ಇನ್ಮುಂದೆ ಇ-ಸ್ಟಾಂಪ್, ಅಗ್ರಿಮೆಂಟ್, ಅಫಿಡವಿಟ್ ಎಲ್ಲಾ ಆನ್‌ಲೈನಲ್ಲೇ ಸಾಧ್ಯ - e-Stamp Paper Online
ಅಫಿಡವಿಟ್, ರೆಂಟಲ್ ಒಪ್ಪಂದ, ಅಗ್ರಿಮೆಂಟ್‍ಗೆ ಇ-ಸ್ಟಾಂಪ್ ಪೇಪರ್ (e-Stamp Paper) ಗಾಗಿ ಇನ್ನು ಕೋರ್ಟ್ ಅಥವಾ ನೋಟರಿ ಕಚೇರಿ ಮೆಟ್ಟಿಲು ಏರಬೇಕಾಗಿಲ್ಲ, ಆನ್‌ಲೈನಲ್ಲೇ ಎಲ್ಲಾ ಸಿದ್ಧ.

- ಇ-ಸ್ಟಾಂಪ್ ಪೇಪರ್ ಬಳಸೋದು ಸಂಪೂರ್ಣ ಲೀಗಲ್ ಹಾಗೂ ಸುರಕ್ಷಿತ
- ಆನ್‌ಲೈನ್‌ನಲ್ಲಿ ಅಫಿಡವಿಟ್, ಅಗ್ರಿಮೆಂಟ್ ಸಿದ್ಧಪಡಿಸಬಹುದಾದ ಯುಗ
- ಆನ್‌ಲೈನಲ್ಲೇ ಸರಳವಾಗಿ ಡಾಕ್ಯುಮೆಂಟ್ ರೆಡಿ ಮಾಡಬಹುದು
e-Stamp Paper Online : ಈಗ ನಿಮಗೆ ಅಫಿಡವಿಟ್ (affidavit), ರೆಂಟಲ್ ಅಗ್ರಿಮೆಂಟ್ (rental agreement) ಅಥವಾ ಇತರ ಕಾನೂನು ದಾಖಲೆಗಳನ್ನು ತಯಾರಿಸಬೇಕಿದೆ ಅಂದರೆ, ಕೋರ್ಟ್, ಕಚೇರಿ ಹೋಗೋ ಅಗತ್ಯವೇ ಇಲ್ಲ.
ಹೌದು, ಡಿಜಿಟಲ್ ಇಂಡಿಯಾ (Digital India) ಅಭಿಯಾನದ ಭಾಗವಾಗಿ ಇ-ಸ್ಟಾಂಪ್ ಪೇಪರ್ (e-Stamp paper) ಬಳಸಿ ಎಲ್ಲವೂ ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲೇ ಮುಗಿಸಬಹುದು.
ಇದನ್ನೂ ಓದಿ: ಲೋನ್ ಪಡೆದ ವ್ಯಕ್ತಿ ಸತ್ತರೆ ಇಎಂಐ ಯಾರು ಕಟ್ಟಬೇಕು? ಹೊಸ ರೂಲ್ಸ್
shcilestamp.com ಅಥವಾ ಯಾವುದೇ ರಾಜ್ಯ ಸರ್ಕಾರದ ಅಧಿಕೃತ ಇ-ಸ್ಟಾಂಪ್ ಪೋರ್ಟಲ್‌ಗೆ ಹೋಗಿ ರಾಜ್ಯವನ್ನು ಆಯ್ಕೆಮಾಡಿ. ಪ್ರತಿಯೊಂದು ರಾಜ್ಯಕ್ಕೂ ಸ್ಟಾಂಪ್ ಡ್ಯೂಟಿ (Stamp Duty) ಬದಲಾಗುತ್ತದೆ. ಭಾಷೆ ಆಯ್ಕೆ ಮಾಡಿದ ನಂತರ, ‘Generate e-Stamp Certificate’ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಹೆಸರು, ವಿಳಾಸ, ಡಾಕ್ಯುಮೆಂಟ್ ಪ್ರಕಾರ (ಅಫಿಡವಿಟ್, ಅಗ್ರಿಮೆಂಟ್) ಮತ್ತು ಉದ್ದೇಶ ದಾಖಲಿಸಿ.
ಆನಂತರ ನೀವು UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ. ಪಾವತಿ ಯಶಸ್ವಿಯಾದ ನಂತರ, ನಿಮ್ಮ ಇ-ಸ್ಟಾಂಪ್ ಪೇಪರ್ PDF ರೂಪದಲ್ಲಿ ಡೌನ್‌ಲೋಡ್ ಆಗುತ್ತದೆ. ನಂತರ ನಿಮ್ಮ ಡಾಕ್ಯುಮೆಂಟ್ ಅನ್ನು Word ಅಥವಾ PDF ಮೂಲಕ ತಯಾರಿಸಿ, ಈ e-stamp ಗೆ ಲಗತ್ತಿಸಿ. ಇಚ್ಛೆಯಿದ್ದರೆ ನೋಟರೈಸ್ ಮಾಡಿಸಬಹುದು.
ಇದನ್ನೂ ಓದಿ: 580 ಕಿಮೀ ರೆಂಜ್, ಹೊಸ ಎಲೆಕ್ಟ್ರಿಕ್ ಕಾರು! ಮಾರುಕಟ್ಟೆಯಲ್ಲಿ ಇದರದ್ದೇ ಮಾತು
ಇದು ನಕಲಿ ಸ್ಟಾಂಪ್‌ಗಳ ಬಳಕೆಯನ್ನು ತಡೆಯುತ್ತದೆ. ಇ-ಸ್ಟಾಂಪ್ ಡಾಕ್ಯುಮೆಂಟ್‌ಗಳು ಬ್ಯಾಂಕ್, ಕೋರ್ಟ್, ಲೀಜ್ ಒಪ್ಪಂದ, ಅಫಿಡವಿಟ್ ಮುಂತಾದ ಎಲ್ಲ ಕಾನೂನು ಅಗತ್ಯಗಳಿಗೆ ಮಾನ್ಯ. ಇದು ಕೇವಲ ಸಮಯ ಉಳಿಸುವುದಷ್ಟೇ ಅಲ್ಲ, ಸುರಕ್ಷಿತ ಪದ್ದತಿಯಾಗಿಯೂ ಪರಿಗಣಿಸಲಾಗಿದೆ.
ಇದನ್ನೂ ಓದಿ: ಶ್ರಾವಣ ಮಾಸದ ಡಿಮ್ಯಾಂಡ್ ನಡುವೆಯೂ ಚಿನ್ನದ ಬೆಲೆ ಭರ್ಜರಿ ಇಳಿಕೆ
ಒಂದು ಮುಖ್ಯವಾದ ಸೂಚನೆ: ಇ-ಸ್ಟಾಂಪ್ ಸೇವೆ ಪಡೆಯಲು ಅಧಿಕೃತ ಗವರ್ನ್ಮೆಂಟ್ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು. ಡಾಕ್ಯುಮೆಂಟ್ ಟೈಪ್ ಹಾಗೂ ಸ್ಟಾಂಪ್ ಮೌಲ್ಯ ಸರಿಯಾಗಿ ಆರಿಸಿಕೊಂಡು ಫಾರ್ಮ್ ನಿಖರವಾಗಿ ಭರ್ತಿ ಮಾಡಬೇಕು. ಪಾವತಿಗೆ ಸುರಕ್ಷಿತ ಗೇಟ್ವೇ ಮಾತ್ರ ಉಪಯೋಗಿಸಿ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Now Prepare Affidavits and Agreements Online with e-Stamp




