ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್

ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟೊಟ್ಟಿಗೆ ಸಿನಿಮಾಗಳನ್ನು ಮಾಡುತ್ತಾ ಯಶಸ್ಸಿನತ್ತ ಸಾಗುತ್ತಿರುವಾಗ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರ ಹಾವಭಾವ ಹಾಗೂ ಅವರ ನಡವಳಿಕೆ, ಮುಗ್ಧ ನಗು ಎಲ್ಲವೂ ಮನಸೊಲುವಂತೆ ಮಾಡಿಬಿಡುತ್ತದೆ.

ಸ್ನೇಹಿತರೆ, ನಟ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮುದ್ದಾದ ಲವ್ ಸ್ಟೋರಿ ಹಾಗೂ ಒಟ್ಟಿಗೆ ಪ್ರಾರಂಭ ಮಾಡಿದ ಅವರ ಸಿನಿ ಪಯಣ, ಒಬ್ಬರ ಯಶಸ್ವಿನಿಂದ ಮತ್ತೊಬ್ಬರು ನಿಂತು ಮನಸ್ಪೂರ್ತಿಯಾಗಿ ಸಪೋರ್ಟ್ ಮಾಡುವಂತಹ ಪ್ರೀತಿ ಎಲ್ಲವೂ ನೆನಪಿಗೆ ಬಂದುಬಿಡುತ್ತದೆ.

ಇತ್ತೀಚಿನ ದಿನದ ಅದೆಷ್ಟೋ ಯುವಜನತೆಯ ಪಾಲಿನ ಇನ್ಸ್ಪಿರೇಷನ್ ಎಂದೇ ಕರೆಸಿಕೊಳ್ಳುವಂತಹ ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಿನ್ಸೆಸ್ ರಾಧಿಕಾ ಪಂಡಿತ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?

ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?

ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್ - Kannada News

ಒಟ್ಟೊಟ್ಟಿಗೆ ಸಿನಿಮಾರಂಗಕ್ಕೆ ಕಾಲಿಡುತ್ತಾ ತಮ್ಮ ಸುಂದರ ಪಯಣವನ್ನು ಶುರುಮಾಡಿದ ಈ ಜೋಡಿ ಜೋಡಿ ನಂದಗೋಕುಲ ಎಂಬ ಸೀರಿಯಲ್ನಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು.

ಹೀಗೆ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟೊಟ್ಟಿಗೆ ಸಿನಿಮಾಗಳನ್ನು ಮಾಡುತ್ತಾ ಯಶಸ್ಸಿನತ್ತ ಸಾಗುತ್ತಿರುವಾಗ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರ ಹಾವಭಾವ ಹಾಗೂ ಅವರ ನಡವಳಿಕೆ, ಮುಗ್ಧ ನಗು ಎಲ್ಲವೂ ಮನಸೊಲುವಂತೆ ಮಾಡಿಬಿಡುತ್ತದೆ.

ಆನಂತರ ಹೇಗೋ ಧೈರ್ಯ ಮಾಡಿ ಹೇಳಿ ಬಿಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಅದೊಂದು ಪ್ರೇಮಿಗಳ ದಿನಾಚರಣೆಯ ದಿನ ಯಶ್ ರಾಧಿಕಾ ಪಂಡಿತ್ ಅವರಿಗೆ ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದಾಗ ಕೋರಮಂಗಲದ ಮಾಲ್ ನಲ್ಲಿ ಇದ್ದೇನೆ ಸಿನಿಮಾ ನೋಡಲು ಹೋಗುತ್ತಿದ್ದೇನೆ ಎನ್ನುತ್ತಾರೆ.

ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?

ಆ ಸಂದರ್ಭದಲ್ಲಿ ಯಶ್, ರಾಧಿಕಾ ಪಂಡಿತ್ ಅವರಿಗೆ ಇಷ್ಟವಾಗುವಂತಹ ಎಲ್ಲ ವಸ್ತುಗಳನ್ನು ಹಾಗೂ ಚಾಕಲೇಟ್, ಕೆಲವು ರೆಡಿಮೇಡ್ ಗಿಫ್ಟ್ಗಳನ್ನು ನೀಡಿ ಪ್ರಪೋಸ್ ಮಾಡಲು ಧೈರ್ಯ ಮಾಡಿ ತಮ್ಮ ಪ್ರೀತಿಯನ್ನು ಅವರ ಮುಂದೆ ಬಿಚ್ಚಿಡುತ್ತಾರೆ.

Actor Yash Family

ಆದರೆ ಅವರಲ್ಲಿ ಈ ಒಂದು ಮಾಹಿತಿಯನ್ನು ಹೇಳಿದರೆ ಎಲ್ಲಿ ತನ್ನ ಸ್ನೇಹವೂ ಕಳೆದುಹೋಗುತ್ತದೆ ಎಂಬ ಭಯವಿರುತ್ತದೆ. ಹೇಗೋ ಧೈರ್ಯ ಮಾಡಿ ತಮ್ಮ ಪ್ರೀತಿಯನ್ನು ಹೊರಹಾಕಿಬಿಟ್ಟರು. ಆದರೆ ರಾಧಿಕಾ ಪಂಡಿತ್ ಆ ದಿನ ಯಾವುದೇ ಉತ್ತರ ಕೊಡಲಿಲ್ಲ, ಇದರಿಂದ ಮನಸ್ಸಿಗೆ ಭಾರೀ ಬೇಸರ ಪಟ್ಟುಕೊಂಡು ಮನೆಗೆ ಹಿಂತಿರುಗಿದ ಯಶ್ ರವರಿಗೆ ಬರೋಬ್ಬರಿ ಆರು ತಿಂಗಳ ನಂತರ ಉತ್ತರ ದೊರಕುತ್ತದೆ.

ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು? ಆ ದುಡ್ಡನ್ನು ಅವರು ಏನು ಮಾಡಿದ್ರು ಗೊತ್ತಾ?

ಆನಂತರ ಫೋನಿನ ಮೂಲಕ ಯಶ್ ಅವರ ಪ್ರೀತಿಯನ್ನು ರಾಧಿಕಾ ಒಪ್ಪಿಕೊಳ್ಳುತ್ತಾರೆ. ಅಲ್ಲಿಂದ ಶುರುವಾದ ಇವರ ಲವ್ ಪಯಣ ಇಂದಿಗೂ ಅಷ್ಟೇ ಗಟ್ಟಿಯಾಗಿ ಹಾಗೂ ಮಧುರವಾಗಿದೆ.

ಐದು ವರ್ಷಗಳ ಕಾಲ ಡೇಟಿಂಗ್ ನಲ್ಲಿ ಇದ್ದಂತಹ ಈ ಜೋಡಿ 2016 ರಂದು ಮನೆಯವರೆಲ್ಲರ ಒಪ್ಪಿಗೆ ಪಡೆದು ಹಿರಿಯರ ಸಾಕ್ಷಿಯಾಗಿ ಸಿನಿಮಾ ರಂಗದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?

ಇಂದು ಐರಾ ಮತ್ತು ಯರ್ಥವ್ ಎಂಬ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸುಖ ಸಂಸಾರ ಜೀವನ ನಡೆಸುವ ಮೂಲಕ ಇತರರಿಗೆ ಆದರ್ಶವಾಗುವಂತೆ ಬದುಕಿ ತೋರಿಸಿದ್ದಾರೆ.

Rocking Star Yash and Actress Radhika Pandit Love Story

Follow us On

FaceBook Google News

Rocking Star Yash and Actress Radhika Pandit Love Story

Read More News Today