Flipkart: ರಿಪಬ್ಲಿಕ್ ಡೇ ಆಫರ್, ಫ್ಲಿಪ್ಕಾರ್ಟ್ ಭರ್ಜರಿ ಸೇಲ್! ಅರ್ಧ ಬೆಲೆಗೆ ಸ್ಮಾರ್ಟ್ಫೋನ್ಗಳು
Flipkart Republic Day Sale 2026: ರಿಪಬ್ಲಿಕ್ ಡೇ ಸಂಭ್ರಮಕ್ಕೆ ಫ್ಲಿಪ್ಕಾರ್ಟ್ ಭರ್ಜರಿ ಸೇಲ್ ಘೋಷಣೆ ಮಾಡಿದೆ. ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಬ್ಯಾಂಕ್ ಆಫರ್ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
- Flipkart Republic Day Sale 2026 ಜನವರಿ ಆರಂಭ
- Flipkart Sale ನಲ್ಲಿ ಫೋನ್, ಲ್ಯಾಪ್ಟಾಪ್ ಡಿಸ್ಕೌಂಟ್
- Republic Day Sale ವೇಳೆ ಬ್ಯಾಂಕ್ ಕಾರ್ಡ್, EMI ಆಫರ್
Flipkart Republic Day Sale 2026: ಆನ್ಲೈನ್ ಶಾಪಿಂಗ್ ದಿಗ್ಗಜ Flipkart ತನ್ನ ಬಹುನಿರೀಕ್ಷಿತ Republic Day Sale 2026 ಕುರಿತು ಅಧಿಕೃತ ಮಾಹಿತಿ ನೀಡಿದೆ. ಕಂಪನಿಯ ಪ್ರಕಾರ, ಈ ಸೇಲ್ ಜನವರಿ ಮೂರನೇ ವಾರದಲ್ಲಿ ಆರಂಭವಾಗಲಿದ್ದು, ಗ್ರಾಹಕರಿಗೆ ಭರ್ಜರಿ ಡೀಲ್ಗಳ ಮಳೆ ಸುರಿಯಲಿದೆ.
ಈ ಹಿನ್ನೆಲೆ, ಸೇಲ್ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡ ವಿಶೇಷ ಮೈಕ್ರೋಸೈಟ್ನ್ನೂ ಫ್ಲಿಪ್ಕಾರ್ಟ್ ಲೈವ್ ಮಾಡಿದೆ.
ಈ ಮೈಕ್ರೋಸೈಟ್ ಮೂಲಕ ಗ್ರಾಹಕರು ಮುಂಚಿತವಾಗಿಯೇ ಡಿಸ್ಕೌಂಟ್ಗಳು, ಬ್ಯಾಂಕ್ ಆಫರ್ಗಳು ಹಾಗೂ ಪ್ರಮುಖ ಡೀಲ್ಗಳ ಬಗ್ಗೆ ಮಾಹಿತಿ ಪಡೆಯಬಹುದು. ಹೊಸ ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಲಾಗುತ್ತಿದೆ.
ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಮುಂಚಿತ ಪ್ರವೇಶ
ಫ್ಲಿಪ್ಕಾರ್ಟ್ ಪ್ಲಸ್ ಮತ್ತು ಫ್ಲಿಪ್ಕಾರ್ಟ್ ಬ್ಲಾಕ್ ಸಬ್ಸ್ಕ್ರೈಬರ್ಗಳಿಗೆ ಈ ಬಾರಿ ವಿಶೇಷ ಲಾಭವಿದೆ. ಸಾಮಾನ್ಯ ಗ್ರಾಹಕರಿಗಿಂತ 24 ಗಂಟೆಗಳ ಮುಂಚಿತವಾಗಿ, ಅಂದರೆ ಜನವರಿ 16ರಿಂದಲೇ ಸೇಲ್ ಪ್ರವೇಶ ಸಿಗಲಿದೆ. ಎಲ್ಲರಿಗೂ ಅಧಿಕೃತವಾಗಿ ಸೇಲ್ ಜನವರಿ 17ರಿಂದ ಆರಂಭವಾಗಲಿದೆ.
ಭಾರತದ 77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಈ ಸೇಲ್, ಕಂಪನಿಯ ಅತ್ಯಂತ ದೊಡ್ಡ ವಾರ್ಷಿಕ ಈವೆಂಟ್ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ನಿನ್ನೆ ಇಳಿಕೆ, ಇಂದು ಏರಿಕೆ! ಬೆಂಗಳೂರು ಚಿನ್ನದ ಬೆಲೆ ಓಟ ಶುರು; ಚಿನ್ನ ಈಗ ಮತ್ತೆ ದುಬಾರಿ
ಯಾವ ಉತ್ಪನ್ನಗಳಿಗೆ ಹೆಚ್ಚು ರಿಯಾಯಿತಿ?
ಈ ರಿಪಬ್ಲಿಕ್ ಡೇ ಸೇಲ್ನಲ್ಲಿ
- ಸ್ಮಾರ್ಟ್ಫೋನ್ಗಳು
- ಲ್ಯಾಪ್ಟಾಪ್ಗಳು
- ಟ್ಯಾಬ್ಲೆಟ್, TWS ಇಯರ್ಬಡ್, ಬ್ಲೂಟೂತ್ ಸ್ಪೀಕರ್ಗಳು
- ಫ್ರಿಜ್, ವಾಷಿಂಗ್ ಮೆಷಿನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು
ಎಲ್ಲವೂ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಕೆಲವು ಆಯ್ದ ಸ್ಮಾರ್ಟ್ಫೋನ್ಗಳು (Smartphones) ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು 50% ವರೆಗೆ ಡಿಸ್ಕೌಂಟ್ನಲ್ಲಿ ಸಿಗುವ ಸಾಧ್ಯತೆಯಿದೆ.
ಬ್ಯಾಂಕ್ ಆಫರ್ಗಳು ಮತ್ತು EMI ಸೌಲಭ್ಯ
ಸೇಲ್ನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಬ್ಯಾಂಕ್ ಆಫರ್ಗಳು.
HDFC Bank Credit Card ಬಳಕೆದಾರರಿಗೆ 10% ತಕ್ಷಣದ ಡಿಸ್ಕೌಂಟ್ ಹಾಗೂ ಸುಲಭ EMI ಆಯ್ಕೆಗಳು ಲಭ್ಯವಾಗಲಿವೆ. ಇತರ ಆಯ್ದ ಬ್ಯಾಂಕ್ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಖರೀದಿಸಿದರೆ 15% ವರೆಗೆ ಇನ್ಸ್ಟಂಟ್ ಡಿಸ್ಕೌಂಟ್ ಸಿಗಲಿದೆ.



