ಕೇವಲ 7,999ಕ್ಕೆ ಹೊಸ ಸ್ಮಾರ್ಟ್‌ಫೋನ್ ರಿಲೀಸ್! ಕಡಿಮೆ ಬೆಲೆಯಲ್ಲಿ ಬಲಿಷ್ಠ ಫೋನ್
ಕಡಿಮೆ ಬೆಲೆಯಲ್ಲಿ ಬಲಿಷ್ಠ ಸ್ಮಾರ್ಟ್‌ಫೋನ್ ಹುಡುಕುತ್ತಿರುವವರಿಗೆ itel A100C ಹೊಸ ಆಯ್ಕೆಯಾಗಿ ಬಂದಿದೆ. ಮಿಲಿಟರಿ ಗ್ರೇಡ್ ಸುರಕ್ಷತೆ, 5000mAh ಬ್ಯಾಟರಿ ಹಾಗೂ 90Hz ಡಿಸ್ಪ್ಲೇ ಫೋನ್‌ನ ಪ್ರಮುಖ ಆಕರ್ಷಣೆಗಳಾಗಿವೆ.

ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಇರುವ ಸ್ಮಾರ್ಟ್‌ಫೋನ್ ಬೇಕೆಂದು ಕಾಯುತ್ತಿದ್ದವರಿಗೆ itel ಕಂಪನಿ ಹೊಸ ಸರ್ಪ್ರೈಸ್ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ itel A100C ಎಂಬ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ಕಂಪನಿ, ಇದೀಗ ಗ್ರಾಹಕರ ಗಮನ ಸೆಳೆಯುತ್ತಿದೆ.
ಈ ಫೋನ್‌ನ ವಿಶೇಷತೆ ಎಂದರೆ ಮಿಲಿಟರಿ ಗ್ರೇಡ್ ಸ. ಸಾಮಾನ್ಯ ಬಳಕೆಯಲ್ಲಿ ಉಂಟಾಗುವ ಬಿದ್ದುಹೋಗುವುದು ಅಥವಾ ದೈನಂದಿನ ಒತ್ತಡವನ್ನು ಸಹಿಸಿಕೊಳ್ಳುವಂತೆ ಫೋನ್ ವಿನ್ಯಾಸ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ಬಲಿಷ್ಠ ಫೋನ್ ಬೇಕೆಂದಿರುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಬಹುದು.
ಬೆಲೆ ಮತ್ತು ಲಭ್ಯತೆ
itel A100C ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದೇ ವೇರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. 4GB RAM ಹಾಗೂ 64GB ಸ್ಟೋರೇಜ್ ಹೊಂದಿರುವ ಈ ಫೋನ್‌ನ ಬೆಲೆ ₹7,999 ಎಂದು ನಿಗದಿಯಾಗಿದೆ.
Silk Green, Titanium Gold ಮತ್ತು Pure Black ಬಣ್ಣಗಳಲ್ಲಿ ಫೋನ್ ಖರೀದಿಸಲು ಅವಕಾಶವಿದ್ದು, ದೇಶದ ವಿವಿಧ ರಿಟೇಲ್ ಅಂಗಡಿಗಳಲ್ಲಿ ಇದು ಲಭ್ಯವಾಗಲಿದೆ.
ಮಿಲಿಟರಿ ಗ್ರೇಡ್ ಫೋನ್ ವಿಶೇಷತೆ
ಈ ಫೋನ್‌ಗೆ MIL-STD-810H ಪ್ರಮಾಣಪತ್ರ ನೀಡಲಾಗಿದೆ. ಇದರಿಂದ ಫೋನ್ ಹೆಚ್ಚು ಬಲಿಷ್ಠವಾಗಿದ್ದು, ಸಾಮಾನ್ಯ ಬಳಕೆಯಲ್ಲಿ ಸಣ್ಣ ಮಟ್ಟದ ಹಾನಿಯಿಂದ ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.
ಕಡಿಮೆ ಬೆಲೆಯ ಫೋನ್ ವಿಭಾಗದಲ್ಲಿ ಈ ರೀತಿಯ ಸುರಕ್ಷತಾ ವೈಶಿಷ್ಟ್ಯ ಸಿಗುವುದು ಅಪರೂಪವಾಗಿದ್ದು, ಇದೇ ಕಾರಣಕ್ಕೆ itel A100C ಹೆಚ್ಚು ಗಮನ ಸೆಳೆಯುತ್ತಿದೆ.
ದೊಡ್ಡ ಡಿಸ್ಪ್ಲೇ ಮತ್ತು ಸ್ಮೂತ್ ಅನುಭವ
ಫೋನ್‌ನಲ್ಲಿ 6.6 ಇಂಚಿನ HD+ ಡಿಸ್ಪ್ಲೇ ನೀಡಲಾಗಿದೆ. 90Hz ರಿಫ್ರೆಶ್ ರೇಟ್ ಬೆಂಬಲ ಇರುವುದರಿಂದ ಸ್ಕ್ರೋಲಿಂಗ್ ಹಾಗೂ ವಿಡಿಯೋ ವೀಕ್ಷಣೆ ಇನ್ನಷ್ಟು ಸ್ಮೂತ್ ಅನುಭವ ನೀಡಲಿದೆ.
ಫೇಸ್ ಅನ್ಲಾಕ್ ಹಾಗೂ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮೂಲಕ ಸುರಕ್ಷತೆಯನ್ನೂ ಹೆಚ್ಚಿಸಲಾಗಿದೆ.
ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ
itel A100C ನಲ್ಲಿ Unisoc T7100 ಆಕ್ಟಾ-ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. Android 15 Go Edition ಮೇಲೆ ಕಾರ್ಯನಿರ್ವಹಿಸುವ ಈ ಫೋನ್ ದೈನಂದಿನ ಬಳಕೆಗೆ ಸೂಕ್ತ ಎನ್ನಲಾಗಿದೆ.
4GB RAM ಜೊತೆಗೆ ವರ್ಚುವಲ್ RAM ಬೆಂಬಲವೂ ಲಭ್ಯವಿದ್ದು, ಒಟ್ಟು 6GB ಅನುಭವ ನೀಡುತ್ತದೆ. 5000mAh ದೊಡ್ಡ ಬ್ಯಾಟರಿ ಒಂದು ದಿನದವರೆಗೆ ಸುಲಭವಾಗಿ ಬ್ಯಾಕಪ್ ನೀಡುವ ಸಾಧ್ಯತೆ ಇದೆ. ಜೊತೆಗೆ 10W ಚಾರ್ಜಿಂಗ್ ಸಪೋರ್ಟ್ ಕೂಡ ನೀಡಲಾಗಿದೆ.
ಕ್ಯಾಮೆರಾ ಮತ್ತು ಆಡಿಯೋ ಫೀಚರ್
ಫೋಟೋಗ್ರಫಿಗಾಗಿ 8MP ರಿಯರ್ ಕ್ಯಾಮೆರಾ ನೀಡಲಾಗಿದೆ. DTS ಸೌಂಡ್ ತಂತ್ರಜ್ಞಾನದಿಂದ ಆಡಿಯೋ ಅನುಭವವೂ ಉತ್ತಮವಾಗಲಿದೆ ಎಂದು ಕಂಪನಿ ಹೇಳಿದೆ.
Dynamic Bar ಫೀಚರ್ ಮೂಲಕ ಕಾಲ್, ಬ್ಯಾಟರಿ ಹಾಗೂ ನೋಟಿಫಿಕೇಶನ್ ಮಾಹಿತಿ ಸುಲಭವಾಗಿ ನೋಡಬಹುದಾಗಿದೆ.



