Prabhas New Movie: ಗುಟ್ಟಾಗಿ ಶುರುವಾಗಿದೆ ಪ್ರಭಾಸ್-ಮಾರುತಿ ಸಿನಿಮಾದ ಶೂಟಿಂಗ್

Prabhas New Movie: ಟಾಲಿವುಡ್ ನಲ್ಲಿ ಮಾರುತಿ-ಪ್ರಭಾಸ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಬರುತ್ತಿರುವುದು ಗೊತ್ತೇ ಇದೆ

Prabhas New Movie: ಟಾಲಿವುಡ್ ನಲ್ಲಿ ಮಾರುತಿ-ಪ್ರಭಾಸ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಬರುತ್ತಿರುವುದು ಗೊತ್ತೇ ಇದೆ. ಇವರಿಬ್ಬರು ಜೊತೆಯಾಗುತ್ತಿರುವ ಸಿನಿಮಾ ಈಗಾಗಲೇ ಲಾಂಚ್ ಆಗಿದೆ. ಆದರೆ ಬಹಳ ದಿನಗಳ ನಂತರ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಸಿನಿಮಾ ಲಾಂಚ್ ಆದಷ್ಟೇ ಗೌಪ್ಯವಾಗಿ ಸಿನಿಮಾ ಶೂಟಿಂಗ್ ಶುರುವಾಗಿದೆ ಎಂಬುದು ಲೇಟೆಸ್ಟ್ ಟಾಕ್.

ಗಂಧದ ಗುಡಿ ದರ್ಶನ, ಅಪ್ಪು ಅಭಿಮಾನಿಗಳ ಸಂಭ್ರಮ

ಸದ್ಯ ಫಿಲಂನಗರದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಚಿತ್ರದ ಶೂಟಿಂಗ್ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ನಡೆಯುತ್ತಿರುವ ಶೂಟಿಂಗ್ ಬಗ್ಗೆ ಮಾಧ್ಯಮಗಳಿಗೆ ಹೇಳಬೇಡಿ ಎಂದು ಪ್ರಭಾಸ್ ನಿರ್ಮಾಪಕರಿಗೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿಯೊಂದು ಚರ್ಚೆಯಾಗಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಪ್ರಭಾಸ್ ಈಗಾಗಲೇ ಮೂರು ದಿನಗಳ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಒಟ್ಟಿನಲ್ಲಿ ಪ್ರಭಾಸ್ ಅಭಿಮಾನಿಗಳು ಈ ಅಪ್‌ಡೇಟ್‌ನಿಂದ ಸಂಭ್ರಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸುತ್ತಿದ್ದಾರೆ.. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ನಟಿ ಚಾರ್ಮಿಗೆ ಹೆಚ್ಚಾದ ಕಿರುಕುಳ, ನಿಮಿಷ ನಿಮಿಷಕ್ಕೂ ಫೋನ್ ಕರೆಗಳು

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಪ್ರಭಾಸ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಮತ್ತು ಪ್ರಾಜೆಕ್ಟ್ ಕೆ ಚಿತ್ರೀಕರಣ ಹಂತದಲ್ಲಿರುವಾಗಲೇ ಆದಿಪುರುಷ ಬಿಡುಗಡೆಗೆ ಸಿದ್ಧವಾಗುತ್ತಿದೆ.

Prabhas Maruthi New Movie Started Shooting