iPhone 16e: ಐಫೋನ್ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ, ಈ ಮಾಡೆಲ್‌ಗಳ ಬೆಲೆ ಭಾರೀ ಇಳಿಕೆ!
iPhone 16e Discount: ಹೊಸ ಐಫೋನ್ 17e ಬಿಡುಗಡೆ ಹಿನ್ನೆಲೆ 16e ಮಾದರಿಯ ಬೆಲೆ ಭಾರತದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ. ಬ್ಯಾಂಕ್ ಆಫರ್‌ಗಳೊಂದಿಗೆ 50 ಸಾವಿರೊಳಗೆ ಪ್ರೀಮಿಯಂ ಐಫೋನ್ ಖರೀದಿಸುವ ಅವಕಾಶ ದೊರಕಿದೆ.

- ಐಫೋನ್ 16e ಬೆಲೆ ಇಳಿಕೆ, 50 ಸಾವಿರದೋಳಗೆ ಲಭ್ಯ
- ಬ್ಯಾಂಕ್ ಆಫರ್‌ಗಳೊಂದಿಗೆ ಹೆಚ್ಚುವರಿ ರಿಯಾಯಿತಿ
- ಐಫೋನ್ 17e ಬಿಡುಗಡೆ ಬಳಿಕ ಬೆಲೆ ಬದಲಾವಣೆ
iPhone 16e Discount: ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿದ್ದವರಿಗೆ ಇದೀಗ ಸುವರ್ಣಾವಕಾಶ ಸಿಕ್ಕಂತಾಗಿದೆ. ಹೊಸ ಮಾದರಿ ಮಾರುಕಟ್ಟೆಗೆ ಬಂದ ನಂತರ ಹಳೆಯ ಮಾದರಿಗಳ ಬೆಲೆ ಇಳಿಯುವುದು ಸಾಮಾನ್ಯ. ಅದೇ ರೀತಿಯಾಗಿ ಹೊಸ ಐಫೋನ್ 17e ಬಿಡುಗಡೆಯಾದ ಹಿನ್ನೆಲೆಯಲ್ಲಿ 16e ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಪ್ರಾರಂಭದಲ್ಲಿ ಸುಮಾರು ರೂ.59,900 ದರ ಹೊಂದಿದ್ದ ಐಫೋನ್ 16e ಈಗ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಸುಮಾರು ರೂ.52,390 ಕ್ಕೆ ಲಭ್ಯವಿದೆ. ಇದಕ್ಕೆ ಬ್ಯಾಂಕ್ ಕಾರ್ಡ್ ಆಫರ್ ಸೇರಿಸಿದರೆ ಇನ್ನೂ ರೂ.3,500 ರಿಯಾಯಿತಿ ಸಿಗುತ್ತಿದ್ದು, ಅಂತಿಮ ಬೆಲೆ ರೂ.48,890 ರವರೆಗೆ ಇಳಿಯುತ್ತದೆ. ಎಕ್ಸ್‌ಚೇಂಜ್ ಆಫರ್ ಬಳಸಿದರೆ ಒಟ್ಟು ಲಾಭವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಐಫೋನ್ 16e ನಲ್ಲಿ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ, A18 ಚಿಪ್, 48MP ಮುಖ್ಯ ಕ್ಯಾಮೆರಾ ಹಾಗೂ 12MP ಸೆಲ್ಫಿ ಕ್ಯಾಮೆರಾ ಸೌಲಭ್ಯಗಳಿವೆ. IP68 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕತೆಯೂ ಇದೆ. 5G, Wi-Fi, ಬ್ಲೂಟೂತ್ ಹಾಗೂ USB-C ಚಾರ್ಜಿಂಗ್ ಸಪೋರ್ಟ್ ಸಹ ದೊರೆಯುತ್ತದೆ.
ಇನ್ನೊಂದೆಡೆ, ಹೊಸ ಐಫೋನ್ 17e ಹೆಚ್ಚು ಅಪ್‌ಗ್ರೇಡ್‌ಗಳೊಂದಿಗೆ ಬಂದಿದೆ. A19 ಚಿಪ್, 256GB ಸ್ಟೋರೇಜ್, 50MP ಕ್ಯಾಮೆರಾ ಹಾಗೂ MagSafe ಚಾರ್ಜಿಂಗ್ ಮೊದಲಾದ ವೈಶಿಷ್ಟ್ಯಗಳು ಇದರಲ್ಲಿ ಸೇರಿವೆ. ಹೆಚ್ಚು ಕಾಲ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಬಯಸುವವರು ಹೊಸ ಮಾದರಿಯತ್ತ ಮುಖ ಮಾಡಬಹುದು.
ಒಟ್ಟಿನಲ್ಲಿ, 50 ಸಾವಿರ ರೂಪಾಯಿ ಒಳಗೆ ಐಫೋನ್ ಅನುಭವ ಬಯಸುವವರಿಗೆ 16e ಉತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ತಂತ್ರಜ್ಞಾನ ಹಾಗೂ ದೀರ್ಘಾವಧಿ ಸಪೋರ್ಟ್ ಬಯಸುವವರು 17e ಕಡೆ ಗಮನಹರಿಸಬಹುದು.



