ಇಂತಹ ರೈತರ ಬ್ಯಾಂಕ್ ಖಾತೆಗೆ 36,000 ಜಮಾ! ಕೇಂದ್ರದ ಇನ್ನೊಂದು ಯೋಜನೆ
ವರ್ಷಕ್ಕೆ 36,000 ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ; ಪಡೆದುಕೊಳ್ಳಲು ಹೀಗೆ ಮಾಡಿ!
ದೇಶದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ದೇಶದ ಆರ್ಥಿಕ ಅಭಿವೃದ್ಧಿಯು ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ರೈತರು ದೇಶದ ಬೆನ್ನೆಲುಬು.
ಜನರಿಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನ, ಧಾನ್ಯಗಳನ್ನು ಬೆಳೆಯುವ ರೈತರ ಜೀವನ ಸುಗಮವಾಗಿದ್ದರೆ ಕೃಷಿ ಚಟುವಟಿಕೆಯನ್ನು ಕೂಡ ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯ.
ರೈತರು ಕೃಷಿ ಭೂಮಿ (agriculture land) ಯಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರು ಅವರಿಗೆ ಪಿಂಚಣಿ (pension) ಪ್ರಯೋಜನವಂತು ಸಿಗುವುದಿಲ್ಲ. ಇದನ್ನು ಗಮನಿಸಿದ ಸರ್ಕಾರ ಈಗ ಕೃಷಿ ಭೂಮಿಯಲ್ಲಿ ದುಡಿದು, ಜೀವನ ಸಾಧಿಸುವ ರೈತರಿಗಾಗಿಯೇ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ
ಈ ಮೂಲಕ ವಾರ್ಷಿಕವಾಗಿ 36,000ಗಳನ್ನು ರೈತರು ಪಡೆದುಕೊಳ್ಳಲು ಸಾಧ್ಯವಿದೆ. ಆ ಯೋಜನೆ ಯಾವುದು, ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವ ವಿವರಣೆ ಈ ಲೇಖನದಲ್ಲಿ ಇದೆ ಮುಂದೆ ಓದಿ.
ಮಹಿಳೆಯರಿಗೆ ಸಿಗಲಿದೆ ಫ್ರೀ ಗ್ಯಾಸ್ ಸ್ಟವ್! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ
ಪ್ರಧಾನ ಮಂತ್ರಿ ಮನ್ ಧನ್ ಯೋಜನೆ! (Pradhanmantri man dhan Yojana)
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (pradhanmantri Kisan Samman Nidhi Yojana) ಯ ಅಡಿಯಲ್ಲಿ ನೋಂದಾಯಿತ ರೈತರು ಈ ಯೋಜನೆಗೂ ಅರ್ಜಿ ಸಲ್ಲಿಸಬಹುದು. ಈ ಯೋಜನೆ ವಿಶೇಷತೆ ಅಂದ್ರೆ ನೀವು ಅತಿ ಕಡಿಮೆ ಹೂಡಿಕೆ ಮಾಡಿ 60 ವರ್ಷದ ನಂತರ ಪ್ರತಿ ತಿಂಗಳು 3000 ಗಳ ಪಿಂಚಣಿ (Pension) ಪಡೆದುಕೊಳ್ಳಲು ಸಾಧ್ಯವಿದೆ.
ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?
18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 18 ವರ್ಷಕ್ಕೆ ನೀವು ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕೇವಲ 56 ರೂಪಾಯಿಗಳ ಠೇವಣಿ ಇಟ್ಟರೆ ಸಾಕು. ಅದೇ ನೀವು 30 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ ಪ್ರತಿ ತಿಂಗಳು 110ಗಳನ್ನು ಹೂಡಿಕೆ ಮಾಡಬೇಕು. ಈಗ 40 ವರ್ಷಕ್ಕೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ, ಆಗ ಪ್ರತಿ ತಿಂಗಳು 220ಗಳನ್ನು ಹೂಡಿಕೆ ಮಾಡಬೇಕು.
ಹೊಸ ಸ್ಕೀಮ್! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂಪಾಯಿ
ಈ ಯೋಜನೆಯಲ್ಲಿ ಕನಿಷ್ಠ 660ಗಳಿಂದ ಗರಿಷ್ಠ 2400 ರೂಪಾಯಿಗಳವರೆಗೆ ವಾರ್ಷಿಕ ಹೂಡಿಕೆ ಮಾಡಿದರೆ. ಅರವತ್ತು ವರ್ಷದ ನಂತರ ಪ್ರತಿವರ್ಷ 36,000 ಅಥವಾ ತಿಂಗಳಿಗೆ 3000ಗಳನ್ನು ಪಿಂಚಣಿಯಾಗಿ ಪಡೆಯಬಹುದು.
40 ವರ್ಷಗಳ ನಂತರ ಮತ್ತೆ ಹೂಡಿಕೆ ಮಾಡುವ ಅಗತ್ಯ ಇಲ್ಲ ಠೇವಣಿ ಹಣದಿಂದಲೇ ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಆಗುತ್ತದೆ. ಹೂಡಿಕೆದಾರ ಮರಣ ಹೊಂದಿದರೆ ಆ ಹಣವನ್ನು ಆತನ ಪತ್ನಿಗೆ ನೀಡಲಾಗುತ್ತದೆ. ಇಲ್ಲಿ ನಾಮಿನಿ ಕೇವಲ ಪತ್ನಿ ಮಾತ್ರ ಆಗಿರಬೇಕು ಮನೆಯ ಇತರ ಸದಸ್ಯರಿಗೆ ಇದರ ಪ್ರಯೋಜನ ಸಿಗುವುದಿಲ್ಲ.
ನಿಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ
ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಪ್ರಧಾನಮಂತ್ರಿ ಮನ್ ಧನ್ ಯೋಜನೆಯ ಖಾತೆ ಆರಂಭಿಸಬಹುದು. ಒಮ್ಮೆ ಖಾತೆ ಆರಂಭಿಸಿದ ನಂತರ ನಿಮ್ಮ ಬ್ಯಾಂಕ್ ಅಕೌಂಟ್ನಿಂದ (Bank Account) ನೇರವಾಗಿ ಯೋಜನೆಗೆ ಹಣ ವರ್ಗಾವಣೆ ಆಗುವಂತೆ ಮಾಡಲಾಗುವುದು.
ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ 5 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ
ಹಾಗಾದ್ರೆ ಇನ್ಯಾಕೆ ತಡ 60 ವರ್ಷದ ನಂತರ ಯಾರ ಬಳಿಯೂ ಒಂದು ರೂಪಾಯಿ ಹಣಕ್ಕೆ ಕೈ ಚಾಚದೆ ಆರ್ಥಿಕವಾಗಿ ಸುಧಾರಿತ ಜೀವನ ಕಂಡುಕೊಳ್ಳಲು ತಕ್ಷಣ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ.
36,000 deposited into the bank account of such farmers