Jailer 2 Cinema: ರಜನಿಕಾಂತ್ ಜೊತೆ ‘ಜೈಲರ್ 2’ನಲ್ಲೂ ನಟಿಸಲಿದ್ದಾರೆ ಶಿವಣ್ಣ
Jailer 2 Cinema: ಶಿವರಾಜ್‌ಕುಮಾರ್ ‘ಜೈಲರ್ 2’ನಲ್ಲಿ ನಟಿಸುತ್ತಾರೆಂದು ಸ್ಪಷ್ಟಪಡಿಸಿದ್ದಾರೆ. ರಜನಿಕಾಂತ್ ಅವರ ಹಿನ್ನೆಲೆ ಸ್ಮರಿಸಿ, ಈ ಸಿನಿಮಾಗೆ ಧೃಡವಾದ ಕಾರಣಗಳು ಇದೆ ಎಂದು ತಿಳಿಸಿದರು. ಅಭಿಮಾನಿಗಳು ಈ ಅಪ್‌ಡೇಟ್‌ಗೆ ಖುಷಿಪಟ್ಟಿದ್ದಾರೆ.

- ಶಿವಣ್ಣ ‘ಜೈಲರ್ 2’ನಲ್ಲಿ ನಟಿಸೋದು ಕನ್ಫರ್ಮ್
- ರಜನಿಕಾಂತ್ ಕಾರಣದಿಂದ ಸಿನಿಮಾ ಒಪ್ಪಿದ ಶಿವಣ್ಣ
- ಶೂಟಿಂಗ್ ಆರಂಭವಾದರೂ ಶಿವಣ್ಣ ಭಾಗ ಇನ್ನೂ ಶುರು ಆಗಿಲ್ಲ
Jailer 2 Cinema: ಜೈಲರ್ 2’ನ ಭಾಗವಾಗುತ್ತಿರುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಖುದ್ದಾಗಿ ಸ್ಪಷ್ಟಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕ ನೆಲ್ಸನ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದ್ದು, ತಮ್ಮ ಪಾತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ ಎಂದು ತಿಳಿಸಿದರು.
ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಈ ಚಿತ್ರದಲ್ಲಿ ಮತ್ತೆ ಶಿವಣ್ಣನನ್ನು ನೋಡುವ ಅವಕಾಶ ಸಿಗಲಿದೆ ಎಂಬ ವಿಚಾರಕ್ಕೆ ಅವರ ಫ್ಯಾನ್ಸ್ Social Mediaದಲ್ಲಿ already ಫೆಸ್ಟಿವ್ ಮೋಡ್‌ಗೆ ಹೋಗಿದ್ದಾರೆ.
‘ಜೈಲರ್’ ಮೊದಲ ಭಾಗದಲ್ಲಿ ನನ್ನ ಪಾತ್ರಕ್ಕೆ ಇಷ್ಟೊಂದು ಮಹತ್ವ ಸಿಗುತ್ತೆ ಎಂದು ನಾನು ಊಹಿಸಿದ್ದೇ ಇಲ್ಲ. ಅದಕ್ಕೂ ಮುಖ್ಯವಾಗಿ ಈ ಚಿತ್ರ ಒಪ್ಪಿಕೊಳ್ಳಲು ರಜನಿಕಾಂತ್ ಸಾರ್ ಕಾರಣ. ಅವರು ನನ್ನ ಕುಟುಂಬದಷ್ಟೇ ಸಮಾನ. ಅವರೊಂದಿಗೇ ತೆರೆ ಹಂಚಿಕೊಳ್ಳುವ ಅವಕಾಶ ನನ್ನ ಕನಸಿನಂತಿತ್ತು ಎಂದರು.
ಈ ಸಂದರ್ಭದಲ್ಲಿ, ನಟ ಬಾಲಯ್ಯ ಅವರು ‘ಜೈಲರ್ 2’ನಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆಗೆ ಶಿವಣ್ಣ, “ನನಗೆ ಈ ಕುರಿತು ಮಾಹಿತಿ ಇಲ್ಲ. ಆದರೆ ಅವರು ಅಭಿನಯಿಸಿದರೆ, ಅವರ ಜೊತೆ ತೆರೆಯನ್ನು ಹಂಚಿಕೊಳ್ಳುವುದು ಖುಷಿಯ ಸಂಗತಿ,” ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಛಾಯಾಗ್ರಾಹಕರಿಗೆ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ಧನ್ಯವಾದ ತಿಳಿಸಿದ ಶಿವಣ್ಣ, “ಅವರು ನನ್ನ ಪಾತ್ರವನ್ನು ಬಹಳ ಚೆನ್ನಾಗಿ ಹೆಣೆಯುವಲ್ಲಿ ಸಹಕಾರಿಯಾಗಿದ್ದಾರೆ,” ಎಂದು ಬಿಂಬಿಸಿದರು.
Shiva Rajkumar Confirmed for Jailer 2 Cinema


