ಖಾತೆಯಿಂದ ಖಾತೆಗೆ ಹಣ ಟ್ರಾನ್ಸ್ಪರ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ಬದಲಾವಣೆ
ಹಣ ವರ್ಗಾವಣೆ ಮಾಡಬೇಕಿದ್ದರೆ ಆತನ ಹೆಸರು, ಖಾತೆಯ ವಿವರ (account details) ಐ ಎಫ್ ಎಸ್ ಸಿ ಕೋಡ್ (IFSC code) ಮೊದಲಾದವುಗಳನ್ನು ನಮೂದಿಸಿ ನಂತರ ಹಣ ವರ್ಗಾವಣೆ ಮಾಡಬೇಕಿತ್ತು
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನ ಗವರ್ನರ್ ಶಕ್ತಿ ಕಾಂತ್ ದಾಸ್ ಅವರು ಆರ್ ಟಿ ಜಿ ಎಸ್ (real time gross settlement), ಎನ್ ಈ ಎಫ್ ಟಿ ವಹಿವಾಟಿಕೆ ಸಂಬಂಧಪಟ್ಟ ಹಾಗೆ ಹೊಸ ನಿಯಮವನ್ನು ಹೊರಡಿಸಿದ್ದು ನೇರ ಹಣ ವರ್ಗಾವಣೆ ಮಾಡುವವರು ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು.
ಮುಂದಿನ ವಾರದಿಂದ ಅಥವಾ ನವೆಂಬರ್ 1ನೇ ತಾರೀಖಿನಿಂದ ಈ ನಿಯಮ ಅನ್ವಯವಾಗಲಿದೆ.
6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್; ಇಂದೇ ಅರ್ಜಿ ಸಲ್ಲಿಸಿ
ದಿನದ 24 ಗಂಟೆಗಳು ಆರ್ ಟಿ ಜಿ ಎಸ್ ಸೌಲಭ್ಯ!
ಆರ್ ಟಿ ಜಿ ಎಸ್ (RTGS) ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಶುಭ ಸುದ್ದಿಯನ್ನು ಆರ್ ಬಿ ಐ ನೀಡಿದೆ. ವರ್ಷದ 365 ದಿನವೂ, ದಿನದ 24 ಗಂಟೆಗಳು ಕೂಡ ಆರ್ಬಿಐ ಆರ್ ಟಿ ಜಿ ಎಸ್ ಸೇವೆಯನ್ನು ಒದಗಿಸುತ್ತದೆ.
ಆರ್ ಟಿ ಜಿ ಎಸ್ ದೊಡ್ಡ ಹಣ ವಹಿವಾಟಿಗೆ ಅನುಕೂಲವಾಗುವಂತಹ ವ್ಯವಸ್ಥೆ ಆಗಿದೆ, ಇದರಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಹಣಕಾಸು ವ್ಯವಹಾರ ಮಾಡುವಂತಿಲ್ಲ. ಆನ್ಲೈನ್ (online) ಹಾಗೂ ಬ್ಯಾಂಕ್ (Bank) ಶಾಖೆಗೆ ಹೋಗಿ ಆರ್ ಟಿ ಜಿ ಎಸ್ ಮಾಡಬಹುದು. ಬ್ಯಾಂಕ್ ಶಾಖೆಯಲ್ಲಿ ಈ ವ್ಯವಹಾರ ಮಾಡಿದ್ರೆ ಸ್ವಲ್ಪ ಪ್ರಮಾಣದಲ್ಲಿ ಶುಲ್ಕವನ್ನು (processing fee) ಪಾವತಿ ಮಾಡಬೇಕಾಗುತ್ತದೆ.
ಎನ್ಇ ಎಫ್ ಟಿ ರೂಲ್ಸ್!
ಕಳೆದ ವರ್ಷ ಎನ್ ಇ ಎಫ್ ಟಿ ( National electronic fund transfer) ನ್ನು ದಿನದ 24 ಗಂಟೆಗಳ ಕಾಲವೂ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಇದರ ಮೊಟ್ಟೆಗೆ ಚಿನ್ನದ ಬೆಲೆ; ಈ ಕಾಡು ಕೋಳಿ ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ
IMPS ಹಣ ವರ್ಗಾವಣೆ ಇನ್ನಷ್ಟು ಸುಲಭ!
ಐ ಎಂ ಪಿ ಎಸ್ ಹಣ ವರ್ಗಾವಣೆಯನ್ನು ಬ್ಯಾಂಕ್ ಇನ್ನಷ್ಟು ಸುಲಭಗೊಳಿಸಿದ್ದು ಇನ್ನು ಮುಂದೆ ಐದು ಲಕ್ಷ ರೂಪಾಯಿಗಳ ವರೆಗೆ ಫಲಾನುಭವಿಯ ವಿವರಗಳನ್ನು ನೀಡದೆ ಹಣ ವರ್ಗಾವಣೆ ಮಾಡಬಹುದು.
ಎನ್ ಪಿ ಸಿ ಐ (National payments corporation of India) ನಿಯಮಗಳಲ್ಲಿ ದೊಡ್ಡ ಬದಲಾವಣೆ ಆಗಿದ್ದು, ಇಂದಿನಂತೆ ಒಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬೇಕಿದ್ದರೆ ಆತನ ಹೆಸರು, ಖಾತೆಯ ವಿವರ (account details) ಐ ಎಫ್ ಎಸ್ ಸಿ ಕೋಡ್ (IFSC code) ಮೊದಲಾದವುಗಳನ್ನು ನಮೂದಿಸಿ ನಂತರ ಹಣ ವರ್ಗಾವಣೆ ಮಾಡಬೇಕಿತ್ತು, ಆದರೆ ಈಗ ಆ ಕಷ್ಟ ಇಲ್ಲ 5,00, 000 ಗಳ ವರೆಗೆ ಫಲಾನುಭವಿಗಳ ಯಾವುದೇ ವಿವರಣೆ ಇಲ್ಲದೆ ಹಣ ವರ್ಗಾವಣೆ ಮಾಡಬಹುದಾಗಿದೆ.
ಪೋಸ್ಟ್ ಆಫೀಸ್ ಸ್ಕೀಮ್! ಕೇವಲ ₹5000 ಹೂಡಿಕೆಗೆ ಕೆಲವೇ ದಿನಗಳಲ್ಲಿ ಸಿಗುತ್ತೆ ₹8.5 ಲಕ್ಷ ರೂಪಾಯಿ
ಇದಕ್ಕಾಗಿ ಫಲಾನುಭವಿಯ ಖಾತೆಯಲ್ಲಿ ಇರುವ ಹೆಸರನ್ನು ಮಾತ್ರ ಪರಿಶೀಲಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಮೊಬೈಲ್ ನಂಬರ್ (mobile number) ಇದ್ರೆ ಸಾಕು ಆತನಿಗೆ ಈಗ ಹಣವನ್ನು ಸುಲಭವಾಗಿ ನೇರವಾಗಿ ವರ್ಗಾವಣೆ ಮಾಡಬಹುದಾಗಿದೆ.
Big Update for Account-to-Account Money Transfer