ಗ್ಯಾಸ್, ಯುಪಿಐ, ಕ್ರೆಡಿಟ್ ಕಾರ್ಡ್ ಸೇರಿದಂತೆ ಆಗಸ್ಟ್‌ 1ರಿಂದ ಹೊಸ ನಿಯಮಗಳು - LPG, UPI, Credit Card Changes

ಆಗಸ್ಟ್ 1ರಿಂದ ಕ್ರೆಡಿಟ್ ಕಾರ್ಡ್, LPG, UPI, ಬ್ಯಾಂಕ್, CNG ಸೇವೆಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು, ನಿಮ್ಮ ತಿಂಗಳ ಖರ್ಚಿಗೆ ನೇರವಾಗಿ ಪರಿಣಾಮ ಬೀರಲಿದೆ.

  • ಕ್ರೆಡಿಟ್ ಕಾರ್ಡ್ ವಿಮಾ ಕವರ್ ರದ್ದಾಗುವ ಸಾಧ್ಯತೆ
  • LPG ಮತ್ತು CNG ದರ ಬದಲಾವಣೆ ನಿರೀಕ್ಷೆ
  • UPI ನಿಯಮಗಳಲ್ಲಿ ನವೀಕರಣ, ದೈನಂದಿನ ಲಿಮಿಟ್‌

ಆಗಸ್ಟ್‌ ತಿಂಗಳ ಮೊದಲ ದಿನದಿಂದಲೇ ಗ್ರಾಹಕರ ಜೀವನಶೈಲಿಗೆ ಪ್ರಭಾವ ಬೀರುವ ಹಲವು ಹೊಸ ನಿಯಮಗಳು ಜಾರಿಯಾಗಲಿವೆ. ಬ್ಯಾಂಕಿಂಗ್ (banking), ಗ್ಯಾಸ್ ಬೆಲೆ, ಡಿಜಿಟಲ್ ಪಾವತಿ (digital payment), ಮತ್ತು ಇನ್ಸುರೆನ್ಸ್ ಸೇವೆಗಳ ಬಳಕೆದಾರರು ಈ ಬದಲಾವಣೆಗಳ ಬಗ್ಗೆ ಅಪ್ಡೇಟ್ ಆಗಿರಬೇಕು.

ಹೌದು, ಆಗಸ್ಟ್ ತಿಂಗಳಿನಲ್ಲಿ ಹಲವು ನಿಯಮಗಳು ಬದಲಾಗಲಿವೆ. ಕ್ರೆಡಿಟ್ ಕಾರ್ಡ್‌ಗಳು (Credit Card), ಎಲ್‌ಪಿಜಿ, ಯುಪಿಐ, ಸಿಎನ್‌ಜಿ, ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಈ ಬದಲಾವಣೆಗಳು ನಿಮ್ಮ ಮಾಸಿಕ ವೆಚ್ಚವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: ಕೇವಲ ₹2 ರೂಪಾಯಿಗೆ ₹10 ಲಕ್ಷ ಬೆನಿಫಿಟ್, ಹೊಸ ಪೋಸ್ಟ್ ಆಫೀಸ್ ಸ್ಕೀಮ್

UPI ಬಳಕೆದಾರರಿಗೆ ಹೊಸ ನಿಯಮಗಳು:

ಇನ್ನುಮುಂದೆ Paytm, PhonePe, Google Pay ಹೀಗಿನ UPI ಅಪ್ಲಿಕೇಶನ್‌ಗಳಲ್ಲಿ ಪ್ರತಿದಿನದ ಲಿಮಿಟ್ ಜಾರಿಗೆ ಬರಲಿದೆ. ದಿನಕ್ಕೆ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ. ಅದಲ್ಲದೇ ಒಂದು ಬ್ಯಾಂಕ್ ಖಾತೆಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಿಸಬಹುದು. ವಿಫಲವಾದ ವಹಿವಾಟುಗಳಿಗೆ ಸಂಬಂಧಿಸಿದ ಸ್ಥಿತಿಯನ್ನೂ ದಿನಕ್ಕೆ 3 ಬಾರಿ ಮಾತ್ರ ನೋಡಬಹುದಾಗಿದೆ, ಈ ವೇಳೆ 90 ಸೆಕೆಂಡ್ ಗ್ಯಾಪ್ ಇರಬೇಕು.

ಇದನ್ನೂ ಓದಿ: ಚಿನ್ನದ ಬೆಲೆ ಶಾಕ್ ಕೊಡೋ ಮಟ್ಟಿಗೆ ಕುಸಿತ! ಈಗಲೇ ಖರೀದಿಸಿದ್ರೆ ಲಾಭ

UPI Payment

LPG ಮತ್ತು CNG ಬೆಲೆ ಬದಲಾವಣೆ:

ಕಳೆದ ತಿಂಗಳು ವಾಣಿಜ್ಯ ಗ್ಯಾಸಿನ ಬೆಲೆಯನ್ನು ₹60 ಕಡಿಮೆ ಮಾಡಲಾಗಿತ್ತು. ಈಗ ಆಗಸ್ಟ್ 1ರಿಂದ ಗೃಹ ಬಳಕೆದಾರರಿಗೆ ಲಾಭವಾಗುವಂತೆ LPG ಬೆಲೆ ಇಳಿಕೆ ಆಗಬಹುದೆಂದು ನಿರೀಕ್ಷೆಯಿದೆ. CNG ಮತ್ತು PNG ಬೆಲೆಯು ಕೆಲವೊಂದು ನಗರಗಳಲ್ಲಿ ಹೆಚ್ಚುವಾಗುವ ಸಾಧ್ಯತೆ ಇದೆ – ಇದು ಸಾರ್ವಜನಿಕ ಮತ್ತು ಮನೆಬಳಕೆಯ ಖರ್ಚಿಗೆ ನೇರ ಪರಿಣಾಮ ನೀಡುತ್ತದೆ.

ಇದನ್ನೂ ಓದಿ: ಇನ್ಮುಂದೆ ಇ-ಸ್ಟಾಂಪ್, ಅಗ್ರಿಮೆಂಟ್‍, ಅಫಿಡವಿಟ್ ಎಲ್ಲಾ ಆನ್‌ಲೈನಲ್ಲೇ ಸಾಧ್ಯ

Credit Card

ಕ್ರೆಡಿಟ್ ಕಾರ್ಡ್ ವಿಮಾ ಯೋಜನೆಗೆ ಕತ್ತರಿ:

SBI ಸೇರಿದಂತೆ ಹಲವಾರು ಬ್ಯಾಂಕುಗಳ ಕೊ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ ಗಳಿಗೆ (Credit Cards) ಈಗ ಉಚಿತ ವಿಮಾ ಕವರ್‌ ದೊರೆಯುವುದು ನಿಲ್ಲಲಿದೆ. ₹50 ಲಕ್ಷದಿಂದ ₹1 ಕೋಟಿವರೆಗೆ ದೊರೆಯುತ್ತಿದ್ದ ವಿಮಾ ಯೋಜನೆಗಳು (Insurance Scheme) ಆಗಸ್ಟ್ 11ರಿಂದ ರದ್ದಾಗಬಹುದು. ಇದರಿಂದ ಲಕ್ಷಾಂತರ ಗ್ರಾಹಕರಿಗೆ ಆರ್ಥಿಕ ಭದ್ರತೆಯ ಕೊರತೆ ಉಂಟಾಗುವ ಸಾಧ್ಯತೆ ಇದೆ.

Bank Holidays

ಬ್ಯಾಂಕ್ ರಜಾ ದಿನಗಳು:

RBI ಮಾಸಿಕವಾಗಿ ಪ್ರಕಟಿಸುವ ಬ್ಯಾಂಕ್ ರಜಾ ದಿನಗಳ ಪಟ್ಟಿ ಪ್ರಕಾರ, ಆಗಸ್ಟ್‌ನಲ್ಲಿ ಹಲವಾರು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುವ ದಿನಗಳು ಇರಲಿವೆ. ಪ್ರಮುಖ ಹಣಕಾಸು ವ್ಯವಹಾರಗಳನ್ನು ಈ ದಿನಗಳ ಹೊರತು ನಿರ್ವಹಿಸಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: ಲೋನ್‌ ಪಡೆದ ವ್ಯಕ್ತಿ ಸತ್ತರೆ ಇಎಂಐ ಯಾರು ಕಟ್ಟಬೇಕು? ಹೊಸ ರೂಲ್ಸ್

ಈ ಎಲ್ಲಾ ಬದಲಾವಣೆಗಳು ಆಗಸ್ಟ್‌ ತಿಂಗಳಿನಿಂದ ನಿಮ್ಮ ದಿನಚರಿಯ ಖರ್ಚಿಗೆ ಪ್ರಭಾವ ಬೀರುವಂತಿವೆ. ಹಾಗಾಗಿ ಈಗಲೇ ನೀವು ನಿಮ್ಮ ಹಣಕಾಸಿನ ಯೋಜನೆಗಳನ್ನು ಮರುಪರಿಶೀಲಿಸಿ, ಹೊಸ ನಿಯಮಗಳಿಗೆ ತಯಾರಾಗಿರಿ.

ಇದೆ ರೀತಿಯ ಮಾಹಿತಿ ಇನ್ನಷ್ಟು ಪಡೆಯಲು Kannada News Today ವೆಬ್‌ಸೈಟ್ ವೀಕ್ಷಿಸಿ.

August 2025 New Rules, What Changes Starting This Month

English Summary

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories