ಆಸ್ತಿ ಖರೀದಿ ಮಾಡೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಈ ಸೇವೆ

E - stamp paper : ಸ್ಟ್ಯಾಂಪ್ ಪೇಪರ್ ಜನರಿಗೆ ಬೇಕಾದ ಸಮಯದಲ್ಲಿ ಸಿಗುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಇದೀಗ ಈ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ.

ರಾಜ್ಯ ಸರ್ಕಾರ ಆಸ್ತಿ ನೋಂದಣಿಗೆ (property registration) ಸಂಬಂಧಪಟ್ಟ ಹಾಗೆ ಬೇರೆ ಬೇರೆ ರೀತಿಯ ಹೊಸ ಹೊಸ ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಅದರಲ್ಲೂ ಜನರಿಗೆ ಹೆಚ್ಚು ಅನುಕೂಲವಾಗುವಂತೆ, ಪಾರದರ್ಶಕತೆಯಿಂದ ಕಾರ್ಯ ನಡೆಯುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಇನ್ನು ಯಾವುದೇ ಆಸ್ತಿ ಖರೀದಿ ಮಾಡುದಿದ್ದರೆ ಅಥವಾ ಬಾಡಿಗೆ ಮನೆ ವಾಸ ಮಾಡುವುದಿದ್ದರೆ ಅದರಲ್ಲಿ ಒಪ್ಪಂದ ಮಾಡಿಕೊಳ್ಳುವುದು ಸಹಜ. ಈ ಒಪ್ಪಂದ ಮಾಡಿಕೊಳ್ಳುವುದಕ್ಕೆ ಈ ಸ್ಟ್ಯಾಂಪ್ ಪೇಪರ್ (E – stamp paper) ಬೇಕೇ ಬೇಕು.

ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ!

ಆಸ್ತಿ ಖರೀದಿ ಮಾಡೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಈ ಸೇವೆ - Kannada News

ಆದರೆ ಸರ್ವರ್ ಸಮಸ್ಯೆಯಿಂದಾಗಿ ಅಥವಾ ಇತರ ಕಾರಣಗಳಿಗೆ ಸುಲಭವಾಗಿ ಈ ಸ್ಟ್ಯಾಂಪ್ ಪೇಪರ್ ಜನರಿಗೆ ಬೇಕಾದ ಸಮಯದಲ್ಲಿ ಸಿಗುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಇದೀಗ ಈ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ.

ಮನೆ ಬಾಗಿಲಿಗೆ ಬರಲಿದೆ e stamp paper!

ನೀವು ಯಾವುದಾದರೂ ಒಂದು ಬಾಡಿಗೆ ಮನೆಗೆ ಹೋಗುವುದಿದ್ದರೆ ಅಥವಾ ಲೀಸ್ (ಭೋಗ್ಯಕ್ಕೆ) ಮನೆ ತೆಗೆದುಕೊಳ್ಳುತ್ತಿದ್ದರೆ ಆಗ ಒಪ್ಪಂದ ಮಾಡಿಕೊಳ್ಳಲು ಬಳಸುವ ಈ ಸ್ಟಾಂಪ್ ಪೇಪರ್ ಅನ್ನು ನೀವು ಇನ್ನು ಮುಂದೆ ಸುಲಭವಾಗಿ ಪಡೆಯಬಹುದು.

ಇತ್ತೀಚಿಗೆ ನಾವು ಡಿಜಿಟಲಿಕರಣದತ್ತ ಮುಖ ಮಾಡಿದ್ದೇವೆ. ಎಲ್ಲಾ ಕೆಲಸಗಳು ಕೂಡ ಆನ್ಲೈನ್ (online) ನಲ್ಲಿಯೇ ನಡೆಯುತ್ತವೆ. ಯಾವುದೇ ವಸ್ತುವನ್ನು ಖರೀದಿಸುವುದಿದ್ದರೂ ಕೂಡ ಅಂಗಡಿಗೆ ತೆರಳುವ ಅಗತ್ಯವಿಲ್ಲ ಮನೆಯಲ್ಲಿಯೇ ಕುಳಿತು ಕ್ಷಣಮಾತ್ರದಲ್ಲಿ ಆರ್ಡರ್ ಮಾಡಿ ಬೇಕಿರುವ ವಸ್ತುವನ್ನು ತರಿಸಿಕೊಳ್ಳಬಹುದು. ಇಷ್ಟೆಲ್ಲಾ ಮಾಡುವಾಗ ಸರ್ಕಾರಿ ಸೇವೆಗಳು ಆನ್ಲೈನ್ ನಲ್ಲಿ ಲಭ್ಯ ಇರುವುದಿಲ್ಲವೇ?

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇದ್ರೆ ಏನಾಗುತ್ತೆ? ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತಾ?

E - stamp paperಖಂಡಿತ ಇದೆ. ನೀವು ಆನ್ಲೈನ್ ಮೂಲಕವೇ e stamp paper ನಂತಹ ಕಾನೂನು ಕರಡು ಪ್ರತಿಯನ್ನು ಕೂಡ ತರಿಸಿಕೊಳ್ಳಬಹುದು. ಅದೇ ರೀತಿ ಆನ್ಲೈನ್ ನಲ್ಲಿ ಇನ್ನು ಮುಂದೆ ಈ ಸೌಲಭ್ಯವನ್ನು ಕೂಡ ಪಡೆಯಬಹುದು. ಅದುವೇ ಈ ಸ್ಟ್ಯಾಂಪ್ ಪೇಪರ್ ಅನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳುವುದು.

ಮುಂದೆ ಯಾವುದೇ ಲೀಗಲ್ ಕೆಲಸಗಳಿಗೆ ಬೇಕಾಗಿರುವ ಕಾನೂನು ಕರಡು ಪ್ರತಿ ಅಥವಾ ಈ ಸ್ಟಾಂಪ್ ಪೇಪರ್ ಅನ್ನು ಪಡೆದುಕೊಳ್ಳಲು ಯಾವುದೇ ಸರ್ಕಾರಿ ಕಚೇರಿಗೆ ಅಲೆದಾಡಬೇಕಿಲ್ಲ.

ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ

ಆನ್ಲೈನ್ ಮೂಲಕವೇ ತರಿಸಿಕೊಳ್ಳಬಹುದು ಇದಕ್ಕಾಗಿ ನೀವು legalkarnataka.com ವೆಬ್ಸೈಟ್ನಲ್ಲಿ ದಿನದ 24 ಗಂಟೆಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಈ ಸ್ಟಾಂಪ್ ಪೇಪರ್ ಹಾಗೂ ಕಾನೂನು ದಾಖಲೆಗಳ ಕರಡು ಪ್ರತಿಯನ್ನು ತರಿಸಿಕೊಳ್ಳಲು ಅವಕಾಶವಿದೆ. ಇನ್ಮುಂದೆ ಯಾವುದೇ ಕಚೇರಿಗೂ ಹೋಗದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಈ ಸೇವೆಗಳನ್ನು ಕೂಡ ಪಡೆದುಕೊಳ್ಳಬಹುದು.

Big update for property buyers, This service is now at your doorstep

Follow us On

FaceBook Google News

Big update for property buyers, This service is now at your doorstep