Bangalore NewsKarnataka News

ಸರ್ಕಾರಿ ಜಾಗ ಒತ್ತುವರಿ, ಮನೆ ಕಟ್ಟಿಕೊಂಡವರಿಗೆ ಬಿಗ್ ಅಪ್ಡೇಟ್! ಧಿಡೀರ್ ಹೊಸ ನಿಯಮ

ರಾಜ್ಯದಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದ ಹಾಗೆ ಹೊಸ ನಿಯಮಗಳು ಜಾರಿಗೆ ಬರುತ್ತಲೇ ಇದೆ. ಕೆಲವು ನಿಯಮಗಳು ಜನರಲ್ಲಿ ಬದಲಾವಣೆಯನ್ನು ತರುತ್ತಲಿದೆ. ಅದರಲ್ಲೂ ಭೂಮಿ, ಆಸ್ತಿ ಇಂಥ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಸರ್ಕಾರವು ಹೊಸ ಆದೇಶಗಳನ್ನ ನೀಡುತ್ತಿದೆ. ಅವುಗಳನ್ನು ಜನರು ಪಾಲಿಸಲೇಬೇಕಾಗುತ್ತದೆ. ಇದೀಗ ಸರ್ಕಾರಿ ಭೂಮಿಯ (Govt Property) ಬಗ್ಗೆ ಹೊಸ ನಿಯಮ ಜಾರಿಗೆ ಬಂದಿದೆ.

ಹೌದು, ರಾಜ್ಯ ಸರ್ಕಾರವು ಇತ್ತೀಚೆಗೆ ಸರ್ಕಾರಿ ಯೋಜನೆಗಳ ಬಗ್ಗೆ, ಆಸ್ತಿ ರಿಜಿಸ್ಟರ್ ಮಾಡಿಸಿಕೊಳ್ಳುವ ಬಗ್ಗೆ ಹಾಗು ಇನ್ನಿತರ ವಿಚಾರಗಳ ಬಗ್ಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಈಗ ಸರ್ಕಾರಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ತಕ್ಕ ಮನೆ (House) ಕಟ್ಟಿಸಿಕೊಂಡಿರುವವರಿಗೆ ಸರ್ಕಾರದ ಕಡೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ. ಇದು ಜನರಿಗೆ ಎಚ್ಚರಿಕೆ ಗಂಟೆಯ ಹಾಗೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

Big update for those who have a house in government land

ಏನೇ ಮಾಡಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ವಾ? ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ

Property Documentsಹೊಸ ಕಾರ್ಯಕ್ರಮ ಶುರು

ಸರ್ಕಾರವು ಈಗ ತಮಗೆ ಸೇರಿದ ಭೂಮಿಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಸರ್ಕಾರಕ್ಕೆ ಸೇರಿದ ಭೂಮಿಯನ್ನು ರಕ್ಷಣೆ ಮಾಡಲು ಲ್ಯಾನ್ಡ್ ಬೀಟ್ ಕಾರ್ಯಕ್ರಮವನ್ನು ಶುರು ಮಾಡಿದೆ.

ಈ ಬಗ್ಗೆ ಖುದ್ದು ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ಸರ್ಕಾರಕ್ಕೆ ಸೇರಿದ ಜಮೀನುಗಳನ್ನು ರಕ್ಷಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೇಷನ್ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ಮತ್ತೊಮ್ಮೆ ವಿಸ್ತರಣೆ

ಸರ್ಕಾರವು ಒಂದು ಆಪ್ ಅಭಿವೃದ್ಧಿ ಪಡಿಸಿದ್ದು, ಅದರಲ್ಲಿ 14 ಲಕ್ಷ ಸರ್ಕಾರಕ್ಕೆ ಸೇರಿದ ಡಿಜಿಟಲ್ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ. ಎಲ್ಲಾ ಆಸ್ತಿಯ ಬಗ್ಗೆ ಜಿಪಿಎಸ್ ಬಳಕೆ ಮಾಡಿ, ಅಪ್ಲಿಕೇಶನ್ ನಲ್ಲಿ ಮ್ಯಾಪ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಹ ಜಾಗಗಳಿಗೆ ಭೇಟಿ ನೀಡಿ ಎಲ್ಲವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ತಿಗೆ ಸೇರಿದ ಹಾಗೆ ಏನೇ ಸಮಸ್ಯೆ ಇದ್ದರು ಸಹ, ಅದನ್ನು ಅಪ್ಲಿಕೇಶನ್ ನಲ್ಲಿ ನೇರವಾಗಿ ಹಾಕಲಾಗುತ್ತದೆ. ಬಳಿಕ ಒತ್ತುವರಿ ಆಗಿರುವ ಜಾಗವನ್ನು ತೆರವು ಮಾಡುವ ಕೆಲಸ ಶುರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 5,90,000 ಕ್ಕಿಂತ ಹೆಚ್ಚು ಆಸ್ತಿಗಳ ಪರಿಶೀಲನೆಯನ್ನು ಈಗಾಗಲೇ ಪಂಚಾಯಿತಿ ಅಧಿಕಾರಿಗಳು ಸಹ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಒತ್ತುವರಿ ಗಳನ್ನು ತೆರವು ಮಾಡುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ರೈತರ ಬ್ಯಾಂಕ್ ಖಾತೆಗೆ ₹3000 ರೂಪಾಯಿ ಡೆಪಾಸಿಟ್! ಕೃಷಿ ಸಚಿವರಿಂದ ಸಿಹಿ ಸುದ್ದಿ

ಅಧಿಕಾರಿಗಳು ಬಹಳ ಕಷ್ಟಪಟ್ಟು ಕೆಲಸ ಮಾಡಿರುವ ಕಾರಣ ಎಲ್ಲಾ ಗ್ರಾಮದ ಆಸ್ತಿಗಳ ಮಾಹಿತಿ ಹಾಗೂ ಡಿಜಿಟಲ್ ಕಾಪಿಗಳನ್ನ ಹೊಂದಿದ್ದೇವೆ, ಆಸ್ತಿಗಳ ಸ್ಪಾಟ್ ಚೆಕ್ ಕೂಡ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದರಿಂದ ಸರ್ಕಾರದ ಒತ್ತುವರಿ ಸಮಸ್ಯೆಗೆ ಪರಿಹಾರ ಸಿಕ್ಕ ಹಾಗೆ ಎಂದಿದ್ದಾರೆ.

Big update for those who have a house in government land

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories