ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕುಗಳು ಬಂದ್! ಇಲ್ಲಿದೆ ರಜೆಗಳ ಪಟ್ಟಿ - August 2025 Bank Holidays
ಆಗಸ್ಟ್‌ನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಬ್ಬಗಳು, ವಾರಾಂತ್ಯಗಳ ಕಾರಣದಿಂದಾಗಿ ಬ್ಯಾಂಕುಗಳು 15 ದಿನ ಕಾರ್ಯನಿರ್ವಹಿಸದು. ಬ್ಯಾಂಕ್ ಕೆಲಸವಿದ್ದವರು ಮುಂಚಿತವಾಗಿ ದಿನಾಂಕಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

- ಆಗಸ್ಟ್‌ನಲ್ಲಿ 15 ದಿನ ಬ್ಯಾಂಕುಗಳು ಮುಚ್ಚಲ್ಪಡುವ ಸಾಧ್ಯತೆ
- ಹಬ್ಬಗಳು ಮತ್ತು ಶನಿವಾರ, ಭಾನುವಾರಗಳು ಸೇರಿ ಬ್ಯಾಂಕ್ ಕೆಲಸಗಳಿಗೆ ಅಡಚಣೆ
- ಮುಂಚಿತವಾಗಿಯೇ ಬ್ಯಾಂಕ್ ಕೆಲಸ ಪೂರೈಸಿಕೊಳ್ಳುವ ಸಲಹೆ
August 2025 Bank Holidays: ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳು ಇದ್ದರೆ ಆಗಸ್ಟ್ ತಿಂಗಳು ನಿಮಗೆ ಸವಾಲಾಗಿ ಪರಿಣಮಿಸಬಹುದು. ದೇಶದಾದ್ಯಾಂತ ವಿವಿಧ ರಾಜ್ಯಗಳಲ್ಲಿ ಹಬ್ಬಗಳು ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ, ಈ ತಿಂಗಳು 15 ದಿನ ಬ್ಯಾಂಕುಗಳು ಮುಚ್ಚಲ್ಪಡುವ ಸಾಧ್ಯತೆ ಇದೆ.
ಆಗಸ್ಟ್ 3ರಂದು ಭಾನುವಾರದೊಂದಿಗೆ ತ್ರಿಪುರಾ ರಾಜ್ಯದಲ್ಲಿ ಕೇರ್ ಪೂಜೆ, ಆಗಸ್ಟ್ 8ರಂದು ಸಿಕ್ಕಿಂ ಮತ್ತು ಒಡಿಶಾದಲ್ಲಿ ರಾಮ್ ಫಾಟ್ ಹಬ್ಬದ ಕಾರಣವಾಗಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗೆಯೇ, ಆಗಸ್ಟ್ 9ರಂದು ರಕ್ಷಾಬಂಧನ್‌ನಿಂದಾಗಿ ಉತ್ತರ ಪ್ರದೇಶ (Uttar Pradesh), ಮಧ್ಯಪ್ರದೇಶ (Madhya Pradesh), ಹರಿಯಾಣಾ ಮತ್ತು ರಾಜಸ್ಥಾನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ.
ಇದನ್ನೂ ಓದಿ: ನೀವು ನಂಬಲ್ಲ! ₹10 ಸಾವಿರಕ್ಕಿಂತ ಕಡಿಮೆಗೆ ಸ್ಟೂಡೆಂಟ್ ಲ್ಯಾಪ್‌ಟಾಪ್ ಬಿಡುಗಡೆ
ಇದೇ ತಿಂಗಳ 13ರಂದು ಮಣಿಪುರದಲ್ಲಿ ದೇಶಭಕ್ತಿ ದಿನದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದೇಶದಾದ್ಯಾಂತ ರಜೆ. ಆಗಸ್ಟ್ 16ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಪಾರ್ಸಿ ನೂತನ ವರ್ಷದ ಹಿನ್ನಲೆಯಲ್ಲಿ ಮಹಾರಾಷ್ಟ್ರ (Maharashtra), ಗುಜರಾತ್ (Gujarat) ನಲ್ಲಿ ಬ್ಯಾಂಕುಗಳು ಮುಚ್ಚಲಾಗುತ್ತದೆ.
ಆಗಸ್ಟ್ 26 ಮತ್ತು 27 ರಂದು ಗಣೇಶ ಚತುರ್ಥಿ ಇರುವ ಕಾರಣದಿಂದ ಕರ್ನಾಟಕ (Karnataka), ಕೇರಳ (Kerala), ಆಂಧ್ರ ಪ್ರದೇಶ (Andhra Pradesh), ತೆಲಂಗಾಣ (Telangana) ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ಕೆಲಸ ಮಾಡುವುದಿಲ್ಲ. 28ರಂದು ನುವಾಖೈ ಹಬ್ಬದ ಹಿನ್ನೆಲೆಯಲ್ಲಿ ಸಿಕ್ಕಿಂ, ಪಂಜಾಬ್, ಒಡಿಶಾದಲ್ಲಿ ಮುಚ್ಚುವ ಸಾಧ್ಯತೆ ಇದೆ.
ಇದನ್ನು ಓದಿ: ಬರಿ ₹11,999ಕ್ಕೆ 40 ಇಂಚಿನ ಫ್ರೇಮ್‌ಲೆಸ್ ಸ್ಮಾರ್ಟ್ ಟಿವಿ! ಮತ್ತೆ ಆಫರ್ ಸಿಗೋಲ್ಲ
ಇನ್ನೊಂದು ಪ್ರಮುಖ ವಿಚಾರವೇನೆಂದರೆ, ಆಗಸ್ಟ್ 9 ಮತ್ತು 23ರಂದು ಎರಡನೇ ಹಾಗೂ ನಾಲ್ಕನೇ ಶನಿವಾರ, ಆಗಸ್ಟ್ 10, 17, 24, 31ರಂದು ಭಾನುವಾರದ ಕಾರಣದಿಂದಾಗಿ ಬ್ಯಾಂಕುಗಳು ಬಾಗಿಲು ಮುಚ್ಚಿರುತ್ತವೆ.
ಈ ಹಿನ್ನೆಲೆಯಲ್ಲಿ ಲೋನ್ (loan), ಡಿಪಾಸಿಟ್ (deposit) ಅಥವಾ ಇತರ ಲಾವಾದೇವಿಗಳನ್ನು (transactions) ಮುಂಚಿತವಾಗಿಯೇ ಪೂರೈಸಿಕೊಳ್ಳುವುದು ಉತ್ತಮ. ಬ್ಯಾಂಕುಗಳು ಮುಚ್ಚಿರಬಹುದು ಆದರೆ ನೆಟ್ ಬ್ಯಾಂಕಿಂಗ್ (net banking) ಸೇವೆಗಳು ಎಂದಿನಂತೆಯೇ ಲಭ್ಯವಿರುತ್ತವೆ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
15 Bank Holidays in August, Plan Ahead



