ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್; 15 OTT, 365GB ಡೇಟಾ ಜೊತೆಗೆ 1000+ ಚಾನೆಲ್‌ಗಳು!
Jio OTT Pass: ಜಿಯೋ ತನ್ನ ಒಟಿಟಿ ಪಾಸ್‌ಗಳ ಆಯ್ಕೆಯನ್ನು ವಿಸ್ತರಿಸಿದ್ದು, 15 ಪ್ರೀಮಿಯಂ ಒಟಿಟಿ ಆ್ಯಪ್‌ಗಳು, 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಮತ್ತು ಹೆಚ್ಚುವರಿ ಡೇಟಾ ಸೌಲಭ್ಯ ನೀಡುತ್ತಿದೆ.

- 15 ಪ್ರೀಮಿಯಂ ಒಟಿಟಿ ಆ್ಯಪ್‌ಗಳ ಸೌಲಭ್ಯ
- 84 ದಿನಗಳ ವ್ಯಾಲಿಡಿಟಿಯೊಂದಿಗೆ 90GB ಡೇಟಾ
- ಒಂದು ವರ್ಷದ ವ್ಯಾಲಿಡಿಟಿ, 365GB ಡೇಟಾ
ಜಿಯೋ ಗ್ರಾಹಕರಿಗೆ ಹೊಸ ಆಯ್ಕೆ
Jio OTT Pass: ರಿಲಯನ್ಸ್ ಜಿಯೋ ತನ್ನ ಜನಪ್ರಿಯ ಜಿಯೋ OTT ಪಾಸ್ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದ್ದು, ಮೂರು ತಿಂಗಳು ಮತ್ತು ಒಂದು ವರ್ಷದ ವ್ಯಾಲಿಡಿಟಿಯ ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಹೆಚ್ಚು ಕಾಲದ ವ್ಯಾಲಿಡಿಟಿಯ ಜತೆಗೆ ಡೇಟಾ ಹಾಗೂ ಪ್ರೀಮಿಯಂ ಮನರಂಜನಾ ಸೇವೆಗಳನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಲು ಗ್ರಾಹಕರಿಗೆ ಈ ಪ್ಲಾನ್‌ಗಳು ಅವಕಾಶ ನೀಡುತ್ತವೆ.
ಹೊಸ ಪ್ಲಾನ್‌ಗಳಲ್ಲಿ ₹550 ಮತ್ತು ₹2,000ರ ಆಯ್ಕೆಗಳು ಪ್ರಮುಖವಾಗಿವೆ. ₹550ರ OTT ಪಾಸ್ 84 ದಿನಗಳ ವ್ಯಾಲಿಡಿಟಿಯೊಂದಿಗೆ 90GB ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G ಸೌಲಭ್ಯ ನೀಡುತ್ತದೆ. 3 ತಿಂಗಳು ಅಥವಾ ಒಂದು ವರ್ಷದ ಬೇಸ್ ಪ್ಲಾನ್ ಹೊಂದಿರುವ ಜಿಯೋ ಗ್ರಾಹಕರು ಇದನ್ನು ಬಳಸಬಹುದು.
ಇನ್ನು ₹2,000ರ OTT ಪಾಸ್ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲಾನ್‌ನಲ್ಲಿ ಒಟ್ಟು 365GB ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G ಸೌಲಭ್ಯವಿದೆ. ಒಂದು ವರ್ಷದ ಬೇಸ್ ಪ್ಲಾನ್ ಹೊಂದಿರುವ ಗ್ರಾಹಕರಿಗೆ ಈ ಪಾಸ್ ಲಭ್ಯವಿದೆ.
₹200ರ ಪಾಸ್‌ನಲ್ಲೂ OTT ಸೌಲಭ್ಯ
ಜಿಯೋ ಈಗಾಗಲೇ ನೀಡುತ್ತಿರುವ ₹200ರ OTT ಪಾಸ್ ಕೂಡ ಗ್ರಾಹಕರಿಗೆ ಮತ್ತೊಂದು ಆಯ್ಕೆಯಾಗಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪಾಸ್‌ನಲ್ಲಿ 30GB ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G ಸೌಲಭ್ಯ ಸಿಗುತ್ತದೆ. ಸಕ್ರಿಯ ಬೇಸ್ ಪ್ಲಾನ್ ಹೊಂದಿರುವ ಗ್ರಾಹಕರು ಇದನ್ನು ಬಳಸಬಹುದಾಗಿದೆ. ವಾಯ್ಸ್ ಪ್ಯಾಕ್‌ಗಳಿಗೆ ಈ ಆಯ್ಕೆ ಅನ್ವಯಿಸುವುದಿಲ್ಲ.
15 ಪ್ರೀಮಿಯಂ OTT ಆ್ಯಪ್‌ಗಳ ಪ್ಯಾಕೇಜ್
ಜಿಯೋ OTT ಪಾಸ್‌ನ ಪ್ರಮುಖ ಆಕರ್ಷಣೆ ಎಂದರೆ ಒಂದೇ ಪ್ಯಾಕೇಜ್‌ನಲ್ಲಿ ಹಲವು ಮನರಂಜನಾ ಸೇವೆಗಳನ್ನು ಪಡೆಯುವ ಅವಕಾಶ. ಪ್ರತಿ ಪಾಸ್ ಮೂಲಕ ತಿಂಗಳಿಗೆ ಸುಮಾರು ₹1,500 ಮೌಲ್ಯದ ಮನರಂಜನಾ ಪ್ರಯೋಜನಗಳು ದೊರೆಯುತ್ತವೆ ಎಂದು ಜಿಯೋ ತಿಳಿಸಿದೆ.
ಇದರಲ್ಲಿ ಜಿಯೋಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಒಟ್ಟು 15 ಪ್ರೀಮಿಯಂ OTT ಸೇವೆಗಳು ಸೇರಿವೆ. ₹550 ಮತ್ತು ₹2,000ರ ಪಾಸ್‌ಗಳಲ್ಲಿ ಅಮೆಜಾನ್ ಪ್ರೈಮ್ ಲೈಟ್ ಹಾಗೂ ₹200ರ ಪಾಸ್‌ನಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಲಭ್ಯವಿದೆ.
ಸೋನಿ ಲಿವ್, ಜೀ5, ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ+, ಸನ್ ನೆಕ್ಸ್ಟ್, ಫ್ಯಾನ್‌ಕೋಡ್, ಹೋಯ್‌ಚೋಯ್, ಚೌಪಾಲ್, ಪ್ಲಾನೆಟ್ ಮರಾಠಿ, ಕಂಚಾ ಲಂಕಾ, ಟೈಮ್ಸ್ ಪ್ಲೇ ಮತ್ತು ತರಂಗ್ ಪ್ಲಸ್ ಸೇರಿದಂತೆ ಹಲವು OTT ಸೇವೆಗಳನ್ನು ಜಿಯೋ ನೀಡುತ್ತಿದೆ.
1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು
OTT ಮಾತ್ರವಲ್ಲದೆ ಜಿಯೋ ಟಿವಿ ಮೂಲಕ 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸುವ ಅವಕಾಶವೂ ಇದೆ. ಸ್ಟಾರ್ ಪ್ಲಸ್ HD, ಕಲರ್ಸ್ HD, SET HD, ಸನ್ ಟಿವಿ HD, ಡಿಸ್ಕವರಿ ಮತ್ತು ಕಾರ್ಟೂನ್ ನೆಟ್‌ವರ್ಕ್ ಸೇರಿದಂತೆ ಹಲವು ಜನಪ್ರಿಯ ಚಾನೆಲ್‌ಗಳು ಈ ಪ್ಯಾಕೇಜ್‌ನಲ್ಲಿ ಲಭ್ಯವಿವೆ.
ಅದೇ ರೀತಿ ಯೂಟ್ಯೂಬ್ ಪ್ರೀಮಿಯಂ ಸೌಲಭ್ಯದಲ್ಲಿ ಜಾಹೀರಾತು ರಹಿತ ವೀಕ್ಷಣೆ, ಬ್ಯಾಕ್‌ಗ್ರೌಂಡ್ ಪ್ಲೇ ಮತ್ತು ಆಫ್‌ಲೈನ್ ಡೌನ್‌ಲೋಡ್‌ನಂತಹ ಆಯ್ಕೆಗಳೂ ಸಿಗುತ್ತವೆ.
ಹೊಸದಾಗಿ ಪರಿಚಯಿಸಿರುವ ₹550 ಮತ್ತು ₹2,000ರ ಜಿಯೋ OTT ಪಾಸ್‌ಗಳನ್ನು ಗ್ರಾಹಕರು MyJio ಆ್ಯಪ್, ಅಧಿಕೃತ ಜಿಯೋ ವೆಬ್‌ಸೈಟ್ ಮತ್ತು ಜಿಯೋ ರೀಟೈಲ್ ಮಳಿಗೆಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.



