580 ಕಿಮೀ ರೆಂಜ್, ಹೊಸ ಎಲೆಕ್ಟ್ರಿಕ್ ಕಾರು! ಮಾರುಕಟ್ಟೆಯಲ್ಲಿ ಇದರದ್ದೇ ಮಾತು - MG Cyberster Electric Car
New Electric Car : ಕೇವಲ 3.2 ಸೆಕೆಂಡುಗಳಲ್ಲಿ 100 ಕಿಮೀ ವೇಗ, ಸಿಂಗಲ್ ಚಾರ್ಜ್‌ನಲ್ಲಿ 580 ಕಿಮೀ ರೇಂಜ್! MG ಕಂಪನಿಯಿಂದ ಭಾರತಕ್ಕೆ ಹೊಸ ಎಲೆಕ್ಟ್ರಿಕ್ ಕಾರು ಲಾಂಚ್ ಆಗಿದೆ.

- MG ಸೈಬರ್‌ಸ್ಟರ್ ಹೊಸ ಎಲೆಕ್ಟ್ರಿಕ್ ಕಾರು, 580 ಕಿಮೀ ಮೈಲೆಜ್
- ಕೇವಲ 3.2 ಸೆಕೆಂಡುಗಳಲ್ಲಿ 0-100 ಕಿಮೀ ವೇಗ, 510hp ಪವರ್
- ಬೆಂಗಳೂರಿನಲ್ಲಿ (Bengaluru) ಬುಕ್ಕಿಂಗ್ ಆರಂಭ, ಬೆಲೆ ₹72.49 ಲಕ್ಷ
ಸ್ಪೀಡ್, ಸ್ಟೈಲ್, ಟೆಕ್ – ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು
New Electric Car Launch : MG ಕಂಪನಿಯ ಇತ್ತೀಚಿನ ಲಾಂಚ್ – ಸೈಬರ್‌ಸ್ಟರ್ (Cyberster) ಎಲೆಕ್ಟ್ರಿಕ್ ಕಾರು ಭಾರತೀಯ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಗೆ ಹೊಸ ಹೈಪನ್ನು ತಂದಿದೆ. ಜುಲೈ 25, 2025 ರಂದು ಲಾಂಚ್ ಆಗಿರುವ ಈ ಕಾರು ಈಗಾಗಲೇ ಬುಕ್ಕಿಂಗ್ ಪ್ರಾರಂಭಿಸಿದೆ.
ಕೇವಲ ₹51,000 ಟೋಕನ್ ಮೊತ್ತದಲ್ಲಿ ನೀವು ಮುಂಬೈ (Mumbai), ಬೆಂಗಳೂರು (Bengaluru), ದೆಹಲಿ (Delhi) ಸೇರಿ 13 MG ಡೀಲರ್‌ಶಿಪ್‌ಗಳಲ್ಲಿ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.
ಇದನ್ನೂ ಓದಿ: ಶ್ರಾವಣ ಮಾಸದ ಡಿಮ್ಯಾಂಡ್ ನಡುವೆಯೂ ಚಿನ್ನದ ಬೆಲೆ ಭರ್ಜರಿ ಇಳಿಕೆ
ಈ ಕಾರು 77kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಕೇವಲ 110mm ದಪ್ಪವಾಗಿದ್ದು, ಎರಡು ಆಯಿಲ್-ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್‌ಗಳ ಮೂಲಕ 510hp ಶಕ್ತಿ ಮತ್ತು 725Nm ಟಾರ್ಕ್‌ನ್ನು ಉತ್ಪತ್ತಿ ಮಾಡುತ್ತದೆ. ಇದು ಕೇವಲ 3.2 ಸೆಕೆಂಡುಗಳಲ್ಲಿ 0-100km/h ವೇಗ ತಲುಪುತ್ತದೆ. MG ಕಾರು ಸಿಂಗಲ್ ಚಾರ್ಜ್‌ನಲ್ಲಿ 580 ಕಿಲೋಮೀಟರ್ ರೆಂಜ್ ನೀಡುತ್ತದೆ ಎಂದು ಕಂಪನಿ ಹೇಳುತ್ತಿದೆ.
ಕಾರಿನೊಳಗಿನ ವಿನ್ಯಾಸ futuristic ಫೀಲ್ ಕೊಡುತ್ತದೆ. ಮೂರು ಸ್ಕ್ರೀನ್‌ಗಳು, ಡ್ರೈವರ್ ಕಡೆ ಇನ್‌ಫೋಟೈನ್‌ಮೆಂಟ್ ಡಿಸ್‌ಪ್ಲೇ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ (Apple CarPlay)/ಆಂಡ್ರಾಯ್ಡ್ ಆಟೋ (Android Auto), ಇನ್-ಬಿಲ್ಟ್ 5G, ಡ್ಯೂಯಲ್ ಕ್ಲೈಮೆಟ್ ಕಂಟ್ರೋಲ್, ಬೋಸ್ ಆಡಿಯೋ ಸಿಸ್ಟಮ್ – ಎಲ್ಲವನ್ನೂ ಒಳಗೊಂಡಿದೆ. ಇದರ ಜೊತೆಗೆ Qualcomm Snapdragon 8155 ಚಿಪ್, ಲೆವೆಲ್-2 ADAS, ರೀಜೆನರೇಟಿವ್ ಬ್ರೇಕಿಂಗ್, ವೆಂಟಿಲೇಟೆಡ್ ಸೀಟುಗಳು ಕೂಡ ಸೇರಿವೆ.
ಇದನ್ನೂ ಓದಿ: ಇನ್ಮುಂದೆ ಉದ್ಯೋಗದಲ್ಲಿ ಇದ್ರೆ ಮಾತ್ರ ಪರ್ಸನಲ್ ಲೋನ್ ಸಿಗೋದು! ಬಿಗ್ ಅಪ್ಡೇಟ್
2023ರ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನಲ್ಲಿ ಪ್ರದರ್ಶಿತವಾದ ಈ ಕಾರು 2017 ರ E-Motion Coupe ಕಾನ್ಸೆಪ್ಟ್ ಆಧಾರದ ಮೇಲೆ ನಿರ್ಮಿತವಾಗಿದೆ. LED ಡಿಆರ್‌ಎಲ್‌ಗಳೊಂದಿಗೆ ಹೆಡ್‌ಲೈಟ್‌ಗಳು, ಶಾರ್ಪ್ ಕಟ್ಸ್ ಇರುವ ಬೋನಟ್, ಬಾಣದ ಆಕಾರದ ಟೈಲ್ ಲೈಟ್, ಸ್ಪ್ಲಿಟ್ ಡಿಫ್ಯೂಸರ್, ಎಲ್ಲವೂ ಸೇರಿ ಸ್ಪೋರ್ಟ್ಸ್ ಲುಕ್ ಕೊಡುತ್ತದೆ. 19-20 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಮತ್ತು ಸ್ಪೆಷಲ್ ಡೋರ್ಸ್ ಇದರ ವಿಶೇಷತೆ.
ಇದನ್ನೂ ಓದಿ: ₹2000 ರೂಪಾಯಿಗಿಂತ ಹೆಚ್ಚು PhonePe ಮಾಡಿದ್ರೆ ಟ್ಯಾಕ್ಸ್! ಬಿಗ್ ನ್ಯೂಸ್
ಸೈಬರ್‌ಸ್ಟರ್ ಕಾರು MG Select ಸಬ್ ಬ್ರ್ಯಾಂಡ್‌ನ ಎರಡನೇ ಪ್ರಾಡಕ್ಟ್ ಆಗಿದ್ದು, ಮೊದಲದು MG M9. ಭಾರತದಲ್ಲಿ ಮಾರುಕಟ್ಟೆಗೆ ಈಗೇನು ಬರಲು ತಯಾರಿ ನಡೆಸುತ್ತಿರುವ Tesla ಸ್ಪರ್ಧೆಯ ಕಾರುಗಳಲ್ಲಿ ಇದೊಂದು.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
MG Cyberster Electric Car Launched with 580km Range




