Recharge Plan: ಬಿಎಸ್‌ಎನ್‌ಎಲ್ ಭರ್ಜರಿ ರೀಚಾರ್ಜ್ ಆಫರ್; ದಿನಕ್ಕೆ 7 ರೂಪಾಯಿಗೆ 2.6GB ಡೇಟಾ, ಅನ್ಲಿಮಿಟೆಡ್ ಕರೆ
Recharge Plan: ಕಡಿಮೆ ವೆಚ್ಚದಲ್ಲಿ ಹೆಚ್ಚು ಡೇಟಾ ಹಾಗೂ ವರ್ಷಪೂರ್ತಿ ಅನ್ಲಿಮಿಟೆಡ್ ಕರೆ ಬೇಕಾದವರಿಗೆ ಬಿಎಸ್‌ಎನ್‌ಎಲ್ ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ, ದಿನಕ್ಕೆ ಕೇವಲ ಏಳು ರೂಪಾಯಿಯಲ್ಲಿ ಡೇಟಾ, ಎಸ್‌ಎಂಎಸ್ ಮತ್ತು ವಾಯ್ಸ್ ಸೌಲಭ್ಯಗಳು ಸಿಗುತ್ತಿವೆ.

- ಕಡಿಮೆ ದರದ ಬಿಎಸ್‌ಎನ್‌ಎಲ್ ರೀಚಾರ್ಜ್ ಪ್ಲಾನ್
- ದಿನಕ್ಕೆ 2.6GB ಡೇಟಾ + ಅನ್ಲಿಮಿಟೆಡ್ ಕಾಲ್ಸ್
- 365 ದಿನಗಳ ವ್ಯಾಲಿಡಿಟಿ ಜೊತೆಗೆ 100 SMS ಸೌಲಭ್ಯ
BSNL Recharge Plan: ಮೊಬೈಲ್ ರೀಚಾರ್ಜ್ ದರಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಬಜೆಟ್ ಬಳಕೆದಾರರಿಗೆ ಬಿಎಸ್‌ಎನ್‌ಎಲ್ ಹೊಸ ಆಯ್ಕೆ ನೀಡಿದೆ. ಕೇವಲ ದಿನಕ್ಕೆ ₹7 ರೂಪಾಯಿ ಖರ್ಚಿನಲ್ಲಿ ಡೇಟಾ, ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ದೊರೆಯುವ ಪ್ಲಾನ್ ಬಿಡುಗಡೆ ಮಾಡಲಾಗಿದೆ. ವರ್ಷಪೂರ್ತಿ ಒಂದೇ ಬಾರಿ ರೀಚಾರ್ಜ್ ಮಾಡಿದರೆ ಮತ್ತೆ ಮತ್ತೆ ಪ್ಲಾನ್ ಮಾಡುವ ತಲೆಬಿಸಿ ಇರುವುದಿಲ್ಲ.
ಪ್ಲಾನ್ ವಿವರಗಳು
₹2626 ದರದ ಈ ವಾರ್ಷಿಕ ಪ್ಲಾನ್‌ನಲ್ಲಿ ಪ್ರತಿದಿನ 2.6GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ದೇಶದಾದ್ಯಂತ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಉಚಿತ. 365 ದಿನಗಳ ವ್ಯಾಲಿಡಿಟಿ ಇರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗ್ರಾಮೀಣ ಬಳಕೆದಾರರಿಗೆ ಇದು ಹೆಚ್ಚು ಅನುಕೂಲಕರ. ದಿನದ ಡೇಟಾ ಮಿತಿಯ ನಂತರ ಸ್ಪೀಡ್ 40Kbpsಗೆ ಇಳಿಯುತ್ತದೆ.
ಇನ್ನೊಂದು ಕಡಿಮೆ ದರದ ಆಯ್ಕೆ
ಇದೇ ವೇಳೆ ₹2399 ಪ್ಲಾನ್ ಕೂಡ ಲಭ್ಯವಿದ್ದು, ದಿನಕ್ಕೆ 2.5GB ಡೇಟಾ, ಅನ್ಲಿಮಿಟೆಡ್ ಕರೆ ಮತ್ತು 100 SMS ಸೌಲಭ್ಯ ನೀಡುತ್ತದೆ. ಸರಾಸರಿ ದಿನಕ್ಕೆ ₹6.5 ಮಾತ್ರ ವೆಚ್ಚವಾಗುತ್ತದೆ. ದೀರ್ಘಾವಧಿ ಬಳಕೆದಾರರಿಗೆ ಇದು ಮತ್ತೊಂದು ಉತ್ತಮ ಆಯ್ಕೆ ಎಂದು ಹೇಳಬಹುದು.
ಹೇಗೆ ರೀಚಾರ್ಜ್ ಮಾಡಬಹುದು?
ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಆಪ್, ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು. ವಿಶೇಷ ಆಫರ್ ಅವಧಿಯಲ್ಲಿ ಮಾಡಿದರೆ ಹೆಚ್ಚುವರಿ ಪ್ರಯೋಜನಗಳೂ ಸಿಗಬಹುದು. ಕಡಿಮೆ ದರದಲ್ಲಿ ಹೆಚ್ಚು ಡೇಟಾ ಹುಡುಕುತ್ತಿರುವವರಿಗೆ ಈ ಪ್ಲಾನ್ ಆಕರ್ಷಕ ಆಯ್ಕೆ.



