Gas Cylinder Subsidy : ನಮ್ಮ ದೇಶದಲ್ಲಿ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಸಾಕಷ್ಟು ಸರ್ಕಾರಿ ಯೋಜನೆಗಳ ಪ್ರಯೋಜನಗಳು (government schemes) ಸಿಗುತ್ತವೆ.
ಬಿಪಿಎಲ್ ಕಾರ್ಡನ್ನು ಬಡತನ ರೇಖೆಗಿಂತ (below poverty line) ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲು ವಿತರಣೆ ಮಾಡಲಾಗಿದೆ, ಉಚಿತ ಪಡಿತರ ನೀಡುವುದರಿಂದ ಹಿಡಿದು ಸಬ್ಸಿಡಿ ದರದಲ್ಲಿ ವಸ್ತುಗಳನ್ನು ವಿತರಣೆ ಮಾಡುವವರಿಗೆ ಹಲವು ಪ್ರಯೋಜನಗಳನ್ನು ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ನೀಡಲಾಗುತ್ತದೆ.
ಅವುಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅತಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ (gas cylinder) ವಿತರಣೆ ಮಾಡುವ ಉಜ್ವಲ ಯೋಜನೆ ಕೂಡ ಒಂದು!
ಸಿಹಿ ಸುದ್ದಿ! ಈ ಸರ್ಕಾರದ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಸಿಗಲಿದೆ 15 ಲಕ್ಷ ಸಾಲ
ಉಜ್ವಲ ಯೋಜನೆ; 603 ರೂಪಾಯಿಗೆ ಗ್ಯಾಸ್ ಸಿಲಿಂಡರ್! (Subsidy for Ujjwala scheme)
ಎಲ್ಲರಿಗೂ ತಿಳಿದಿರುವಂತೆ ದೇಶಾದ್ಯಂತ ಇಂದು ಅದೆಷ್ಟೋ ಲಕ್ಷ ಕುಟುಂಬದ ಸದಸ್ಯರು ಸರ್ಕಾರದಿಂದ ಉಚಿತ ಗ್ಯಾಸ್ ಕನೆಕ್ಷನ್ (free LPG gas connection) ಹಾಗೂ ಸಬ್ಸಿಡಿ ದರದ ಸಿಲಿಂಡರ್ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿದೆ
ಕೆಲವು ಅಂಕಿ ಅಂಶಗಳ ಪ್ರಕಾರ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಸಾಮಾನ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ 200 ರೂಪಾಯಿಗಳ ಸಬ್ಸಿಡಿ ಸರ್ಕಾರ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಸಾವಿರದ ಗಡಿ ದಾಟಿದ ಅಡುಗೆ ಅನಿಲದ ಬೆಲೆ 900 ರೂಪಾಯಿಗಳನ್ನು ತಲುಪಿದೆ. ಅದೇ ರೀತಿ ಉಜ್ವಲ ಯೋಜನೆ (PM Ujjwala Yojana) ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಬಡವರಿಗೆ ನೀಡಲಾಗುವುದು ಇದರ ಜೊತೆಗೆ ಇಂಥವರಿಗೆ 300 ರೂಪಾಯಿಗಳ ಸಬ್ಸಿಡಿ ನೀಡಲಾಗಿದ್ದು ಕೇವಲ 603 ರೂಪಾಯಿಗಳಿಗೆ ಅಡುಗೆ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು.
6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ಸಬ್ಸಿಡಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಕೆ ವೈ ಸಿ ಕಡ್ಡಾಯ! (KYC mandatory for Ujjwala scheme)
ನಿಮಗೆಲ್ಲಾ ತಿಳಿದಿರುವಂತೆ ಆಧಾರ್ ಕಾರ್ಡ್ (Aadhaar card) ಹೊಂದಿರುವವರು ಇತರ ಯಾವುದೇ ಚಟುವಟಿಕೆ ಮಾಡಲು ಕೂಡ ಆಧಾರ್ ಲಿಂಕ್ ಮಾಡಿಕೊಳ್ಳಬೇಕು. ಉದಾಹರಣೆಗೆ ಬ್ಯಾಂಕ್ ಕೆಲಸಕ್ಕೆ ಬ್ಯಾಂಕೆ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿರಬೇಕು.
ಅದೇ ರೀತಿ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಆರೋಗ್ಯ ಕಾರ್ಡ್ ಹೀಗೆ ಪ್ರತಿಯೊಂದಕ್ಕೂ ಆಧಾರ್ ಲಿಂಕ್ (Aadhaar link for Ujjwala Yojana) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಅದೇ ರೀತಿ ಉಜ್ವಲ ಯೋಜನೆಯ ಅಡಿಯಲ್ಲಿ ಯಾರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದಾರೋ ಅವರು ಇನ್ನು ಮುಂದೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಎಂದಾದರೆ ಗ್ಯಾಸ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಹೋಗಿ ಲಿಂಕ್ ಮಾಡಿಸಬಹುದು.
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್
ಇತರ ದೇಶಗಳಲ್ಲಿ ಎಷ್ಟಿದೆ ಗೊತ್ತಾ ಸಿಲಿಂಡರ್ ಬೆಲೆ?
ನಾವು ನಮ್ಮ ದೇಶದಲ್ಲಿ ಮಾತ್ರ ಹಣದುಬ್ಬರದ ಸಮಸ್ಯೆ ಇದೆ, ಹೀಗಾಗಿ ಎಲ್ಲಾದರ ಬೆಲೆ ಏರಿಕೆ ಆಗಿದೆ ಎಂದು ಭಾವಿಸುತ್ತೇವೆ ಆದರೆ ಇತರ ರಾಷ್ಟ್ರಗಳಲ್ಲಿ ಭಾರತಕ್ಕಿಂತಲೂ ಅತಿ ಹೆಚ್ಚು ಬೆಲೆಗೆ ಕೆಲವು ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಗ್ಯಾಸ್ ಸಿಲಿಂಡರ್ ದರ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ಎನ್ನಬಹುದು. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಇತರ ದೇಶಗಳಲ್ಲಿ ಗ್ಯಾಸ್ ಸಿಲೆಂಡರ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಪ್ರತಿ ಸಿಲಿಂಡರ್ ದರ 1033 ರೂ.
ನೇಪಾಳದಲ್ಲಿ ಪ್ರತಿ ಸಿಲಿಂಡರ್ ದರ 1,198 ರೂ.
ಪಾಕಿಸ್ತಾನದಲ್ಲಿ ಪ್ರತಿ ಸಿಲಿಂಡರ್ ದರ 1059 ರೂ.ಇದೆ.
ಭಾರತದಲ್ಲಿ ಪ್ರತಿ ಸಿಲೆಂಡರ್ ದರ 900ರಿಂದ 603 ರೂ. (14.2 ಕೆಜಿ ಸಿಲಿಂಡರ್ ಸಬ್ಸಿಡಿ ಆಧಾರದ ಮೇಲೆ)
ಮಹಿಳೆಯರಿಗಾಗಿಯೇ ಮೀಸಲಿರುವ ಈ ಯೋಜನೆಗಳಲ್ಲಿ ಗಳಿಸಬಹುದು ಲಕ್ಷ ಲಕ್ಷ ಆದಾಯ
ಈ ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಲಭ್ಯವಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
BPL card holders can get gas cylinder for just Rs 603
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.