ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇದ್ರೆ ಏನಾಗುತ್ತೆ? ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತಾ?
Bank Account : ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಿದ್ದರೆ ಅದು ನಿಮಗೆ ಹೆಚ್ಚು ಲಾಭದಾಯಕವಲ್ಲ.
Bank Account : ಇಂದು ಉಳಿತಾಯ ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿರುವುದು ಸರ್ವೇ ಸಾಮಾನ್ಯ. ಕೇವಲ ನಗರ ಭಾಗದಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿ ವಾಸಿಸುವವರು ಕೂಡ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ.
ಉಳಿತಾಯ ಖಾತೆ ನಮ್ಮ ಹೆಸರಿನಲ್ಲಿ ಇದ್ದರೆ ನಾವು ಹಣಕಾಸಿನ ವ್ಯವಹಾರವನ್ನು ಬ್ಯಾಂಕ್ ಮೂಲಕ ನಡೆಸುವುದು ಸುಲಭವಾಗುತ್ತದೆ. ಹಣವನ್ನು ಉಳಿತಾಯ ಖಾತೆಯಲ್ಲಿ ಡಿಪಾಸಿಟ್ (deposit) ಮಾಡಿದ್ರೆ ಅದಕ್ಕೆ ಬಡ್ಡಿಯನ್ನು ಕೂಡ ಬ್ಯಾಂಕ್ (Bank) ನೀಡುತ್ತದೆ. ಮನೆಯಲ್ಲಿ ಸುಖಾ ಸುಮ್ಮನೆ ಹಣವನ್ನು ಇಟ್ಟುಕೊಳ್ಳುವ ಬದಲು ನೀವು ಉಳಿತಾಯ ಖಾತೆ (savings account) ಯಲ್ಲಿ ಹಣ ಇಟ್ಟು ಬಡ್ಡಿಯನ್ನು ಪಡೆಯಬಹುದು.
ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ
ಉಳಿತಾಯ ಖಾತೆಯನ್ನು ಹೊಂದಿದ ಮೇಲೆ ಅದು ಆದಾಯ ತೆರಿಗೆ ಅಡಿಯಲ್ಲಿ ಬರುತ್ತದೆಯೋ ಇಲ್ಲವೋ ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ. ಯಾಕಂದರೆ ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣವನ್ನು ಹೊಂದಬಹುದು ಎನ್ನುವುದಕ್ಕೆ ಕೆಲವು ನಿಯಮಗಳು ಇವೆ.
ನೀವು ಆದಾಯ ತೆರಿಗೆ ಇಲಾಖೆ (Income tax department) ಯ ಅಡಿಯಲ್ಲಿ ಬರುವವರಾಗಿದ್ದರೆ ನಿಮ್ಮ ಖಾತೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣು ಇದ್ದೇ ಇರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಉಳಿತಾಯ ಖಾತೆ ಹೊಂದಿರುವುದಕ್ಕೆ ಮಿತಿ ಇದೆಯೇ?
ಇನ್ನು ಒಬ್ಬ ವ್ಯಕ್ತಿ ಎಷ್ಟು ಉಳಿತಾಯ ಖಾತೆಯನ್ನು ಹೊಂದಿರಬಹುದು ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಎಷ್ಟು ಬೇಕಾದರೂ ಉಳಿತಾಯ ಖಾತೆಯನ್ನು ಆರಂಭಿಸಬಹುದು. ಯಾವುದೇ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ತೆರೆಯಬಹುದು. ಆದರೆ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಿದ್ದರೆ ಅದು ನಿಮಗೆ ಹೆಚ್ಚು ಲಾಭದಾಯಕವಲ್ಲ.
ಯಾಕಂದ್ರೆ ನೀವು ಹಣಕಾಸಿನ ವಹಿವಾಟು ಮಾಡಿದರೂ ಮಾಡದೆ ಇದ್ದರೂ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಯಾವ ಒಂದು ಖಾತೆಯಲ್ಲಿ ನೀವು ಸುಲಭವಾಗಿ ಹಣಕಾಸಿನ ವ್ಯವಹಾರ ಮಾಡಬಹುದು ಅಂತಹ ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಸಾಕು.
ಈ ಯೋಜನೆಯಲ್ಲಿ ಸಿಗುತ್ತೆ ಉಚಿತ ಹೊಲಿಗೆ ಯಂತ್ರ ಹಾಗೂ ಕಡಿಮೆ ಬಡ್ಡಿಗೆ ಸಾಲ
ಉಳಿತಾಯ ಖಾತೆಯಲ್ಲಿ ಹಣದ ಮಿತಿ!
ಸದ್ಯ ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಹಣವನ್ನು ಹೊಂದಿರಬೇಕು ಎನ್ನುವುದಕ್ಕೆ ಯಾವ ಮಿತಿಯು ಇಲ್ಲ. ಆದರೆ ವಾರ್ಷಿಕವಾಗಿ 10 ಲಕ್ಷ ರೂಪಾಯಿಗಳಿಗಿಂತ ಹಣಕಾಸಿನ ವಹಿವಾಟು ನಡೆಸಿದರೆ ಆಗ ನೀವು ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ಬರುತ್ತೀರಿ ಹಾಗೂ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಇಲ್ಲವಾದರೆ ನಷ್ಟ ಗ್ಯಾರಂಟಿ!
ಉಳಿತಾಯ ಖಾತೆಯನ್ನು ಹೊಂದಿದ್ದು 10,000 ಕ್ಕಿಂತ ಹೆಚ್ಚಿನ ಬಡ್ಡಿ ಪಡೆದುಕೊಂಡರೆ ಆಗ ಆ ಬಡ್ಡಿ ದರದ ಮೇಲೆ ಆದಾಯ ತೆರಿಗೆ ಪಾವತಿಸಬೇಕು. ಆದರೆ ಉಳಿತಾಯ ಖಾತೆಯಿಂದ ಇಷ್ಟು ದೊಡ್ಡ ಮೊತ್ತದ ಬಡ್ಡಿ ಸಿಗುವುದು ದೂರದ ಮಾತು ಬಿಡಿ!
ಒಟ್ಟಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ನಡೆಸುದಿದ್ದರೆ ನಿಮ್ಮ ಬಳಿ ಇರುವ ಹಣಕ್ಕೆ ಸರಿಯಾದ ಕಾನೂನಾತ್ಮಕ ದಾಖಲೆಗಳನ್ನು ಹೊಂದಿರಬೇಕು ನಿಮ್ಮ ಆದಾಯದ ಮೂಲ ನಿಮಗೆ ಆಧಾರ ಸಮೇತವಾಗಿರಬೇಕು. ನೀವು ಈ ಪುರಾವೆಯನ್ನು ಕೊಟ್ಟರೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಸಮಸ್ಯೆ ಎದುರಿಸಬೇಕಾಗಿಲ್ಲ.
ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ
If there is more money in the bank account, will the income tax notice come