ಸ್ವಂತ ಬಿಸಿನೆಸ್ ಮಾಡೋ ಮಹಿಳೆಯರಿಗೆ ಸಿಗುತ್ತೆ 2.5 ಲಕ್ಷ ಸಾಲ ಸೌಲಭ್ಯ! ಅಪ್ಲೈ ಮಾಡಿ
ಸ್ವಯಂ ಉದ್ಯೋಗದ ಆಸಕ್ತಿ ಇದೆಯೇ, ಹಾಗಿದ್ದರೆ ಸಿಗುತ್ತದೆ ನೋಡಿ 2.5 ಲಕ್ಷಗಳ ವರೆಗೆ ಸಾಲ ಸೌಲಭ್ಯ!
ಆರ್ಥಿಕವಾಗಿ ನಮ್ಮ ದೇಶದಲ್ಲಿ ಹಿಂದುಳಿದಿರುವಂತಹ ವರ್ಗದ ಜನರಿಗೆ ಅದರಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ ಪಂಗಡ ಹಾಗೂ ಮಹಿಳೆಯರಿಗೆ ಸ್ಟಾಂಡಪ್ ಯೋಜನೆ ಎನ್ನುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಸ್ಟ್ಯಾಂಡ್ ಅಪ್ ಯೋಜನೆ!
ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು 2016ರಲ್ಲಿ ಏಪ್ರಿಲ್ 5 ರಂದು ಸ್ಟ್ಯಾಂಡ್ ಆಫ್ ಇಂಡಿಯಾ ಯೋಜನೆ ಪ್ರಾರಂಭ ಮಾಡಿದ್ರು. ಸ್ವಯಂ ಉದ್ಯೋಗವನ್ನು ಮಾಡುವಂತಹ ಎಸ್ಸಿ ಎಸ್ಟಿ ಹಾಗೂ ಮಹಿಳೆಯರಿಗೆ ಸಾಲ ಸೌಲಭ್ಯವನ್ನು (Business Loan) ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ.
ದೇಶದಲ್ಲಿ ಯುವಕರು ತಮ್ಮದೇ ಆದಂತಹ ಸ್ವಯಂ ಉದ್ಯೋಗವನ್ನು ಯೋಜನೆ ಅನುಸಾರವಾಗಿ ಪ್ರಾರಂಭ ಮಾಡಬಹುದಾಗಿದೆ. ಇದರಿಂದಾಗಿ ನಿರುದ್ಯೋಗ ತನ ಕೂಡ ಕಡಿಮೆಯಾಗುತ್ತದೆ.
ಇಂತಹ ರೈತರ ಎಲ್ಲಾ ಕೃಷಿ ಸಾಲ ಮನ್ನಾ! ಇಲ್ಲಿದೆ ರಾಜ್ಯ ಸರ್ಕಾರದ ಬಿಗ್ ಅಪ್ಡೇಟ್
10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ ಒಂದು ಕೋಟಿ ರೂಪಾಯಿಗಳ ವರೆಗೂ ಕೂಡ ಈ ಯೋಜನೆ ಅಡಿಯಲ್ಲಿ ಹಣಕಾಸಿನ ಸಾಲ ಸೌಲಭ್ಯ (Loan) ನೀಡಲಾಗುತ್ತಿದೆ. ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ವ್ಯವಹಾರದಲ್ಲಿ 51% ಪಾಲುದಾರಿಕೆಯನ್ನು ಹೊಂದಿರಬೇಕಾಗುತ್ತದೆ.
ಈಗಾಗಲೇ ಎಸ್ಸಿ ಎಸ್ಟಿ ಹಾಗೂ ಮಹಿಳೆಯರಿಗೆ 1.25 ಲಕ್ಷ ಬ್ಯಾಂಕುಗಳಿಂದ 2.5 ಲಕ್ಷ ಕ್ಕೂ ಹೆಚ್ಚಿನ ಜನರಿಗೆ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು (Bank Loan) ಈಗಾಗಲೇ ನೀಡಲಾಗಿದೆ.
ಯೋಜನೆಯ ಪ್ರಯೋಜನಗಳು!
* ಈ ಯೋಜನೆಯಿಂದಾಗಿ ಎಸ್ಸಿ ಎಸ್ಟಿ ಹಾಗೂ ಮಹಿಳಾ ವರ್ಗದ ಜನರು ಸ್ವಂತ ಉದ್ಯೋಗವನ್ನು ಪಡೆದುಕೊಳ್ಳುವ ಮೂಲಕ ದೇಶದ ನಿರುದ್ಯೋಗತನವನ್ನು ಕಡಿಮೆ ಮಾಡಬಹುದಾಗಿದೆ.
* ಈ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ನೀಡುವ ಮೂಲಕ ಅವರಿಂದ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಕೆಲಸವನ್ನು ಮಾಡಲು ಸರ್ಕಾರ ಹೊರಟಿದೆ.
* ಈ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಏಳು ವರ್ಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಇದನ್ನ ಮರುಪಾವತಿ ಮಾಡಿದ್ರೆ ಸಾಕು.
ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು
ಯೋಜನೆಯ ಅರ್ಹತೆಗಳು ಹಾಕಬೇಕಾಗಿರುವ ಡಾಕ್ಯುಮೆಂಟ್ಸ್ ಗಳು.
* ಪ್ರಮುಖವಾಗಿ ಭಾರತದ ನಿವಾಸಿ ಆಗಿರಬೇಕು ಹಾಗೂ ವಯಸ್ಸು 18 ವರ್ಷಕ್ಕಿಂತ ಮೇಲಾಗಿರಬೇಕು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಥವಾ ಮಹಿಳೆಯರಿಗೆ ಮಾತ್ರ ಸಾಲವನ್ನು ಒದಗಿಸಲಾಗುತ್ತದೆ.
* ಈಗಾಗಲೇ ಸಾಲವನ್ನು ಪಡೆದಿದ್ದರೆ ಮತ್ತೆ ಅಂತವರಿಗೆ ಸಾಲವನ್ನು ನೀಡಲಾಗುವುದಿಲ್ಲ ಹಾಗೂ ನೀವು ಯಾವ ಉದ್ಯಮಕ್ಕೆ ಸಾಲವನ್ನು ಪಡೆದುಕೊಳ್ಳುತ್ತಿದ್ದೀರೋ, ಅದರಲ್ಲಿ ನಿಮ್ಮ ಪಾಲುದಾರಿಕೆ 51 ಪ್ರತಿಶತಕ್ಕಿಂತ ಹೆಚ್ಚಾಗಿರಬೇಕು.
ಕೂಡಲೇ ಈ ಕಾರ್ಡ್ ಮಾಡಿಸಿಕೊಳ್ಳಿ! 5 ಲಕ್ಷದ ತನಕ ಉಚಿತ ಬೆನಿಫಿಟ್ ಪಡೆಯಿರಿ
ಡಾಕ್ಯೂಮೆಂಟ್ಸ್.
* ಆಧಾರ್ ಕಾರ್ಡ್ ಜೊತೆಗೆ ನೀವು ವ್ಯವಹಾರವನ್ನು ಪ್ರಾರಂಭ ಮಾಡಿರುವಂತಹ ಭೂಮಿಯ ಅಡ್ರೆಸ್ ಪ್ರೂಫ್.
* ನಿಮ್ಮ ಜಾತಿ ಪ್ರಮಾಣ ಪತ್ರದ ಜೊತೆಗೆ ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ ನೀಡಬೇಕು.
* ಇನ್ಕಮ್ ಟ್ಯಾಕ್ಸ್ ರಿಪೋರ್ಟ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ನೀಡಬೇಕಾಗಿರುತ್ತದೆ.
* ನಿಮ್ಮ ಪಾರ್ಟ್ನರ್ ಶಿಪ್ ನ ಸರ್ಟಿಫಿಕೇಟ್ ಹಾಗೂ ಮೊಬೈಲ್ ನಂಬರ್ ಬೇಕಾಗಿರುತ್ತದೆ.
ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನ.
* standupmitra.in ಇದು ಯೋಜನೆಯ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಕ್ಲಿಕ್ ಮಾಡಿದ ನಂತರ ಕೆಳಗೆ ಸಾಲವನ್ನು ಪಡೆದುಕೊಳ್ಳುವುದಕ್ಕೆ ಅನ್ವಯಿಸುವಂತಹ ಆಪ್ಷನ್ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ.
* ಇಲ್ಲಿ ನಿಮ್ಮ ಹೆಸರು ಇಮೇಲ್ ಸೇರಿದಂತೆ ಬೇರೆ ಬೇರೆ ವಿವರಗಳನ್ನು ಕೇಳಲಾಗುತ್ತದೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕಾಗಿರುತ್ತದೆ.
* ನಂತರ ನಿಮಗೆ ಬರುವಂತಹ ಓಟಿಪಿಯನ್ನು ನಮೂದಿಸಿ ನಂತರ ಲಾಗಿನ್ ಕ್ಲಿಕ್ ಮಾಡಬೇಕು.
* ಅಪ್ಲಿಕೇಶನ್ ಫಾರ್ಮ್ ಓಪನ್ ಆದ ನಂತರ ಅಲ್ಲಿ ಸರಿಯಾದ ರೀತಿಯಲ್ಲಿ ವಿವರಗಳನ್ನು ತುಂಬಿ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಬೇಕು.
* ಈ ಮೂಲಕ ನೀವು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ.
2.5 lakh loan facility for women who do their own business