ಬಿಪಿಎಲ್ ಕಾರ್ಡ್ ಇದ್ರೆ 3 ಗ್ಯಾಸ್ ಸಿಲಿಂಡರ್ ಗಳು ಉಚಿತ! ಯೋಜನೆಯ ಪ್ರಯೋಜನ ಪಡೆಯಿರಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಆಗಿಂದಾಗೆ ನೀಡುತ್ತಾ ಇರುತ್ತವೆ. ಇದು ಜನರ ಜೀವನವನ್ನು ಉತ್ತಮಗೊಳಿಸುತ್ತಿರುತ್ತದೆ. ಜನರ ಜೀವನ ಗುಣಮಟ್ಟ ಉತ್ತಮವಾಗುವುದು ಅಂದರೆ ಆಧುನಿಕ ತಂತ್ರಜ್ಞಾನಗಳು ಹಾಗೂ ಸವಲತ್ತುಗಳು ಅವರ ಬಳಿ ಇರಬೇಕಾಗುತ್ತದೆ. ಇದರಲ್ಲಿ ಎಲ್ ಪಿ ಜಿ ಗ್ಯಾಸ್ (LPG Gas) ಬಳಕೆ ಕೂಡ ಒಂದು.

ಇಂತಹ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ! ಕೇಂದ್ರದ ಬಂಪರ್ ಯೋಜನೆ

2016 ರಲ್ಲಿ ಆರಂಭವಾದ ಯೋಜನೆ

ಕಾಡಿನ ನಾಶ ಕಡಿಮೆ ಮಾಡಲು ಹಾಗೂ ಮನೆಯಲ್ಲಿ ಮಾಡುವ ಅಡುಗೆ ಕೆಲಸ ಸುಲಭವಾಗಿ ನಡೆಯಬೇಕು ಎಂಬ ಯೋಚನೆಯೊಂದಿಗೆ ಉಚಿತ ಗ್ಯಾಸ್ (Free Gas Connection) ಅನ್ನು ನೀಡುವ ಯೋಜನೆಯನ್ನು ಆರಂಭಿಸಲಾಗಿತ್ತು.

2016ರಲ್ಲಿ ಮೊದಲ ಬಾರಿಗೆ ಬಿಪಿಎಲ್ ಕಾರ್ಡ್ (BPL Ration Card) ಹೊಂದಿದವರಿಗೆ ಉಚಿತ ಗ್ಯಾಸ್ (Gas Connection) ಅನ್ನು ನೀಡುವ ಕಾರ್ಯಕ್ರಮಗಳನ್ನು ಆರಂಭಿಸಲಾಗಿತ್ತು. ಈ ಕೆಲಸವನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಆರಂಭಿಸಲಾಗಿತ್ತು.

ಬಿ ಪಿ ಎಲ್ ಕಾರ್ಡ್ ಹೊಂದಿದವರಿಗೆ ಮೂರು ಸಿಲಿಂಡರ್ ಉಚಿತ

ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಅಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಯೋಜನೆಯ ನೆರವನ್ನು ನೀಡಲಾಗುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಾರ್ಷಿಕ 3 ಸಿಲಿಂಡರ್ಗಳಷ್ಟು ಉಚಿತ ಸಿಲಿಂಡರ್ ಅನ್ನು ಪಡೆಯುವ ಅವಕಾಶ ನೀಡಲಾಗಿತ್ತು.

ಈಗ ಮತ್ತೊಮ್ಮೆ ಈ ಯೋಜನೆಯ ಮೂಲಕ ನೆರವು ಬೇಕಾದವರಿಗೆ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮಗಳು ಮುಂದುವರೆಯಲಿವೆ. ಆದರೆ ಅರ್ಹ ಹಾಗೂ ಅಗತ್ಯ ಇರುವ ಕುಟುಂಬಗಳಿಗೆ ಮಾತ್ರ ಈ ನೆರವು ಸಿಗಬೇಕು ಎನ್ನುವ ಕಾರಣಕ್ಕೆ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಯೋಜನೆಯ ನೆರವನ್ನು ವಿತರಿಸಲಾಗುತ್ತಿದೆ.

ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

Gas Cylinder subsidyವೆಬ್ ಸೈಟಿನಲ್ಲಿ ಅರ್ಜಿ ಸಲ್ಲಿಸಿ

ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕು ಎಂದಾದಲ್ಲಿ ನಮ್ಮ ಬಳಿ ಬಿಪಿಎಲ್ ಕಾರ್ಡ್ ಇರುವುದು ಬಹಳ ಅಗತ್ಯ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಈ ನೆರವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು.

ನಿಮ್ಮಲ್ಲಿರುವ ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ನ ವಿವರಗಳನ್ನು ತಯಾರು ಮಾಡಿಟ್ಟುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು www.pmuy.gov.in ಸೈಟ್ ಗೆ ಹೋಗಿ ನಿಮ್ಮ ಅರ್ಜಿಗಳನ್ನು ಇಲ್ಲಿ ಸಲ್ಲಿಸಬಹುದು.

ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

ವಾರ್ಷಿಕವಾಗಿ ಮೂರು ಸಿಲಿಂಡರ್ ಗಳು ಉಚಿತವಾಗಿ ಸಿಕ್ಕಾಗ ಖಂಡಿತವಾಗಿ ಅಡುಗೆ ಓಲೆ ಅಥವಾ ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡುವುದು ತಪ್ಪುತ್ತದೆ. ಇದರಿಂದಾಗಿ ಪರಿಸರದ ನಾಶ ಕೂಡ ತಪ್ಪುತ್ತದೆ ಹಾಗೂ ಇದರ ಜೊತೆಗೆ ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರಿಗೆ ಅಡುಗೆಯ ಕೆಲಸಗಳು ಸುಲಭವಾಗಿ ನಡೆಯುವಂತೆ ಆಗುತ್ತದೆ. ಯೋಜನೆ ಖಂಡಿತ ಬಡ ಕುಟುಂಬಗಳಲ್ಲಿಯೂ ಕೂಡ ತಮ್ಮ ಜೀವನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈಗಾಗಲೇ ಯೋಜನೇ ಚಾಲ್ತಿಯಲ್ಲಿದ್ದು ಇನ್ನೊಮ್ಮೆ ಕೇಂದ್ರ ಸರ್ಕಾರ ಈ ನೆರವನ್ನು ಮುಂದುವರಿಸಲು ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಒಳ್ಳೆಯ ವಿಚಾರ. ಹೀಗಾಗಿ ಯಾರಿಗೆಲ್ಲ ಈ ಯೋಜನೆಯ ಪ್ರಯೋಜನ ಇಲ್ಲಿಯ ತನಕ ಸಿಕ್ಕಿಲ್ಲವೋ ಅಂತಹ ಕುಟುಂಬಗಳು ಬಿಪಿಎಲ್ ಕಾರ್ಡ್ ಅನ್ನು ಪ್ರಮುಖ ದಾಖಲೆಯನ್ನಾಗಿ ಇಟ್ಟುಕೊಂಡು ಅದರ ಜೊತೆಗೆ ಆಧಾರ್ ಕಾರ್ಡ್ ಹಾಗೂ ಇನ್ನಿತರ ವಿವರಗಳನ್ನು ಮೇಲೆ ತಿಳಿಸಿದ ವೆಬ್ಸೈಟ್ ಗೆ ಅಪ್ಲೋಡ್ ಮಾಡುವ ಮೂಲಕ ಯೋಜನೆಯ ಪ್ರಯೋಜನವನ್ನು ಬೇಗನೆ ಪಡೆದುಕೊಳ್ಳಿ.

ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!

3 LPG gas cylinders free for BPL Ration card Holders

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories