Jio Plan: ಒಂದೇ ರಿಚಾರ್ಜ್ ಪ್ಲಾನ್ನಲ್ಲಿ 4 ಸಿಮ್ಗಳು ಆಕ್ಟಿವ್! ಜಿಯೋದಿಂದ ಬಂಪರ್ ಬೆನಿಫಿಟ್
Jio Recharge Plan: ಜಿಯೋ ₹749 ಪೋಸ್ಟ್ಪೇಯ್ಡ್ ಫ್ಯಾಮಿಲಿ ಪ್ಲಾನ್ ಮೂಲಕ ಒಂದೇ ಬಿಲ್ಲಿನಲ್ಲಿ ನಾಲ್ಕು ಸಿಮ್ಗಳನ್ನು ಆಕ್ಟಿವ್ ಮಾಡಬಹುದು. ಅನ್ಲಿಮಿಟೆಡ್ ಕಾಲ್ಸ್, ಭಾರೀ ಡೇಟಾ, OTT ಸಬ್ಸ್ಕ್ರಿಪ್ಷನ್ ಸೇರಿದಂತೆ ಹಲವು ಡಿಜಿಟಲ್ ಸೌಲಭ್ಯಗಳು ಲಭ್ಯ.

- ಅನ್ಲಿಮಿಟೆಡ್ ಕಾಲಿಂಗ್ ಮತ್ತು 100GB ಡೇಟಾ ಸೌಲಭ್ಯ
- Netflix, Amazon Prime, Jio OTT ಬೆನಿಫಿಟ್ಸ್ ಉಚಿತ
- Jio ಪ್ಲಾನ್ ಮೂಲಕ 4 ಸಿಮ್ಗಳು ಒಂದೇ ಖಾತೆಯಲ್ಲಿ
Jio Recharge Plan: ಜಿಯೋ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಖರ್ಚು ಕಡಿಮೆ ಮಾಡುವ ಹಾಗೂ ಕುಟುಂಬದ ಎಲ್ಲರಿಗೂ ಒಂದೇ ಪ್ಲಾನ್ನಲ್ಲಿ ಸಂಪರ್ಕ ನೀಡುವ ಅವಕಾಶ ಸಿಕ್ಕಿದೆ. ₹749 ಪೋಸ್ಟ್ಪೇಯ್ಡ್ ಫ್ಯಾಮಿಲಿ ಪ್ಲಾನ್ ಮೂಲಕ ಪ್ರಾಥಮಿಕ ಸಿಮ್ ಜೊತೆಗೆ ಮೂವರು ಕುಟುಂಬ ಸದಸ್ಯರ ಸಿಮ್ಗಳನ್ನು ಒಂದೇ ಬಿಲ್ಲಿನಲ್ಲಿ ಆಕ್ಟಿವ್ ಮಾಡಬಹುದು.
749 ಪ್ಲಾನ್ನಲ್ಲಿ ಏನು ವಿಶೇಷ?
ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟಾರೆ ನಾಲ್ಕು ಸಿಮ್ಗಳನ್ನು ಬಳಸಲು ಅವಕಾಶ ನೀಡುತ್ತದೆ. ಪ್ರಾಥಮಿಕ ಸಿಮ್ ಹೆಚ್ಚು ಡೇಟಾ ಪ್ರಯೋಜನ ಪಡೆಯುತ್ತದೆ. ಹೆಚ್ಚುವರಿ ಮೂರು ಸಿಮ್ಗಳಿಗೆ ಪ್ರತಿ ಸಿಮ್ಗೆ ತಿಂಗಳಿಗೆ ₹150 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಕಾಲಿಂಗ್ ಮತ್ತು ಡೇಟಾ ಸೌಲಭ್ಯ
ಈ ಜಿಯೋ ಪೋಸ್ಟ್ಪೇಯ್ಡ್ ಪ್ಲಾನ್ನಲ್ಲಿ ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕಾಲಿಂಗ್ ಸಿಗುತ್ತದೆ. ಜೊತೆಗೆ ತಿಂಗಳಿಗೆ ಒಟ್ಟು 100GB ಡೇಟಾ ಲಭ್ಯ. ಹೆಚ್ಚುವರಿ ಸದಸ್ಯರಿಗೆ ಪ್ರತಿ ಸಿಮ್ಗೆ 5GB ಡೇಟಾ ನೀಡಲಾಗುತ್ತದೆ. ನಿಗದಿತ ಮಿತಿಯನ್ನು ಮೀರಿದರೆ ಪ್ರತೀ GBಗೆ ₹10 ಶುಲ್ಕ ವಿಧಿಸಲಾಗುತ್ತದೆ. ದಿನಕ್ಕೆ 100 ಉಚಿತ SMS ಕೂಡ ಸೇರಿದೆ.
ಉಚಿತ OTT ಸಬ್ಸ್ಕ್ರಿಪ್ಷನ್ಗಳು
ಡೇಟಾ ಮತ್ತು ಕಾಲಿಂಗ್ ಜೊತೆಗೆ ಈ ಪ್ಲಾನ್ನಲ್ಲಿ ಮನರಂಜನೆಯೂ ಇದೆ. ಗ್ರಾಹಕರಿಗೆ Netflix ಹಾಗೂ Amazon Prime Lite ಉಚಿತ ಸಬ್ಸ್ಕ್ರಿಪ್ಷನ್ ಸಿಗುತ್ತದೆ. Amazon Prime ಸೌಲಭ್ಯ ಎರಡು ವರ್ಷಗಳ ಕಾಲ ಮಾನ್ಯ. ಜೊತೆಗೆ ಮೂರು ತಿಂಗಳು JioTV ಮತ್ತು Jio Hotstar ಮೊಬೈಲ್ ಟಿವಿ ಪ್ರವೇಶವೂ ಲಭ್ಯ.
ಹೆಚ್ಚುವರಿ ಡಿಜಿಟಲ್ ಪ್ರಯೋಜನಗಳು
ಈ ಪ್ಲಾನ್ ಮೂಲಕ 50GB ಉಚಿತ JioAiCloud ಸ್ಟೋರೇಜ್ ಸಿಗುತ್ತದೆ. ಜೊತೆಗೆ ಎರಡು ತಿಂಗಳು Jio Home ಉಚಿತ ಟ್ರಯಲ್ ಸಂಪರ್ಕ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ 18 ತಿಂಗಳು Gemini AI Pro ಸದಸ್ಯತ್ವವೂ ಸೇರಿಸಲಾಗಿದೆ.



