ಜಿಯೋದಿಂದ ಹೊಸ ರಿಚಾರ್ಜ್ ಪ್ಲಾನ್: 336 ದಿನಗಳ ದೀರ್ಘ ವ್ಯಾಲಿಡಿಟಿ! ಭರ್ಜರಿ ಬೆನಿಫಿಟ್

ರಿಲಯನ್ಸ್ ಜಿಯೋ ನೀಡಿರುವ ರೂ.1748 ಪ್ರೀಪೇಯ್ಡ್ ಪ್ಲಾನ್ 336 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, 3600 ಎಸ್‌ಎಂಎಸ್ ನೀಡುತ್ತದೆ; ಡೇಟಾ ಇಲ್ಲದಿದ್ದರೂ ಕಡಿಮೆ ವೆಚ್ಚದಲ್ಲಿ ದೀರ್ಘ ಅವಧಿ ಸಂಪರ್ಕ ಬಯಸುವವರಿಗೆ ಸೂಕ್ತ ಆಯ್ಕೆ.

  • ಜಿಯೋದಿಂದ ರೂ.1748 ರ ರಿಚಾರ್ಜ್ ಪ್ಲಾನ್
  • ಬರೋಬ್ಬರಿ 336 ದಿನಗಳ ವ್ಯಾಲಿಡಿಟಿ
  • ಅನಿಯಮಿತ ಕಾಲಿಂಗ್, 3600 ಎಸ್‌ಎಂಎಸ್

Jio Recharge Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ದರದಲ್ಲಿ ಹೆಚ್ಚು ವ್ಯಾಲಿಡಿಟಿ ನೀಡುವ ಪ್ರೀಪೇಯ್ಡ್ ಪ್ಲಾನ್‌ಗಳನ್ನು (Prepaid Plans) ಮುಂದುವರೆಸುತ್ತಿದ್ದು, ರೂ.1748 ರೀಚಾರ್ಜ್ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಒಂದು ಬಾರಿ ರೀಚಾರ್ಜ್ ಮಾಡಿದರೆ ಸುಮಾರು ಒಂದು ವರ್ಷಕ್ಕೆ ಸಮಾನವಾದ 336 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ.

ಈ ಪ್ಲಾನ್ ವಿಶೇಷವಾಗಿ ಡೇಟಾ ಬಳಕೆ ಕಡಿಮೆ ಇರುವವರಿಗೆ ಉಪಯುಕ್ತವಾಗಿದೆ. ಮನೆಯಲ್ಲಿ ವೈ-ಫೈ ಇರುವ ಕುಟುಂಬಗಳು, ಪೋಷಕರು ಅಥವಾ ಹಿರಿಯ ನಾಗರಿಕರಿಗಾಗಿ ಈ ಪ್ಲಾನ್ ಆಯ್ಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಪ್ಲಾನ್ ಸೌಲಭ್ಯಗಳು ಏನು?

ರೂ.1748 ಜಿಯೋ ಪ್ಲಾನ್‌ನಲ್ಲಿ ಎಲ್ಲಾ ನೆಟ್ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ನೀಡಲಾಗಿದೆ. ಜೊತೆಗೆ ಒಟ್ಟು 3600 ಎಸ್‌ಎಂಎಸ್‌ಗಳ ಸೌಲಭ್ಯವೂ ಇದೆ. ಆದರೆ ಈ ಪ್ಲಾನ್‌ನಲ್ಲಿ ಮೊಬೈಲ್ ಡೇಟಾ ಸೇರಿಲ್ಲ.

ಡೇಟಾ ಅಗತ್ಯವಿದ್ದರೆ ಬಳಕೆದಾರರು ಬೇರೆ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಗೆ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ಗಳಿಗೆ ಉಚಿತ ಪ್ರವೇಶ ಸೇರಿದಂತೆ ಕೆಲವು ಹೆಚ್ಚುವರಿ ಡಿಜಿಟಲ್ ಪ್ರಯೋಜನಗಳೂ ಲಭ್ಯವಿವೆ.

ಏರ್‌ಟೆಲ್ ಪ್ಲಾನ್ ಜೊತೆ ಹೋಲಿಕೆ

ಇದೇ ಮಾದರಿಯ ಕಾಲಿಂಗ್-ಓನ್ಲಿ ಪ್ಲಾನ್ ಎಯರ್‌ಟೆಲ್‌ನಲ್ಲೂ (Airtel Recharge Plan) ಲಭ್ಯವಿದ್ದು, ಅದರ ಬೆಲೆ ರೂ.1849 ಆಗಿದೆ. ಈ ಪ್ಲಾನ್‌ನಲ್ಲಿ 365 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಅನಿಯಮಿತ ಕಾಲಿಂಗ್ ಮತ್ತು 3600 ಎಸ್‌ಎಂಎಸ್ ಜೊತೆಗೆ, ಸ್ಪ್ಯಾಮ್ ಅಲರ್ಟ್, ಉಚಿತ ಹಲೋಟ್ಯೂನ್ ಮತ್ತು ಕೆಲವು ಎಐ ಆಧಾರಿತ ಸೌಲಭ್ಯಗಳು ಸೇರಿವೆ.

ಆದರೆ ಕಡಿಮೆ ವೆಚ್ಚದಲ್ಲಿ ದೀರ್ಘ ಅವಧಿಯ ಸಂಪರ್ಕ ಬೇಕಾದವರಿಗೆ ಜಿಯೋ ರೂ.1748 ಪ್ಲಾನ್ ಹೆಚ್ಚು ಆಕರ್ಷಕ ಆಯ್ಕೆಯಾಗಿ ಕಾಣುತ್ತಿದೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories