ಬಾಕ್ಸ್ ಆಫೀಸ್‌ನಲ್ಲಿ ಯಶ್ ಸಿನಿಮಾ ಅಬ್ಬರ! ಟಾಕ್ಸಿಕ್ ಗಳಿಕೆ ಎರಡನೇ ದಿನವೂ ಭರ್ಜರಿ

Toxic Movie Box Office Collection: ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದ್ದು, ಎರಡೇ ದಿನಗಳಲ್ಲಿ ವಿಶ್ವಾದ್ಯಂತ 190.75 ಕೋಟಿ ರೂಪಾಯಿ ಗಳಿಸಿದೆ.

  • ಟಾಕ್ಸಿಕ್ ಗಳಿಕೆ ಎರಡನೇ ದಿನವೂ ಭರ್ಜರಿ
  • ಯಶ್ ಸಿನಿಮಾ ಎರಡು ದಿನಗಳಲ್ಲಿ ₹190.75 ಕೋಟಿ ಗ್ರಾಸ್
  • ಹಿಂದಿ ಆವೃತ್ತಿ ಗಳಿಕೆಯಲ್ಲಿ ಮುಂಚೂಣಿಯಲ್ಲಿ

Toxic Movie Box Office Collection: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ (Toxic Movie) ಬಿಡುಗಡೆಯಾದ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ವೇಗವನ್ನು ಕಾಯ್ದುಕೊಂಡಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ.

ಬಿಡುಗಡೆಯ ಮೊದಲ ದಿನವೇ ಸುಮಾರು ₹150 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ, ಎರಡನೇ ದಿನ ಕೆಲಸದ ದಿನವಾಗಿದ್ದರೂ ಗಮನಾರ್ಹ ಮೊತ್ತವನ್ನು ಗಳಿಸಿದೆ. ಆಗಸ್ಟ್ 27ರಂದು ಭಾರತದಾದ್ಯಂತ 22,629 ಶೋಗಳ ಮೂಲಕ ₹36.40 ಕೋಟಿ ನೆಟ್ ಕಲೆಕ್ಷನ್ (Net Collection) ಮಾಡಿದೆ ಎಂದು ವರದಿಯಾಗಿದೆ.

ಎರಡನೇ ದಿನದ ದೇಶೀಯ ಗಳಿಕೆಯಲ್ಲಿ ಹಿಂದಿ ಆವೃತ್ತಿ (Hindi Version) ದೊಡ್ಡ ಕೊಡುಗೆ ನೀಡಿದೆ. ಹಿಂದಿಯಲ್ಲಿ ಸುಮಾರು ₹23 ಕೋಟಿ, ಕನ್ನಡದಲ್ಲಿ ₹8.50 ಕೋಟಿ, ತೆಲುಗಿನಲ್ಲಿ ₹3 ಕೋಟಿ, ತಮಿಳಿನಲ್ಲಿ ₹1.50 ಕೋಟಿ ಹಾಗೂ ಮಲಯಾಳಂನಲ್ಲಿ ₹40 ಲಕ್ಷ ಗಳಿಕೆಯಾಗಿದೆ ಎಂದು ತಿಳಿದುಬಂದಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಓಟ ಮುಂದುವರಿದಿದೆ. ಎರಡನೇ ದಿನವೇ ಸುಮಾರು ₹10 ಕೋಟಿ ಗಳಿಸಿರುವ ಸಿನಿಮಾ, ಒಟ್ಟು ಓವರ್‌ಸೀಸ್ ಗ್ರಾಸ್ (Overseas Gross) ಅನ್ನು ₹26.25 ಕೋಟಿಗೆ ಏರಿಸಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ ₹137.50 ಕೋಟಿ ತಲುಪಿದ್ದು, ದೇಶೀಯ ಗ್ರಾಸ್ ₹164.50 ಕೋಟಿ ಎಂದು ವರದಿಯಾಗಿದೆ.

ಎರಡನೇ ದಿನ ಕೆಲಸದ ದಿನವಾಗಿದ್ದರಿಂದ ಮೊದಲ ದಿನಕ್ಕೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬಂದಿದೆ. ಆದರೆ ವಾರಾಂತ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಮೂಡಿದೆ.

ಮಿಶ್ರ ಪ್ರತಿಕ್ರಿಯೆಯ ನಡುವೆಯೂ ‘ಟಾಕ್ಸಿಕ್’ಗೆ ಸಿಗುತ್ತಿರುವ ಪ್ರೇಕ್ಷಕರ ಬೆಂಬಲ ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ಈಗ ವಾರಾಂತ್ಯದ ಕಲೆಕ್ಷನ್ ಹೇಗಿರಲಿದೆ ಹಾಗೂ ಸಿನಿಮಾ ಯಾವ ಹೊಸ ದಾಖಲೆಗಳನ್ನು ನಿರ್ಮಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

English Summary

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories