ರಿಚಾರ್ಜ್ ಪ್ಲಾನ್‌ಗಳು 28 ದಿನಗಳು ಮಾತ್ರ ಏಕೆ ಇರುತ್ತೆ? ಈ ಬಿಸಿನೆಸ್ ಟ್ರಿಕ್ ಗೊತ್ತಾ

ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು 28 ದಿನಗಳು ಮಾತ್ರ, ಏಕೆ ಎಂಬ ಆಲೋಚನೆ ನಿಮಗೂ ಬಂದಿದ್ಯಾ? ಟೆಲಿಕಾಂ ಕಂಪನಿಗಳ ಬಿಸಿನೆಸ್ ಟ್ರಿಕ್ ಇಲ್ಲಿದೆ!

  • ಟೆಲಿಕಾಂ ಕಂಪನಿಗಳ 28 ದಿನ ಪ್ಲಾನ್‌ನಲ್ಲಿ ಬಿಸಿನೆಸ್ ಟ್ರಿಕ್ ಇದೆ
  • ವರ್ಷದಲ್ಲಿ 12 ರೀಚಾರ್ಜ್‌ ಬದಲಾಗಿ 13 ಸಲ ಬೇಕಾಗುತ್ತೆ
  • ಕಂಪನಿಗಳು ವ್ಯಾಲಿಡಿಟಿ ಕಡಿಮೆ ಮಾಡಿ ಲಾಭ ಹೆಚ್ಚಿಸುತ್ತಿವೆ

ನಮ್ಮಲ್ಲಿ ಸಾಮಾನ್ಯವಾಗಿ ಪ್ರೀಪೇಡ್ (prepaid Recharge Plan) ಮೊಬೈಲ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡುವುದು ಒಂದು ತಿಂಗಳಿಗೊಮ್ಮೆ ಅನ್ನೋ ಭ್ರಮೆ ಇರುತ್ತದೆ. ಆದರೆ ಗಮನಿಸಿದರೆ, ಬಹುತೇಕ ಪ್ಲಾನ್‌ಗಳು 30 ಅಥವಾ 31 ದಿನವಲ್ಲ, ಕೇವಲ 28 ದಿನಗಳವರೆಗೆ ಮಾತ್ರ ವ್ಯಾಲಿಡಿಟಿ (validity) ನೀಡುತ್ತವೆ. ಇದೊಂದು ಬಿಸಿನೆಸ್ ತಂತ್ರ ಎಂಬುದು ಬಹಿರಂಗ ಸತ್ಯ.

ಪ್ರಾರಂಭದಲ್ಲಿ ಕೆಲವೇ ಕೆಲವು ಕಂಪನಿಗಳು ಈ 28 ದಿನ ಪ್ಲಾನ್ ನೀಡುತ್ತಿದ್ದರೂ, ಈಗ ಎಲ್ಲ ಪ್ರಮುಖ ಟೆಲಿಕಾಂ ಕಂಪನಿಗಳೂ ಅದನ್ನ ಅನುಸರಿಸುತ್ತಿವೆ. ಕಾರಣ ಸರಳ –  ಇದರಿಂದ ವರ್ಷಕ್ಕೆ 12 ಬದಲು 13 ಬಾರಿ ನೀವು ರೀಚಾರ್ಜ್ ಮಾಡುವಂತೆ ಮಾಡುತ್ತಾರೆ.

ಇದನ್ನೂ ಓದಿ: ಜೂನ್ 30ರೊಳಗೆ ಆರ್ಡರ್ ಮಾಡಿದ್ರೆ OnePlus 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಒಂದು ಪ್ಲಾನ್‌ನಲ್ಲಿ ಎರಡು ಅಥವಾ ಮೂರು ದಿನ ಕಡಿಮೆ ನೀಡಿದರೆ, ಅದರಿಂದ ಕಂಪನಿಗೆ ವರ್ಷದ ಕೊನೆಗೆ ಒಂದು ತಿಂಗಳ ಲಾಭ ಇರುತ್ತದೆ.

ಹೆಚ್ಚಿನ ಗ್ರಾಹಕರು ಈ ಬಗ್ಗೆ ಆಲೋಚಿಸದೇ ಪ್ಲಾನ್ ನವೀಕರಿಸುತ್ತಿರುತ್ತಾರೆ. 28 ದಿನ ಪ್ಲಾನ್‌ಗಳಲ್ಲಿ ಗ್ರಾಹಕರಿಗೆ ತಿಂಗಳ ದಿನಾಂಕದ ಮೇಲೆ ನಂಬಿಕೆ ಇರೋದಿಲ್ಲ. ಈ ಗೊಂದಲದಿಂದ ಕಂಪನಿಗೆ ಲಾಭವಾಗುತ್ತದೆ, ನೀವು ತಿಂಗಳ ಕೊನೆಯ ಎರಡು ಮೂರು ದಿನಗಳನ್ನು ಕಳೆದುಕೊಳ್ಳುತ್ತೀರಿ ಎಂಬುದು ಪ್ರಮುಖ ಅಂಶ.

Recharge Plans

ತಿಂಗಳಿಗೆ 28 ದಿನದ ಪ್ಲಾನ್ ಮಾಡಿದರೆ, ವರ್ಷಕ್ಕೆ 336 ದಿನ ಮಾತ್ರ ಸೇವೆ ಸಿಗುತ್ತೆ. ಉಳಿದ 29 ದಿನ ಸೇವೆಗೆ ಇನ್ನೊಂದು ಪ್ಲಾನ್ ಬೇಕು – ಅಷ್ಟೆ ಲಾಭ! ಈ (strategy) ತಂತ್ರದಿಂದ ಕಂಪನಿಗಳು ಪ್ರತಿವರ್ಷ ಒಂದು ಹೊಸ ರಿಚಾರ್ಜ್ ನಿಂದ, ಹಣ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: ಇನ್ಮುಂದೆ ಅಷ್ಟು ಸುಲಭವಾಗಿ ಸಿಮ್‌ ಕಾರ್ಡ್ ಸಿಗಲ್ಲ! ಹೊಸ ನಿಯಮ, ಕಠಿಣ ರೂಲ್ಸ್

ಇತ್ತೀಚೆಗಷ್ಟೇ ಗ್ರಾಹಕರ ಅಸಮಾಧಾನ ಮತ್ತು ನ್ಯಾಯಾಲಯದ ಸೂಚನೆಗಳಿಂದಾಗಿ ಕೆಲವು ಕಂಪನಿಗಳು ಈಗ 30 ದಿನದ ಪ್ಲಾನ್‌ಗಳನ್ನೂ (monthly recharge) ನೀಡಲು ಪ್ರಾರಂಭಿಸಿವೆ.

ಆದರೆ ಸಾಮಾನ್ಯ ಗ್ರಾಹಕರಿಗೆ ಎಚ್ಚರಿಕೆ ಬೇಕಿದೆ – ನೀವು ಯಾವ ಪ್ಲಾನ್ ಆಯ್ಕೆ ಮಾಡುತ್ತಿರುವಿರಿ ಎಂಬುದರ ಮೇಲೆ ನಿಮ್ಮ ಹಣದ ಮೌಲ್ಯ ತೀರ್ಮಾನವಾಗುತ್ತದೆ.

Why Mobile Recharge Plans Are Only 28 Days

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories