ಅನ್ನದಾತ ರೈತರಿಗೆ ಸರ್ಕಾರದಿಂದಲೇ ಸಿಗಲಿದೆ 2 ಲಕ್ಷ ಸಬ್ಸಿಡಿ ಸಾಲ! ಈ ರೀತಿ ಅಪ್ಲೈ ಮಾಡಿ
ರೈತರು ಇನ್ಯಾರಿಂದಲೋ ಸಾಲ (Loan) ಪಡೆಯುವುದಕ್ಕಿಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಮೂಲಕ ಸಾಲ ಸೌಲಭ್ಯ ಪಡೆಯಬಹುದು.
ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಹಳಷ್ಟು ಜನರು, ಹಳ್ಳಿಯ ಜನರು ಕೃಷಿಗೆ (Agriculture) ಸಂಬಂಧಿಸಿದ ಕೆಲಸಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ರೈತರಿಗೆ ಕೃಷಿ ಕೆಲಸಗಳನ್ನು ನಡೆಸಿಕೊಂಡು ಹೋಗುವಾಗ ಕೆಲವು ಸಮಸ್ಯೆಗಳು ಎದುರಾಗುತ್ತದೆ, ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ ಅಥವಾ ಬೆಳೆಗಳ ಇಳುವಳಿ ಸರಿಯಾಗಿ ಇಲ್ಲದೇ ಇರುವುದು. ಈ ರೀತಿ ಆದಾಗ ಆರ್ಥಿಕವಾಗಿ ತೊಂದರೆ ಆಗುತ್ತದೆ. ಇಂಥ ಸಮಸ್ಯೆಗಳಿಗೆ ಸರ್ಕಾರ ಈಗ ಒಂದು ಪರಿಹಾರ ನೀಡಲು ಮುಂದಾಗಿದೆ..
ಸಿಹಿ ಸುದ್ದಿ, ರೈತರಿಗಾಗಿ ಹೊಸ ಯೋಜನೆ ಜಾರಿಗೆ ತರಲು ಮುಂದಾದ ಸರ್ಕಾರ! ಹೊಸ ಆದೇಶ
ರೈತರಿಗೆ ಹೊಸ ಯೋಜನೆ
ಇದೀಗ ಕೇಂದ್ರ ಸರ್ಕಾರವು ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಮೂಲಕ ರೈತರಿಗೆ ಸಹಾಯ ಮಾಡುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಎಲ್ಲಾ ರೈತರಿಗೆ ಅನುಕೂಲ ಆಗಲಿದೆ. ಕೇಂದ್ರ ಸರ್ಕಾರದಿಂದ ಈಗ ಜಾರಿಗೆ ತರಲಿರುವ ಯೋಜನೆಗೆ 2 ಲಕ್ಷ ರೂಪಾಯಿಗಳ ವರೆಗು ಸಾಲ ಸೌಲಭ್ಯ (Loan Scheme) ಸಿಗುವಂಥ ಯೋಜನೆ ಇದಾಗಿದೆ.
ಹೈನುಗಾರಿಕೆ ಉದ್ಯಮ
ವ್ಯವಸಾಯದ ಜೊತೆಗೆ ಈಗ ರೈತರಿಗೆ ಲಾಭ ತಂದುಕೊಡುವಂಥ ಯೋಜನೆ ಹೈನುಗಾರಿಕೆಯನ್ನು ಉದ್ಯಮದ ಹಾಗೆ ಶುರು ಮಾಡಿದರೆ, ಒಳ್ಳೆಯ ಲಾಭ ಸಿಗುತ್ತದೆ. ಹೈನುಗಾರಿಕೆ ಶುರು ಮಾಡುವುದಕ್ಕೆ ಮೊದಲನೆಯದಾಗಿ ರೈತರು ಜಾನುವಾರುಗಳನ್ನು ಖರೀದಿ ಮಾಡಬೇಕಾಗುತ್ತದೆ, ಅವುಗಳನ್ನು ನೋಡಿಕೊಳ್ಳಲು ದನಗಳ ಕೊಟ್ಟಿಗೆಯನ್ನು ನಿರ್ಮಿಸಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಈ ಜಿಲ್ಲೆಯ ಮಹಿಳೆಯರ ಖಾತೆಗೆ ಮೊದಲು
ಈ ರೀತಿಯಾಗಿ ಡೈರಿ ಉದ್ಯಮ ಶುರು ಮಾಡಬಹುದು, ಇದಕ್ಕಾಗಿ ರೈತರು ಇನ್ಯಾರಿಂದಲೋ ಸಾಲ (Loan) ಪಡೆಯುವುದಕ್ಕಿಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಮೂಲಕ ಸಾಲ ಸೌಲಭ್ಯ ಪಡೆಯಬಹುದು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ!
ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ರೈತರು ಸಾಕುವ ಸಲುವಾಗಿ ಶೆಡ್ ನಿರ್ಮಾಣ ಮಾಡುವ ಸಲುವಾಗಿ 2 ಲಕ್ಷದವರೆಗು ಸಾಲ ಸಿಗುತ್ತದೆ. MNREGA ಯೋಜನೆ ಎಂದು ಕೂಡ ಈ ಯೋಜನೆಯನ್ನು ಕರೆಯಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ದನಗಳ ಹಾಗೂ ಜಾನುವಾರುಗಳ ಕೊಟ್ಟಿಗೆ ನಿರ್ಮಾಣಕ್ಕೆ 2 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ಜೊತೆಗೆ ಸಬ್ಸಿಡಿ (Subsidy Loan) ಕೂಡ ಸಿಗುತ್ತದೆ.
ಇಂತಹ ಜನರಿಗೆ ಸುಲಭವಾಗಿ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಇಷ್ಟೇ ಅಲ್ಲದೇ, ಪಶುಸಂಗೋಪನೆಯ ಮೂಲಕ ಹೆಚ್ಚಿನ ಆದಾಯ ರೈತರಿಗೆ ಸಿಗಲಿ ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ನಿಮಗೆ ಪೂರ್ತಿ ಮಾಹಿತಿ ಸಿಗಬೇಕು ಎಂದರೆ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಪುರಸಭೆ ಆಫೀಸ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು. ಈ ಯೋಜನೆಯ ಉಪಯೋಗವನ್ನು ಎಲ್ಲಾ ರೈತರು ಅರ್ಜಿ ಪಡೆದುಕೊಳ್ಳಬಹುದು.
ಪಶುಸಂಗೋಪನೆಯಲ್ಲಿ ನಿಮಗೆ ಆಸಕ್ತಿ ಇದ್ದರೆ, ನೀವು ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನಲ್ಲಿ ಕೊಡುವ ಫಾರ್ಮ್ ನಲ್ಲಿ ಕೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅವಶ್ಯಕತೆ ಇರುವ ಸಲ್ಲಿಸಿ. ನಿಮ್ಮ ಅಪ್ಲಿಕೇಶನ್ ಹಾಗೂ ದಾಖಲೆಗಳು ಎಲ್ಲವೂ ಸರಿ ಇದ್ದರೆ, ಈ ಯೋಜನೆಗಳ ಅಡಿಯಲ್ಲಿ 2 ಲಕ್ಷದವರೆಗೂ ಸಾಲ ಸಿಗುತ್ತದೆ.
Farmers will get 2 lakh subsidy loan from the central government