ಬೇಸಿಗೆಯಲ್ಲಿ ಫೋನ್ ಓವರ್‌ಹೀಟ್ ಸಮಸ್ಯೆ! ಚಾರ್ಜಿಂಗ್ ವೇಳೆ ಈ ತಪ್ಪುಗಳು ಅಪಾಯಕಾರಿ

ತೀವ್ರ ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ನಿಧಾನವಾಗಿ ಚಾರ್ಜ್ ಆಗುವುದು ಅಥವಾ ಹೀಟ್ ಆಗುವುದು ಸಾಮಾನ್ಯ. ಆದರೆ ಕೆಲವು ಸಣ್ಣ ತಪ್ಪುಗಳು ಫೋನ್ ಬ್ಯಾಟರಿ ಮತ್ತು ಕಾರ್ಯಕ್ಷಮತೆಗೆ ದೊಡ್ಡ ಹಾನಿ ಉಂಟುಮಾಡಬಹುದು.

ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ ಸ್ಮಾರ್ಟ್‌ಫೋನ್ ಬಳಕೆದಾರರು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕರು ತಮ್ಮ ಫೋನ್ ನಿಧಾನವಾಗಿ ಚಾರ್ಜ್ ಆಗುತ್ತಿದೆ ಅಥವಾ ಮಧ್ಯದಲ್ಲೇ ಚಾರ್ಜಿಂಗ್ ನಿಲ್ಲುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಟೆಕ್ ತಜ್ಞರ ಪ್ರಕಾರ, ಇದು ಹೆಚ್ಚಿನ ಸಂದರ್ಭಗಳಲ್ಲಿ ಫೋನ್‌ನ ಸುರಕ್ಷತಾ ವ್ಯವಸ್ಥೆಯ ಭಾಗವಾಗಿರುತ್ತದೆ. ಬೇಸಿಗೆಯಲ್ಲಿ ಮೊಬೈಲ್ ತಾಪಮಾನ ಹೆಚ್ಚಾದಾಗ ಫೋನ್ ಸ್ವಯಂ ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಸಂಪೂರ್ಣ ಚಾರ್ಜಿಂಗ್ ಕೂಡ ತಾತ್ಕಾಲಿಕವಾಗಿ ನಿಲ್ಲಬಹುದು.

ಬಿಸಿಲಿನ ನಡುವೆ ಹೆಚ್ಚು ಸಮಯ ಫೋನ್ ಬಳಸುವುದು, ಹೈ ಗ್ರಾಫಿಕ್ಸ್ ಗೇಮ್‌ಗಳನ್ನು ಆಡೋದು ಅಥವಾ ವಿಡಿಯೋ ಸ್ಟ್ರೀಮಿಂಗ್ ಮಾಡುವುದು ಫೋನ್ ಇನ್ನಷ್ಟು ಬಿಸಿಯಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಫೋನ್ ಹ್ಯಾಂಗ್ ಆಗುವುದು, ಬ್ರೈಟ್‌ನೆಸ್ ಕಡಿಮೆಯಾಗುವುದು ಹಾಗೂ ಕಾರ್ಯಕ್ಷಮತೆ ಕುಸಿಯುವುದು ಸಾಮಾನ್ಯ.

ಹೆಚ್ಚಿನವರು ಫೋನ್ ಕವರ್ ಹಾಕಿಯೇ ಚಾರ್ಜ್ ಮಾಡುತ್ತಾರೆ. ಆದರೆ ಇದರಿಂದ ಫೋನ್‌ನೊಳಗಿನ ಬಿಸಿ ಹೊರಬರಲು ಸಾಧ್ಯವಾಗದೆ ಓವರ್‌ಹೀಟ್ ಸಮಸ್ಯೆ ಹೆಚ್ಚಾಗುತ್ತದೆ. ಚಾರ್ಜಿಂಗ್ ಸಮಯದಲ್ಲಿ ಕವರ್ ತೆಗೆದುಿಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ವೈರ್‌ಲೆಸ್ ಚಾರ್ಜಿಂಗ್ ಕೂಡ ಹೆಚ್ಚು ಬಿಸಿ ಉಂಟುಮಾಡುವ ಕಾರಣ ಬೇಸಿಗೆಯಲ್ಲಿ ವೈರ್ಡ್ ಚಾರ್ಜರ್ ಬಳಸುವುದು ಸುರಕ್ಷಿತ ಎನ್ನಲಾಗುತ್ತಿದೆ. ಜೊತೆಗೆ ಒರಿಜಿನಲ್ ಚಾರ್ಜರ್ ಮಾತ್ರ ಬಳಸಬೇಕು ಎಂದು ಎಚ್ಚರಿಸಲಾಗಿದೆ.

ಚಾರ್ಜಿಂಗ್ ವೇಳೆ ಗೇಮ್ ಆಡುವುದು ಅಥವಾ ಭಾರೀ ಆ್ಯಪ್ ಬಳಸುವುದು ಬ್ಯಾಟರಿಗೆ ಹಾನಿ ಉಂಟುಮಾಡಬಹುದು. ಬ್ಯಾಟರಿ ಬೇಗ ಖಾಲಿಯಾಗುವುದು ಅಥವಾ ಬ್ಯಾಕ್ ಪ್ಯಾನೆಲ್ ಊದಿಕೊಳ್ಳುವುದು ಕಂಡುಬಂದರೆ ತಕ್ಷಣ ಸರ್ವಿಸ್ ಸೆಂಟರ್ ಸಂಪರ್ಕಿಸಬೇಕು ಎಂದು ತಜ್ಞರು ಹೇಳಿದ್ದಾರೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories