ಅನೇಕರಿಗೆ ಇದು ತಿಳಿದಿಲ್ಲ. ಆದರೆ ಆಕಸ್ಮಿಕವಾಗಿ ಹೋಟೆಲ್ ಒಂದರಲ್ಲಿ ನಯನತಾರಾ ಅವರನ್ನು ಭೇಟಿಯಾಗಿ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾದರು.
ಚಿತ್ರ ಬಿಡುಗಡೆಯಾದ 7 ನೇ ವಾರ್ಷಿಕೋತ್ಸವದಂದು ವಿಘ್ನೇಶ್ ಶಿವನ್ ಚಿತ್ರದ ಸೆಟ್‌ಗಳಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ವಿಘ್ನೇಶ್ ಮತ್ತು ನಯನತಾರಾ ಸಮುದ್ರದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು. ಮೊದಮೊದಲು ಅವರು ಯಾವುದೋ ಗಂಭೀರವಾಗಿ ಚರ್ಚಿಸುತ್ತಿರುವುದು ಕಂಡುಬಂತು. ಸ್ವಲ್ಪ ಸಮಯದ ನಂತರ ಇಬ್ಬರೂ ನಗು ವಿನಿಮಯ ಮಾಡಿಕೊಂಡರು.
ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
Follow us On
Google News |
Advertisement