Bengaluru NewsKarnataka News

ಹಸು, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರದಿಂದ ಬಂಪರ್ ಸಿಹಿ ಸುದ್ದಿ

ಈ ಬಾರಿಯ ಬಜೆಟ್‌ ಪಶುಸಂಗೋಪನೆ ಮತ್ತು ರೈತರ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದೆ. ಪರಿಹಾರದ ಮೊತ್ತ ಹೆಚ್ಚಳ, ಪಶು ಚಿಕಿತ್ಸಾಲಯಗಳು, ಮೇವಿನ ತೋಟಗಳು ಮತ್ತು ಕುರಿಗಾರರ ತರಬೇತಿ ಸೇರಿದಂತೆ ಪ್ರಮುಖ ತೀರ್ಮಾನಗಳಿವೆ.

  • ರೈತರಿಗೆ ಜಾನುವಾರುಗಳ ಸಾವು ಪರಿಹಾರ ಮೊತ್ತ ಹೆಚ್ಚಳ.
  • 50 ಹೊಸ ಪಶು ಚಿಕಿತ್ಸಾಲಯಗಳು ನಿರ್ಮಾಣ.
  • ವಲಸೆ ಕುರಿಗಾರರಿಗೆ ಮಾದರಿ ತರಬೇತಿ ಕೇಂದ್ರ.

ಬೆಂಗಳೂರು (Bengaluru): ಬಂಡೂರು ಕುರಿ, ಹಳ್ಳಿಕಾರ್ (Hallikar), ಕಿಲಾರಿ (Killari) ಮತ್ತು ಅಮೃತ್ ಮಹಲ್ (Amruth Mahal) ದನಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಒತ್ತುನೀಡಲಾಗಿದೆ. ₹2 ಕೋಟಿ ಅನುದಾನ ಒದಗಿಸಲಾಗಿದೆ. ಇದರಿಂದ ರಾಜ್ಯದ ಮೂಲದೇಶಿ ಜಾನುವಾರು ತಳಿಗಳ ಸಂರಕ್ಷಣೆಗೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಜಾನುವಾರುಗಳ ಆಕಸ್ಮಿಕ ಸಾವು ರೈತರಿಗೆ (Karnataka Farmers) ಭಾರೀ ಆರ್ಥಿಕ ನಷ್ಟ ಉಂಟುಮಾಡುತ್ತದೆ. ಈ ಸಂಕಷ್ಟ ನಿವಾರಣೆಗೆ ‘ಅನುಗ್ರಹ’ ಯೋಜನೆಯನ್ನು ಬಲಪಡಿಸಲಾಗಿದೆ.

ಹಸು, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರದಿಂದ ಬಂಪರ್ ಸಿಹಿ ಸುದ್ದಿ

ಇದನ್ನೂ ಓದಿ: ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣಕ್ಕೆ ಬಿಡುಗಡೆ ಭಾಗ್ಯ! ಬಿಗ್ ಅಪ್ಡೇಟ್

ಈಗಾಗಲೇ ಇರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ, ಹಸು, ಎಮ್ಮೆ ಮತ್ತು ಎತ್ತುಗಳಿಗೆ ₹10,000 ರಿಂದ ₹15,000 ಗೆ, ಕುರಿ/ಮೇಕೆಗಳಿಗೆ ₹5,000 ರಿಂದ ₹7,500 ಗೆ ಮತ್ತು 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ₹3,500 ರಿಂದ ₹5,000 ಗೆ ಏರಿಸಲಾಗಿದೆ. ಇದು ಜಾನುವಾರು ಹೊಂದಿರುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ.

ಪಶು ಚಿಕಿತ್ಸಾ ಸೇವೆಗಳ ವಿಸ್ತರಣೆ

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 60 ಹೊಸ ಪಶು ಆಸ್ಪತ್ರೆಗಳು ಸ್ಥಾಪನೆಯಾಗಿದ್ದು, ಮುಂದಿನ ವರ್ಷಕ್ಕೆ 50 ಹೊಸ ಪಶು ಚಿಕಿತ್ಸಾಲಯಗಳು ಆರಂಭಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

ಈ ಹೊಸ ಚಿಕಿತ್ಸಾಲಯಗಳಿಂದ ಹಳ್ಳಿಗಳಲ್ಲಿಯೂ ಉತ್ತಮ ಪಶು ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಜೊತೆಗೆ 100 ಹೊಸ ಪಶು ವೈದ್ಯಕೀಯ ಸಂಸ್ಥೆಗಳ ಕಟ್ಟಡಗಳನ್ನು ನಬಾರ್ಡ್ ಸಹಯೋಗದಲ್ಲಿ ನಿರ್ಮಿಸಲಾಗುವುದು.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಗೆ ಹೊಸ ಕ್ರಮ; ಸಿದ್ದರಾಮಯ್ಯ ಖಡಕ್ ಸೂಚನೆ

Cow Farming

ಮೇವಿನ ಮರಗಳ ನೆಡುತೋಪು

ಜಾನುವಾರುಗಳಿಗೆ (Animal Husbandry) ಮೇವು ಲಭ್ಯತೆ ಹೆಚ್ಚಿಸಲು, ಅರಣ್ಯ ಇಲಾಖೆ ಹಾಗೂ ನರೇಗಾ (NREGA) ಯೋಜನೆಗಳ ಸಹಯೋಗದಲ್ಲಿ ಮೇವಿನ ಮರಗಳ ನೆಡುತೋಪು ಅಭಿವೃದ್ಧಿ ಮಾಡಲಾಗುತ್ತದೆ. ಇದರೊಂದಿಗೆ ಅಮೃತ್ ಮಹಲ್ ಕಾವಲುಗಳ ಭೂ ಅತಿಕ್ರಮಣ ತಡೆಯುವ ಯೋಜನೆಯೂ ರೂಪಿಸಲಾಗಿದೆ. ಇದರಿಂದ ಜಾನುವಾರುಗಳು ಬೇಸಿಗೆಯಲ್ಲಿ ಮೇವು ಕೊರತೆಯಿಂದ ಬಳಲದಂತೆ ಸಹಾಯವಾಗಲಿದೆ.

ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಗಿಫ್ಟ್: ಸಾಲದ ಮೇಲೆ ಬಡ್ಡಿ ಮನ್ನಾ

ಕುರಿಗಾರರಿಗೆ ತರಬೇತಿ ಕೇಂದ್ರ

ವಲಸೆ ಕುರಿಗಾರರು ಎದುರಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಕುರಿ ಸಾಕಾಣಿಕೆ ಪದ್ಧತಿ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ತರಬೇತಿ ನೀಡಲು ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFSU) ಸಹಯೋಗದಲ್ಲಿ ವಿಶೇಷ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ಈ ತರಬೇತಿಗಳಿಂದ ಪಶುಸಂಗೋಪನೆಯ ನವೀನ ತಂತ್ರಗಳು ಕುರಿಗಾರರಿಗೆ ಲಭ್ಯವಾಗಲಿವೆ.

Sheep Farming

‘ನಂದಿನಿ’ ಬ್ರ್ಯಾಂಡ್‌ ವಿಸ್ತರಣೆ

ಸರ್ಕಾರದ ಪ್ರಕಾರ, ಈ ಬಾರಿಯ ಬಜೆಟ್ ನಂದಿನಿ (Nandini) ಹಾಲಿನ ಮಾರುಕಟ್ಟೆ ವಿಸ್ತರಣೆಗೆ ಸಹ ಪ್ರಾಮುಖ್ಯತೆ ನೀಡಿದೆ. 2024-25ನೇ ಸಾಲಿನಲ್ಲಿ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹ ಮಾಡಲಾಗಿದೆ. ಈ ಹಂತದಿಂದ ‘ನಂದಿನಿ’ ಬ್ರ್ಯಾಂಡ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಸರ್ಕಾರ ಸಜ್ಜಾಗಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಬಂಪರ್‌ ಸುದ್ದಿ! 3 ಲಕ್ಷ ಸಹಾಯಧನ ಯೋಜನೆ ಘೋಷಣೆ

ಪಶುಸಂಗೋಪನೆ ಕ್ಷೇತ್ರದಲ್ಲಿ ಬಜೆಟ್ ಅನೇಕ ಬದಲಾವಣೆಗಳೊಂದಿಗೆ ಬಂದಿದೆ. ಇದರಿಂದ ರೈತರ ಜೀವನೋನ್ನತಿ ಮತ್ತು ಪಶುಸಂಗೋಪನೆಯ ಅಭಿವೃದ್ಧಿಗೆ ಉತ್ತಮ ಪ್ರಭಾವ ಬೀರುವ ನಿರೀಕ್ಷೆ ಇದೆ.

Budget Boost for Animal Husbandry, Major Benefits for Farmers

English Summary

Related Stories