ನಿಮ್ಮ ಮಕ್ಕಳಿಗೆ 15 ಸಾವಿರ ಸ್ಕಾಲರ್‌ಶಿಪ್‌ ಸಿಗುತ್ತೆ! ಈ ವಿದ್ಯಾಸಿರಿ ಯೋಜನೆ ಬಗ್ಗೆ ಗೊತ್ತಾ? - Karnataka Vidyasiri Scholarship

ಕರ್ನಾಟಕ ಸರ್ಕಾರದಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ ₹15,000 ನೆರವು, ಸೆಪ್ಟೆಂಬರ್ 30 ಕೊನೆಯ ದಿನ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ.

  • ವಿದ್ಯಾಸಿರಿ ವಿದ್ಯಾರ್ಥಿವೇತನ 2025–26ಕ್ಕೆ ಅರ್ಜಿ ಪ್ರಕ್ರಿಯೆ ಆರಂಭ
  • ಹಿಂದುಳಿದ ವರ್ಗ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹15,000 ನೆರವು
  • ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 30

ಬೆಂಗಳೂರು (Bengaluru): ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಸಿರಿ ವಿದ್ಯಾರ್ಥಿವೇತನ 2025–26 (Education Scholarship) ಅರ್ಜಿಗಳನ್ನು ಆಹ್ವಾನಿಸಿದೆ. ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಓದುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.

ಈ ಯೋಜನೆಯಡಿ ಆಹಾರ ಮತ್ತು ವಸತಿ ವೆಚ್ಚಕ್ಕೆ ಪ್ರತಿ ತಿಂಗಳು ₹1,500 ಪ್ರಮಾಣದಲ್ಲಿ 10 ತಿಂಗಳವರೆಗೆ, ಒಟ್ಟು ₹15,000 ನೆರವು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ (Bank Account) ಜಮೆಯಾಗುತ್ತದೆ. ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಮಾತ್ರ ಅರ್ಹರು.

ಅರ್ಜಿ ಸಲ್ಲಿಸಲು ssp.postmatric.karnataka.gov.in ಪೋರ್ಟಲ್‌ಗೆ ಲಾಗಿನ್ ಆಗಿ ಅಥವಾ ಹೊಸ ಖಾತೆ ತೆರೆಯಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಅರ್ಜಿಯನ್ನು ಪರಿಶೀಲಿಸಿ ಕಾಲೇಜು ಕಚೇರಿಯಲ್ಲಿ ಸಲ್ಲಿಸಬೇಕು.

ಅರ್ಹತೆಗಾಗಿ ವಿದ್ಯಾರ್ಥಿ ಕರ್ನಾಟಕ (Karnataka Scheme) ರಾಜ್ಯದ ನೆಲೆಯವರು ಆಗಿರಬೇಕು, ವಾರ್ಷಿಕ ಕುಟುಂಬ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ (ಪ್ರವರ್ಗ–1ಗೆ 2.5 ಲಕ್ಷ ರೂಪಾಯಿ), ಗ್ರಾಮೀಣ ಪ್ರದೇಶದಿಂದ ಬಂದು ಕಾಲೇಜು 5 ಕಿಮೀ ದೂರದಲ್ಲಿರಬೇಕು. ನಗರ ಪ್ರದೇಶದ (BBMP, ಟೌನ್ ಮುನ್ಸಿಪಾಲಿಟಿ) ವಿದ್ಯಾರ್ಥಿಗಳು ಅರ್ಹರಲ್ಲ.

ಅಗತ್ಯ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ (ವಿದ್ಯಾರ್ಥಿ ಹಾಗೂ ಪೋಷಕರು), ಹಿಂದಿನ ವರ್ಷದ ಅಂಕಪಟ್ಟಿ, ಪಿಯುಸಿ ವಿದ್ಯಾರ್ಥಿಗಳಿಗೆ SATS ID ಅಥವಾ ಇತರರಿಗೆ ನೋಂದಣಿ ಸಂಖ್ಯೆ, ಅಗತ್ಯವಿದ್ದರೆ ವೈದ್ಯಕೀಯ ಪ್ರಮಾಣಪತ್ರ.

ಅರ್ಜಿಯ ಪರಿಶೀಲನೆ ಕಾಲೇಜು ಪ್ರಾಂಶುಪಾಲರಿಂದ ಆರಂಭವಾಗಿ, ತಾಲ್ಲೂಕು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಂದ ಅನುಮೋದನೆಗೊಂಡ ಬಳಿಕ, DBT ಮೂಲಕ ನೆರವು ಖಾತೆಗೆ ವರ್ಗಾಯಿಸಲಾಗುತ್ತದೆ.

ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಇಲಾಖೆಯು ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.

Karnataka VidyaSiri Scholarship Application Open

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories