18 ತಿಂಗಳವರೆಗೆ ಉಚಿತ! ಜಿಯೋ ಬಳಕೆದಾರರಿಗೆ ಅದ್ಭುತ ರೀಚಾರ್ಜ್ ಪ್ಲಾನ್
Jio Recharge Plan: ರಿಲಯನ್ಸ್ ಜಿಯೋ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಪರಿಚಯಿಸಿದೆ. ಕಡಿಮೆ ದರದ ರೀಚಾರ್ಜ್‌ನಲ್ಲಿ ಡೇಟಾ, ಅನ್ಲಿಮಿಟೆಡ್ ಕಾಲಿಂಗ್ ಜೊತೆಗೆ 18 ತಿಂಗಳು ಗೂಗಲ್ ಜೆಮಿನಿ ಪ್ರೋ ಉಚಿತ ಸಬ್ಸ್ಕ್ರಿಪ್ಷನ್ ನೀಡುತ್ತಿರುವುದು ವಿಶೇಷವಾಗಿದೆ.

Jio Recharge Plan: ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹಾಗೂ ಆಕರ್ಷಕ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ಬಳಕೆದಾರರನ್ನು ಸೆಳೆಯಲು ಕಂಪನಿ ಪ್ರಯತ್ನಿಸುತ್ತಿದೆ.
ಈ ಹೊಸ ಪ್ಲಾನ್ ದರ ₹889 ಆಗಿದ್ದು, ಇದರಲ್ಲಿ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಈ ರೀತಿಯಾಗಿ 84 ದಿನಗಳಲ್ಲಿ ಒಟ್ಟು ಸುಮಾರು 126GB ಡೇಟಾ ಬಳಕೆ ಮಾಡಲು ಅವಕಾಶ ದೊರೆಯುತ್ತದೆ.
ಡೇಟಾ ಸೌಲಭ್ಯದ ಜೊತೆಗೆ ಈ ಪ್ಲಾನ್‌ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯವೂ ಇದೆ. ಯಾವುದೇ ನೆಟ್‌ವರ್ಕ್‌ಗೆ ನಿರ್ಬಂಧವಿಲ್ಲದೆ ಉಚಿತವಾಗಿ ಕರೆ ಮಾಡಬಹುದು. ಇದಲ್ಲದೆ ಪ್ರತಿದಿನ 100 ಉಚಿತ SMSಗಳನ್ನು ಕಳುಹಿಸುವ ಸೌಲಭ್ಯ ಕೂಡ ಗ್ರಾಹಕರಿಗೆ ಲಭ್ಯ.
ಈ ಪ್ಲಾನ್‌ನ ಪ್ರಮುಖ ಆಕರ್ಷಣೆಯೇ 18 ತಿಂಗಳ ಗೂಗಲ್ ಜೆಮಿನಿ ಪ್ರೋ ಸಬ್ಸ್ಕ್ರಿಪ್ಷನ್ ಉಚಿತವಾಗಿ ದೊರೆಯುವುದು. ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಸೇವೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಈ ಸಬ್ಸ್ಕ್ರಿಪ್ಷನ್ ಬಳಕೆದಾರರಿಗೆ ಹೆಚ್ಚುವರಿ ಡಿಜಿಟಲ್ ಅನುಭವವನ್ನು ನೀಡಲಿದೆ.
ಇದಕ್ಕುಮೇಲೆ, ಜಿಯೋ ಗ್ರಾಹಕರು ಜಿಯೋ ಟಿವಿ ಸೇರಿದಂತೆ ಕೆಲವು ಡಿಜಿಟಲ್ ಸೇವೆಗಳ ಪ್ರಯೋಜನವನ್ನು ಕೂಡ ಪಡೆಯಬಹುದು. ಜೊತೆಗೆ ಕೆಲ ಪ್ಲಾನ್‌ಗಳಲ್ಲಿ ಮೂರು ತಿಂಗಳು ಜಿಯೋ ಹಾಟ್‌ಸ್ಟಾರ್ ಸೌಲಭ್ಯವೂ ಲಭ್ಯವಾಗುವ ಸಾಧ್ಯತೆ ಇದೆ ಎಂದು ಕಂಪನಿ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಜಿಯೋ ಪ್ಲಾನ್ ಉತ್ತಮ ಆಯ್ಕೆಯಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.



