ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು? ಆ ದುಡ್ಡನ್ನು ಅವರು ಏನು ಮಾಡಿದ್ರು ಗೊತ್ತಾ?

ಪುನೀತ್ ರಾಜಕುಮಾರ್ ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ತಮ್ಮ ತಂದೆಯೊಂದಿಗೆ 'ಪ್ರೇಮದ ಕಾಣಿಕೆ' ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೇ ತಮ್ಮ ಬಾಲ್ಯವನ್ನು ಕಳೆದರು.

Bengaluru, Karnataka, India
Edited By: Satish Raj Goravigere

ಡಾಕ್ಟರ್ ರಾಜಕುಮಾರ್ (Dr Rajkumar Family) ಅವರ ಇಡೀ ಕುಟುಂಬವೇ ಕನ್ನಡ ಸಿನಿಮಾ ರಂಗದ (Kannada Film Industry) ಯಶಸ್ಸಿಗೆ ಮೈಲುಗಲ್ಲನ್ನು ಹಾಕಿದೆ ಎಂದರೆ ತಪ್ಪಾಗಲಾರದು. ಅಣ್ಣಾವ್ರು, ಪಾರ್ವತಮ್ಮ, ಪುನೀತ್ ರಾಜಕುಮಾರ್ (Puneeth Rajkumar), ಶಿವಣ್ಣ (Shiva Rajkumar), ರಾಘಣ್ಣ (Raghavendra Rajkumar) ಹಾಗೂ ಅವರ ಮಕ್ಕಳೆಲ್ಲರೂ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನಮ್ಮ ಚಂದನವನಕ್ಕಾಗಿ ನೀಡಿದ್ದಾರೆ.

ಅದರಲ್ಲೂ ಪುನೀತ್ ರಾಜಕುಮಾರ್ (Actor Puneeth Rajkumar) ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ತಮ್ಮ ತಂದೆಯೊಂದಿಗೆ ‘ಪ್ರೇಮದ ಕಾಣಿಕೆ’ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೇ ತಮ್ಮ ಬಾಲ್ಯವನ್ನು ಕಳೆದರು.

Kannada Actor Puneeth Rajkumar Earned Property and Social Services

ತಮ್ಮ ಬೊಕ್ಕ ತಲೆಯಿಂದಲೇ ಫೇಮಸ್ ಆದ ರಾಜ್ ಬಿ ಶೆಟ್ಟಿ ಅವರ ಬಗ್ಗೆ ನಿಮಗೆಷ್ಟು ಗೊತ್ತು?

‘ಬೆಟ್ಟದ ಹೂವು’ ಸಿನಿಮಾಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದ ಪುನೀತ್ ರಾಜಕುಮಾರ್ ವಿದ್ಯಾಭ್ಯಾಸ ಮುಗಿಸಿದ ನಂತರ 2002ರಲ್ಲಿ ರಕ್ಷಿತಾ ಪ್ರೇಮ್ ಅವರೊಂದಿಗೆ ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಅಪ್ಪು (Appu Cinema) ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು.

ಹೀಗೆ ಮೊದಲ ಸಿನಿಮಾದಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಂಡಂತಹ ಪುನೀತ್ ರಾಜಕುಮಾರ್ ಅವರಿಗೆ ಮತ್ತೆಂದು ಸೋಲು ಎದುರಿಸಬೇಕಾದಂತಹ ಪ್ರಸಂಗಗಳೇ ಎದುರಾಗಲಿಲ್ಲ.

ರವಿಚಂದ್ರನ್ ಅವರ ಸಣ್ಣ ತಪ್ಪಿನಿಂದ ದೊಡ್ಡ ಸಿನಿಮಾ ಆಫರ್ ಮಿಸ್ ಆಗಿತ್ತು! ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಹೌದು ಗೆಳೆಯರೇ ಒಂದರ ಮೇಲೊಂದರಂತೆ ಹಿಟ್ ಹಾಗೂ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕರ್ನಾಟಕದ ಪವರ್ ಸ್ಟಾರ್ ಎಂದೇ ಗುರುತಿಸಿಕೊಂಡಿದಂತಹ ಪುನೀತ್ ರಾಜಕುಮಾರ್ ಇಂದು ನಮ್ಮೊಂದಿಗಿಲ್ಲವಾದರೂ ಅವರ ಕುರಿತಾದಂತಹ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ದಿನೇ ದಿನೇ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ.

ಹೀಗಿರುವಾಗ ನಾವಿವತ್ತು ಪುನೀತ್ ರಾಜಕುಮಾರ್ ಅಭಿನಯದ ಮೊದಲ ಸಿನಿಮಾ ಅಪ್ಪು ಸಿನಿಮಾಗೆ ತಮ್ಮ ತಾಯಿಯ ಬಳಿ ಅವರು ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?

Puneeth Rajkumar Appu Cinema

ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ತಮ್ಮ ತಂದೆ ತಾಯಿಯ ಸಂಪೂರ್ಣ ಬೆಂಬಲವಿದ್ದರೂ ಕೂಡ ಪುನೀತ್ ರಾಜಕುಮಾರ್ ತಮ್ಮ ಸ್ವಂತ ಪ್ರತಿಭೆಯ ಮೂಲಕ ಸ್ಯಾಂಡಲ್ವುಡ್ ನಲ್ಲಿ (Sandalwood) ಗುರುತಿಸಿಕೊಂಡಂತಹ ನಟ ಎಂದರೆ ತಪ್ಪಾಗಲಾರದು.

ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು

ಚಿಕ್ಕಂದಿನಿಂದಲೂ ನಟನೆಯ ಮೇಲೆ ಅಗಾಧವಾದ ಆಸಕ್ತಿ ಬಳಸಿಕೊಂಡಿದಂತಹ ಅಪ್ಪುಗೆ ಸ್ಟಾರ್ ನಟನಾಗಬೇಕು ಎಂಬ ಆಸೆ ಇತ್ತಂತೆ ಹೀಗಾಗಿ ವಿದ್ಯಾಭ್ಯಾಸದತ್ತ ಹೆಚ್ಚಾಗಿ ಗಮನಹರಿಸದೆ ತಮ್ಮ ಒಲವನ್ನು ನಟನೆಯತ್ತ ತೋರಿ 2002ರಲ್ಲಿ ನಟಿ ರಕ್ಷಿತಾ ಅವರ ಜೋತೆ ಅಪ್ಪು ಎಂಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ನಾಯಕನಟನಾಗಿ ಎಂಟ್ರಿ ಕೊಟ್ಟರು.

Kannada Actor Puneeth Rajkumar

ಇನ್ನು ಈ ಒಂದು ಸಿನಿಮಾವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದರೆ ಸ್ವತಃ ತಾಯಿ ಪಾರ್ವತಮ್ಮನವರೇ ಮಗನ ಮೇಲಿನ ನಂಬಿಕೆಯಿಂದ ಹಣ ಹೂಡಿಕೆ ಮಾಡಿದರು. ಅದರಂತೆ ಅಪ್ಪು ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದುಕೊಂಡಿತ್ತು.

ಸಮಂತಾಗೆ ಗೊತ್ತಾಗದಂತೆ ಇನ್‌ಸ್ಟಾ ರೀಲ್ ಮಾಡಿದ ವಿಜಯ್ ದೇವರಕೊಂಡ.. ವಿಡಿಯೋ ವೈರಲ್!

ಪಾರ್ವತಮ್ಮನವರು ತನ್ನ ಮಗನ ಪರಿಶ್ರಮವನ್ನು ಹಾಡಿ ಹೊಗಳುವುದರ ಜೊತೆಗೆ ಆತನ ಕೆಲಸಕ್ಕೆ ತಕ್ಕ ಸಂಭಾವನೆಯನ್ನು (Remuneration) ನೀಡಿದರಂತೆ. ಹೌದು ಗೆಳೆಯರೇ 50,000 ಹಣವನ್ನು ಪಾರ್ವತಮ್ಮನವರು ಕೊಡಲು ಬಂದಾಗ ಅಪ್ಪು ತಮ್ಮ ಮೊದಲ ಸಂಭಾವನೆ ಮಾತೃ ದೇವತೆಗೆ ಎಂದು ಪಾರ್ವತಮ್ಮನವರಿಗೆ ಪ್ರೀತಿಯಿಂದ ಮರು ನೀಡಿದರಂತೆ.

Kannada Actor Puneeth Rajkumar Remuneration For Appu Cinema