ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ!

ಆಧಾರ್ ಕಾರ್ಡ್ (Aadhaar card) ಪ್ರಮುಖ ದಾಖಲೆ ಆಗಿದ್ದು, ಆಧಾರ್ ಕಾರ್ಡ್ ಇಲ್ಲದೆ ನೀವು ಯಾವುದೇ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆಧಾರ್ ಕಾರ್ಡ್ (Aadhaar card) ಪ್ರಮುಖ ದಾಖಲೆ ಆಗಿದ್ದು, ಆಧಾರ್ ಕಾರ್ಡ್ ಇಲ್ಲದೆ ನೀವು ಯಾವುದೇ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಸರ್ಕಾರದ ಯೋಜನೆಗಳೆ ಆಗಿರಬಹುದು ಅಥವಾ ನೀವು ಯಾವುದೇ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸುವುದೇ ಆಗಿರಬಹುದು. ಎಲ್ಲದಕ್ಕೂ ಆಧಾರ್ ಕಾರ್ಡ್ ಮೂಲವಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆ ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ವಿತರಿಸುತ್ತದೆ.

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇದ್ರೆ ಏನಾಗುತ್ತೆ? ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತಾ?

ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ! - Kannada News

ನೀವು ಒಂದು ಆಸ್ತಿ ಖರೀದಿ (Property Purchase) ಮಾಡುವುದಿದ್ದರೆ ಅಥವಾ ಮ್ಯೂಚುವಲ್ ಫಂಡ್ (Mutual Fund) ಹಾಗೂ ಇತರ ಉಳಿತಾಯ ಸ್ಕೀಮ್ಗಳಲ್ಲಿ ಹೂಡಿಕೆ ಮಾಡುವುದಿದ್ದರೆ, ಅಷ್ಟೇ ಯಾಕೆ ಮಕ್ಕಳನ್ನು ಶಾಲೆಗೆ ಸೇರಿಸಲು, driving licence ಪಡೆದುಕೊಳ್ಳಲು, ವಾಹನ ಖರೀದಿಸಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ submit ಮಾಡಲೇಬೇಕು. ಹೀಗಾಗಿ ಆಧಾರ್ ಕಾರ್ಡ್ ಎಷ್ಟು ಪ್ರಮುಖ ದಾಖಲೆಯಾಗಿದೆ ಎನ್ನುವುದು ನಿಮಗೆ ಅರ್ಥವಾಗಿರಬಹುದು.

ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುವ ಗುರುತಿನ ಪುರಾವೆ ಆಗಿರುವ ಹಿನ್ನೆಲೆಯಲ್ಲಿ ಇದನ್ನ ಬಹಳ ಜೋಪಾನವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕೆಲಸ. ಯಾಕೆಂದರೆ ಆಧಾರ್ ಕಾರ್ಡ್ ಕಳೆದು ಹೋದರೆ ನಾವು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ.

ಅಷ್ಟೇ ಅಲ್ಲದೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆಯವರು ಬಳಕೆ ಮಾಡಿಕೊಂಡು ವಂಚನೆ ಮಾಡುವ ಪರಿಸ್ಥಿತಿ ಕೂಡ ಎದುರಾಗಬಹುದು. ಹಾಗಾದ್ರೆ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಅದನ್ನ ಮತ್ತೆ ಪಡೆದುಕೊಳ್ಳಲು ಸಾಧ್ಯವೇ ? ಹೌದು, ನೀವು ನಿಮ್ಮ ನಕಲಿ ಆಧಾರ್ ಪ್ರತಿಯನ್ನು ಆನ್ಲೈನ್ (online) ಮೂಲಕವೇ ಸಾಧ್ಯವಿದೆ ಹೇಗೆ ಎಂಬುದನ್ನು ನೋಡೋಣ.

ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ

Aadhaar Cardಆಧಾರ್ ಕಾರ್ಡ್ ನಕಲು ಪ್ರತಿಯನ್ನು ಪಡೆಯುವುದು ಹೇಗೆ? (How to get Aadhar duplicate print)

ನೀವು ನಕಲಿ ಆಧಾರ್ ಕಾರ್ಡ್ ಪಡೆದುಕೊಳ್ಳಲು ಮತ್ತೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಒದಗಿಸುವ ಅಗತ್ಯ ಇಲ್ಲ. ನಿಮ್ಮ ಬಳಿ ಇರುವ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಹಳೆಯ ಆಧಾರ್ ಕಾರ್ಡ್ ಅನ್ನ ಮರು ಮುದ್ರಣ ಮಾಡಿಕೊಳ್ಳಬಹುದು. ಇದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

* https://uidai.gov.in/ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

*My adhaar ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

* ಇಲ್ಲಿ ನಿಮಗೆ order Aadhar reprint ಎನ್ನುವ ಆಯ್ಕೆಯೂ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ಈ ಯೋಜನೆಯಲ್ಲಿ ಸಿಗುತ್ತೆ ಉಚಿತ ಹೊಲಿಗೆ ಯಂತ್ರ ಹಾಗೂ ಕಡಿಮೆ ಬಡ್ಡಿಗೆ ಸಾಲ

*ಈಗ ನೀವು 16 ಸಂಖ್ಯೆಯ ವರ್ಚುಯಲ್ ಐಡಿ ಹಾಗೂ ಆಧಾರ್ ಸಂಖ್ಯೆ ಜೊತೆಗೆ ಪರದೆಯ ಮೇಲೆ ಕಾಣಿಸುವ ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಬೇಕು.

*ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಇಲ್ಲಿ ನಮೂದಿಸಿ.

*ಈಗ ನೀವು ಸಂಬಂಧಿತ ಶುಲ್ಕವನ್ನು ಪಾವತಿಸಿ ಮರು ಮುದ್ರಣಕ್ಕೆ ಅನುಮತಿ ನೀಡಬಹುದು. ನಿಮ್ಮ ಅನುಮತಿ ಸಿಕ್ಕ ನಂತರ ನಿಮಗೆ ಒಂದು ಸೇವಾ ಸಂಖ್ಯೆಯನ್ನು ನೀಡಲಾಗುತ್ತದೆ. ಜೊತೆಗೆ ದೃಢೀಕರಣ ಸಂದೇಶವನ್ನು ನಿಮ್ಮ ಮೊಬೈಲ್ ಗೆ ಕಳುಹಿಸಲಾಗುತ್ತದೆ. 15 ದಿನಗಳಲ್ಲಿ ನಿಮ್ಮ ಆಧಾರ್ ಮರು ಮುದ್ರಣಗೊಳ್ಳುತ್ತದೆ ಹಾಗೂ ಅದನ್ನು ನಿಮ್ಮ ಮನೆಗೆ ಕಳುಹಿಸಲಾಗುವುದು.

ನಿಮಗೆ ಆಧಾರ್ ಕಾರ್ಡ್ ಬರುವವರೆಗೂ ಆನ್ಲೈನ್ ನಲ್ಲಿ ಈ ಆಧಾರ್ ಅನ್ನು ಡೌನ್ಲೋಡ್ ಮಾಡಿ ಬಳಕೆ ಮಾಡಬಹುದು.

ನೀವು ಯು ಐ ಡಿ ಎ ಐ 1947 ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್ ಸ್ಥಿತಿ ಚೆಕ್ ಮಾಡಬಹುದು ಅಥವಾ ಅಧಿಕೃತ ವೆಬ್ಸೈಟ್ಗೆ ತೆರಳಿ ಮೈ ಆಧಾರ್ ಸೆಕ್ಷನ್ ನಲ್ಲಿ ಆಧಾರ್ ಸ್ಟೇಟಸ್ ಮಾಡಲು ಅವಕಾಶವಿದೆ.

ಕ್ರೆಡಿಟ್ ಕಾರ್ಡ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಇಲ್ಲವಾದರೆ ನಷ್ಟ ಗ್ಯಾರಂಟಿ!

Lost Aadhaar Card, get Duplicate Aadhaar Card like this

Follow us On

FaceBook Google News

Lost Aadhaar Card, get Duplicate Aadhaar Card like this