Gmail ನಲ್ಲಿ ದೊಡ್ಡ ಬದಲಾವಣೆ: ಈಗ ನಿಮ್ಮ Email ID ಕೂಡ ಬದಲಿಸಬಹುದು! Google ಹೊಸ ಅಪ್‌ಡೇಟ್
ಜಿಮೇಲ್ ಬಳಕೆದಾರರಿಗೆ ಗೂಗಲ್ ಹೊಸ ಅವಕಾಶ ನೀಡಿದೆ. ಈಗ ಹಳೆಯ Gmail ID ಹೆಸರನ್ನು ಬದಲಿಸಿ ಹೊಸ ಹೆಸರಿನಿಂದ ಬಳಸಬಹುದು. ಹೊಸ ಖಾತೆ ತೆರೆಯುವ ಅಗತ್ಯವಿಲ್ಲದೆ ಸುಲಭವಾಗಿ ಅಪ್‌ಡೇಟ್ ಮಾಡಬಹುದು.

- Gmail ID ಬದಲಾವಣೆ ಈಗ ಗೂಗಲ್ ಮೂಲಕ ಸಾಧ್ಯ
- Gmail ಹೊಸ ಫೀಚರ್ ಮೂಲಕ Email ಬದಲಾವಣೆ
- Google Gmail ಬಳಕೆದಾರರಿಗೆ ಹೊಸ ಸೌಲಭ್ಯ
Gmail ID Change Feature: ಜಗತ್ತಿನಲ್ಲಿ ಹೆಚ್ಚು ಬಳಕೆಯಾಗುವ ಇಮೇಲ್ ಸೇವೆಗಳಲ್ಲೊಂದು ಜಿಮೇಲ್. ಈಗ ಈ ಸೇವೆಯಲ್ಲಿ ಗೂಗಲ್ ಪ್ರಮುಖ ಬದಲಾವಣೆ ತರಲು ಮುಂದಾಗಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ ಬಳಕೆದಾರರು ತಮ್ಮ ಹಳೆಯ Gmail ID ಅನ್ನು ಬದಲಿಸಿ ಹೊಸ ಹೆಸರಿನಿಂದ ಬಳಸುವ ಅವಕಾಶ ಪಡೆಯಲಿದ್ದಾರೆ.
ಬಹುತೇಕ ಜನರು ಹಲವು ವರ್ಷಗಳ ಹಿಂದೆ ಜಿಮೇಲ್ ಖಾತೆ ತೆರೆಯುವಾಗ ಅಂದು ತಮಗೆ ಇಷ್ಟವಾದ ಹೆಸರುಗಳನ್ನು ಬಳಸಿದ್ದರು. ಆದರೆ ಕಾಲಕ್ರಮೇಣ ಆ ಹೆಸರುಗಳು ವೃತ್ತಿಪರವಾಗಿ ಸೂಕ್ತವಾಗಿಲ್ಲವೆಂದು ಕೆಲವರಿಗೆ ಅನಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಈ ಹೊಸ ಆಯ್ಕೆಯನ್ನು ಪರಿಚಯಿಸಿದೆ.
ಹೊಸ ಖಾತೆ ತೆರೆಯುವ ಅಗತ್ಯವಿಲ್ಲ
ಈ ಹೊಸ ಫೀಚರ್ ಮೂಲಕ ಬಳಕೆದಾರರು ಮತ್ತೊಂದು ಹೊಸ ಜಿಮೇಲ್ ಖಾತೆ ತೆರೆಯಬೇಕಾದ ಅಗತ್ಯ ಇಲ್ಲ. ಈಗಿರುವ ಖಾತೆಯಲ್ಲೇ ಇಮೇಲ್ ಹೆಸರನ್ನು ಅಪ್‌ಡೇಟ್ ಮಾಡುವ ಅವಕಾಶ ದೊರೆಯಲಿದೆ.
ಉದಾಹರಣೆಗೆ, ಹಿಂದೆ coolboy2020@gmail.com ಎಂಬ ಇಮೇಲ್ ಐಡಿ ಬಳಸುತ್ತಿದ್ದವರು ಅದನ್ನು arjun.kumar@gmail.com ಅಥವಾ arjun.workmail@gmail.com ಎಂಬ ರೀತಿಯಲ್ಲಿ ಬದಲಿಸಿಕೊಳ್ಳಬಹುದು. ಇದು ಸಂಪೂರ್ಣವಾಗಿ ಗೂಗಲ್ ಖಾತೆ ಸೆಟ್ಟಿಂಗ್ಸ್ ಮೂಲಕ ಮಾಡಬಹುದಾಗಿದೆ.
ಹಳೆಯ Email ID ಇನ್ನೂ ಕಾರ್ಯನಿರ್ವಹಿಸುತ್ತದೆ
ಇಮೇಲ್ ಐಡಿ ಬದಲಿಸಿದ ನಂತರವೂ ಹಳೆಯ ಐಡಿ ಸಂಪೂರ್ಣವಾಗಿ ಅಳಿಸಲ್ಪಡುವುದಿಲ್ಲ. ಅದು ನಿಮ್ಮ ಖಾತೆಗೆ ಲಿಂಕ್ ಆಗಿಯೇ ಇರುತ್ತದೆ. ಅಂದರೆ ಹಳೆಯ ವಿಳಾಸಕ್ಕೆ ಯಾರಾದರೂ ಮೇಲ್ ಕಳುಹಿಸಿದರೂ ಅದು ನಿಮ್ಮ ಅದೇ ಇನ್‌ಬಾಕ್ಸ್‌ಗೆ ಬರುತ್ತದೆ.
ಇದಲ್ಲದೆ ಹಳೆಯ ಇಮೇಲ್ ವಿಳಾಸವನ್ನು ಮತ್ತೊಬ್ಬರು ಬಳಸಲು ಸಾಧ್ಯವಾಗುವುದಿಲ್ಲ. ಇದರ ಮೂಲಕ ಬಳಕೆದಾರರ ಖಾತೆ ಭದ್ರತೆ ಕೂಡ ಕಾಪಾಡಲಾಗುತ್ತದೆ.
AI Inbox ಫೀಚರ್ ಕೂಡ ಬರಲಿದೆ
ಇದಕ್ಕು ಜೊತೆಗೆ ಗೂಗಲ್ ಶೀಘ್ರದಲ್ಲೇ AI Inbox ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸಿದೆ. ಈ ವ್ಯವಸ್ಥೆ ಮುಖ್ಯವಾದ ಇಮೇಲ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ಮೇಲ್ಭಾಗದಲ್ಲಿ ತೋರಿಸುತ್ತದೆ.
ಉದಾಹರಣೆಗೆ ಬಿಲ್ ಪಾವತಿ ಸೂಚನೆಗಳು, ಪ್ರಯಾಣ ಬುಕ್ಕಿಂಗ್, ಬ್ಯಾಂಕ್ ಸಂದೇಶಗಳು ಇತ್ಯಾದಿ ಪ್ರಮುಖ ಮೇಲ್‌ಗಳನ್ನು ಪ್ರಮುಖವಾಗಿ ತೋರಿಸಲಾಗುತ್ತದೆ. ಗಡುವಿನ ದಿನಾಂಕಗಳಂತಹ ಮಾಹಿತಿಯನ್ನು ಸ್ಪಷ್ಟವಾಗಿ ಹೈಲೈಟ್ ಮಾಡುವ ಮೂಲಕ ಬಳಕೆದಾರರಿಗೆ ಸುಲಭವಾಗಿ ಗಮನಿಸಲು ಸಾಧ್ಯವಾಗುತ್ತದೆ.
ಒಂದೇ ಜಾಗದಲ್ಲಿ ಪ್ರಮುಖ ಮಾಹಿತಿ
AI Inbox ನಲ್ಲಿ “ತಪ್ಪದೇ ತಿಳಿಯಬೇಕಾದ ಮಾಹಿತಿ” ಎಂಬ ವಿಭಾಗವೂ ಇರಲಿದೆ. ಇದರಲ್ಲಿ ಪ್ರಯಾಣ ಟಿಕೆಟ್ ಬುಕ್ಕಿಂಗ್ (Flight Ticket Booking), ಹೋಟೆಲ್ ಅಥವಾ ರೆಸ್ಟೋರೆಂಟ್ ರಿಸರ್ವೇಶನ್ ಮುಂತಾದ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ತೋರಿಸಲಾಗುತ್ತದೆ.
ಈ ಫೀಚರ್ ಈಗ ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರಿಗೂ ಪರಿಚಯವಾಗುವ ಸಾಧ್ಯತೆ ಇದೆ.



