ರವಿಚಂದ್ರನ್ ಅವರ ಸಣ್ಣ ತಪ್ಪಿನಿಂದ ದೊಡ್ಡ ಸಿನಿಮಾ ಆಫರ್ ಮಿಸ್ ಆಗಿತ್ತು! ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?
ರವಿಚಂದ್ರನ್ (Actor Ravichandran) ಮಾಡಬೇಕಿದ್ದಂತಹ ಸೂರ್ಯ ವಂಶ ಸಿನಿಮಾ (Surya Vamsha Movie) ಬೇರೆಯವರ ಪಾಲದುದ್ದಾದರೂ ಯಾಕೆ? ಆನಂತರ ಏನಾಯ್ತು ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
Crazy Star Ravichandran: ಸ್ನೇಹಿತರೆ, ಸಿನಿಮಾ ರಂಗದಲ್ಲಿ ಈ ರೀತಿಯಾದಂತಹ ಘಟನೆಗಳು ನಡೆಯುವುದು ಸರ್ವೇಸಾಮಾನ್ಯ. ಯಾವುದೋ ನಟ ಮಾಡಬೇಕಿದ್ದಂತಹ ಸಿನಿಮಾದಲ್ಲಿ ಮತ್ಯಾವುದೋ ನಟ ನಟಿಸಿ, ದೊಡ್ಡ ಇತಿಹಾಸವನ್ನೇ ಸೃಷ್ಟಿ ಮಾಡಿ ಬಿಡುತ್ತಾರೆ. ಅದರಂತೆ ಯಾರೋ ಮಾಡಬೇಕಿದ್ದ ನಿರ್ದೇಶನ ಅಥವಾ ನಿರ್ಮಾಣವನ್ನು ಮತ್ಯಾರೋ ಮಾಡಿ ಬಹುದೊಡ್ಡ ಯಶಸ್ಸನ್ನು ಸಂಪಾದಿಸಿಕೊಳ್ಳುತ್ತಾರೆ.
ಈ ಒಂದು ಘಟನೆಗೆ ಸಾಕ್ಷಿ ಎಂಬಂತೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿಯೂ (Kannada Cinema Industry) ಸಾಕಷ್ಟು ಉದಾಹರಣೆಗಳಿದ್ದು, ನಾವಿವತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ (Actor Ravichandran) ಮಾಡಬೇಕಿದ್ದಂತಹ ಸೂರ್ಯ ವಂಶ ಸಿನಿಮಾ (Surya Vamsha Movie) ಬೇರೆಯವರ ಪಾಲದುದ್ದಾದರೂ ಯಾಕೆ? ಆನಂತರ ಏನಾಯ್ತು ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಡಾಕ್ಟರ್ ವಿಷ್ಣುವರ್ಧನ್ (Actor Dr Vishnuvardhan) ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆದಂತಹ ಸೂರ್ಯವಂಶ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಮೊದಲಿಗೆ ರವಿಚಂದ್ರನ್ ವಹಿಸಬೇಕೆಂಬುದು ನಿರ್ಧಾರವಾಗಿರುತ್ತದೆ. ಆದರೆ ಸಿನಿಮಾದ ರೈಟ್ಸ್ ಅನ್ನು ತೆಗೆದುಕೊಳ್ಳಲು ರವಿಚಂದ್ರನ್ ಕೊಂಚ ತಡ ಮಾಡಿದ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಸೂರ್ಯ ವಂಶ ಸಿನಿಮಾದ ರೈಟ್ಸನ್ನು ಬಹಳ ಬೇಗ ಪಡೆದುಕೊಂಡು ಬಿಡುತ್ತಾರೆ.
ಆ ವೇಳೆ ಬಹುದೊಡ್ಡ ಮಟ್ಟದ ನಿರಾಸೆ ಉಂಟಾಗಿದ್ದು ಅಕ್ಷರಶಃ ಸತ್ಯ. ಅಲ್ಲದೆ ಕುಮಾರಸ್ವಾಮಿಯವರನ್ನು ಎಷ್ಟೇ ಕೇಳಿಕೊಂಡರು ಕೂಡ ಈ ಒಂದು ಅವಕಾಶ ರವಿಚಂದ್ರನ್ ಅವರಿಗೆ ವಾಪಸ್ ದೊರಕುವುದಿಲ್ಲ. ಹೀಗಾಗಿ ರವಿಚಂದ್ರನ್ ನಿರ್ಮಾಣ ಮಾಡಬೇಕಿದ್ದಂತಹ ಸೂರ್ಯವಂಶ ಸಿನಿಮಾವನ್ನು ಕುಮಾರಸ್ವಾಮಿ ನಿರ್ಮಿಸಿ ಬಹುದೊಡ್ಡ ಮಟ್ಟದ ಯಶಸ್ಸು ಕಾಣುತ್ತಾರೆ ಹಾಗೂ ತಮ್ಮ ಗಲ್ಲಾ ಪೆಟ್ಟಿಗೆಗೆ ಸಾಕಷ್ಟು ಹಣವನ್ನು ಬಾಚಿಕೊಂಡರು.
ಆಗಿನ ಕಾಲದಿಂದಲೂ ವಿಷ್ಣುವರ್ಧನ್ ಅವರೊಂದಿಗೆ ಅಗಾಧವಾದ ಬಾಂಧವ್ಯವನ್ನು ಹೊಂದಿದ್ದಂತಹ ರವಿಚಂದ್ರನ್ ಸದಾ ಕಾಲ ಅವರೊಟ್ಟಿಗೆ ಇರಲು ಹಾಗೂ ಅವರೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದರು.
ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?
ಅಷ್ಟೇ ಅಲ್ಲದೆ ವಿಷ್ಣುವರ್ಧನ್, ಜೂಲಿ ಲಕ್ಷ್ಮಿ, ವಿಜಯಲಕ್ಷ್ಮಿ, ರಮೇಶ್ ಭಟ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಬರೋಬರಿ ಹದಿನೈದು ದಿಗ್ಗಜ ನಟರುಗಳುಳ್ಳ ಈ ಒಂದು ಸಿನಿಮಾವನ್ನು ನಾನೇ ನಿರ್ಮಾಣ ಮಾಡಬೇಕೆಂದು ರವಿಚಂದ್ರನ್ ಬಹಳ ಆಸೆಯನ್ನು ಹೊಂದಿದ್ದರು.
ಆದರೆ ತಾವು ಮಾಡಿದ ಸಣ್ಣ ತಪ್ಪಿನಿಂದಾಗಿ ಬಹುದೊಡ್ಡ ನಿರಾಸೆಯನ್ನು ಅನುಭವಿಸಬೇಕಾಯಿತು. ಹೀಗೆ 2000 ದ ಇಸವಿಯಲ್ಲಿ ತೆರೆ ಕಂಡಂತಹ ಈ ಒಂದು ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತು.
ಎಲ್ಲ ಚಿತ್ರ ಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಯಿತು. ಬರೋಬ್ಬರಿ 23 ವರ್ಷಗಳಾದರೂ ಕೂಡ ಈ ಒಂದು ಸಿನಿಮಾದ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ.
ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿರುವ ಅನಂತನಾಗ್ ಅವರ ಮೊದಲ ಸಿನಿಮಾ ಯಾವುದು ಗೊತ್ತಾ?
ಜನರು ಟಿವಿಯಲ್ಲಿ ಈ ಸಿನಿಮಾ ವೇನಾದರೂ ಪ್ರಸಾರವಾದರೆ ಇನ್ನು ಅಷ್ಟೇ ಉತ್ಸುಕತೆಯಿಂದ ಚಿತ್ರ ನೋಡುವುದು ವಿಷ್ಣುವರ್ಧನ್ ಅಭಿನಯ ಅದೆಂತದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.
Crazy Star Ravichandran missed a big movie offer because of a small mistake