ಉಚಿತ ಮನೆ ಯೋಜನೆ! ಬಡವರಿಗೆ ಮನೆ ಭಾಗ್ಯ; ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ
ಬಾಡಿಗೆ ಮನೆಯಲ್ಲಿ (Rent House) ವಾಸಿಸುವ ಬಡವರಿಗೆ ಒಂದು ಸ್ವಂತ ಮನೆ (own house) ಕಟ್ಟಿಸಿಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಬಡತನ ರೇಖೆಗಿಂತ ಕೆಳಗಿರುವವರು (below poverty line) ಮಾಧ್ಯಮ ವರ್ಗದವರು (middle class family) ಬಾಡಿಗೆ ಮನೆಯಲ್ಲಿ ಅಥವಾ ಅನಧಿಕೃತ ಸ್ಥಳದಲ್ಲಿ ವಾಸವಾಗಿದ್ದರೆ ಅಂತಹವರಿಗೆ ಒಂದು ಸ್ವಂತ ಮನೆ (own house) ಕಟ್ಟಿಸಿಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಅದುವೇ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ ಸಹಸ್ರಾರು ಮನೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ಐದು ವರ್ಷಗಳ ಒಳಗೆ ಮೂರು ಕೋಟಿಗೂ ಅಧಿಕ ಮನೆಯ ನಿರ್ಮಾಣ ಮಾಡುವ ಕನಸನ್ನು ಸರ್ಕಾರ ಹೊತ್ತಿದೆ.
ಮನೆ, ಜಮೀನು, ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ
ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)
ನೀವು ಹಳ್ಳಿಯಲ್ಲಿ ಅಥವಾ ಗ್ರಾಮೀಣ ಭಾಗದಲ್ಲಿ ವಾಸಿಸುವವರೇ ಆಗಿರಬಹುದು ಅಥವಾ ಮಧ್ಯಮ ವರ್ಗದವರಾಗಿದ್ದು ನಗರ ಪ್ರದೇಶದಲ್ಲಿ ವಾಸಿಸುವವರಾಗಿರಬಹುದು, ಆದರೆ ನಿಮಗೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಇದ್ದೇ ಇರುತ್ತೆ, ಆದರೆ ಇದನ್ನು ಈಡೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ..
ಯಾಕಂದ್ರೆ ಮನೆ ನಿರ್ಮಾಣ ಅಂದ್ರೆ ಅದಕ್ಕೆ ಮುಖ್ಯವಾಗಿ ಹಣ ಬೇಕು, ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದಾಗ ಮಾತ್ರ ಹಣ ಹೊಂದಿಸಲು ಸಾಧ್ಯ. ಹಾಗಂದ ಮಾತ್ರಕ್ಕೆ ಮನೆ ಕಟ್ಟುವ ಕನಸನ್ನು ನೀವು ಕೈ ಬಿಡಬೇಕು ಎಂದೇನೂ ಇಲ್ಲ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸೂರು ನಿರ್ಮಾಣ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಿದೆ.
2016ರಲ್ಲಿ ಜಾರಿಗೆ ಬಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ 2019 24ನೇ ವರ್ಷದ ನಡುವೆ 2.95 ಕೋಟಿ ಪಕ್ಕ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿಯೂ ಕೂಡ ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದು, ಹಿಂದಿಗಿಂತಲೂ ಈಗ ಹೆಚ್ಚಿನ ಮೊತ್ತದ ಅನುದಾನ ನೀಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಯಾರು ಪಡೆದುಕೊಳ್ಳಬಹುದು?
* ಪರಿಶಿಷ್ಟ ಜಾತಿ
* ಪರಿಶಿಷ್ಟ ಪಂಗಡ
* ಆರ್ಥಿಕವಾಗಿ ದುರ್ಬಲ ರಾಗಿರುವವರು
* ಕಡಿಮೆ ಆದಾಯದ ಗುಂಪು
* ಎರಡು ಹಂತಗಳಲ್ಲಿ ಮಧ್ಯಮ ಆದಾಯದ ಗುಂಪು (MIG I) MIG II
ನಾಟಿ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ ಸಬ್ಸಿಡಿ ಹಣ! ಪ್ರತಿದಿನ 25,000 ಆದಾಯ ಪಕ್ಕಾ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ವಿಳಾಸದ ಪುರಾವೆ
ಬ್ಯಾಂಕ್ ಖಾತೆಯ ವಿವರ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ
ಎಲ್ಲಿ ಅರ್ಜಿ ಸಲ್ಲಿಸಬಹುದು?
ಬಯಲು ಸೀಮೆ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂಪಾಯಿಗಳ ಸಹಾಯಧನ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.30 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗುವುದು.
ಇನ್ನು ಅರ್ಜಿ ಸಲ್ಲಿಸಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಸುಲಭವಾಗಿ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಭರ್ತಿ ಮಾಡಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು
Apply at Gram Panchayat for Free housing Scheme